ಉಚ್ಚಿಲದಲ್ಲಿ ಪಾನಮತ್ತರ ವಿರುದ್ಧ ಪೊಲೀಸ್ ಕ್ರಮ

ಮೇಲಾಧಿಕಾರಿಗಳ ಸೂಚನೆಯಂತೆ ಫೀಲ್ಡ್ ಗೆ ಇಳಿದ ಪಡುಬಿದ್ರಿ ಪೊಲೀಸರಿಗೆ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದವರನ್ನು ಪತ್ತೆ ಹಚ್ಚಿದ್ದಾರೆ. ಪಡುಬಿದ್ರಿ ಎಸ್ಸೈ ಪುರುಷೋತ್ತಮ ತಂಡ ತಡರಾತ್ರಿ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ಯಚರಣೆ ಆರಂಭಿಸಿದಾಗ ಬಹುತೇಕ ದ್ವಿಚಕ್ರ ಸವಾರರು ಮದ್ಯ ಸೇವನೆ ಮಾಡಿರುವುದು ಪರೀಕ್ಷೆಯಿಂದ ಕಂಡು ಬಂದಿದೆ. ಇದೀಗ ಹಲವರ ವಿರುದ್ಧ ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಪಘಾತ ಪ್ರಕರಣಗಳ ಸಂಖ್ಯೆ ಈ ಪ್ರದೇಶದಲ್ಲಿ ಹೆಚ್ಚಳ ಕಂಡು ಬರುತ್ತಿದ್ದರೂ, ಮದ್ಯ ಸೇವಿಸಿ ವಾಹನ ಚಲಾಯಿಸುವವರ ಸಂಖ್ಯೆ ಕಡಿಮೆಯಾಗದಿರುವುದು ಬಾರೀ ಅಪಾಯಕಾರಿ ವಿಚಾರ, ಕೇವಲ ದ್ವಿಚಕ್ರ ಮಾತ್ರವಲ್ಲ ಕಾರು ಸಹಿತ ಘನ ವಾಹನಗಳ ಚಾಲಕರನ್ನೂ ಇಂಥಹ ಪರೀಕ್ಷೆಗೆ ಒಳ ಪಡಿಸಿ ಅವರ ವಿರುದ್ಧ ಸೂಕ್ತ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬುದು ಸಾರ್ವಜನಿಕರು ಆಗ್ರಹವಾಗಿದೆ.