ಮುಸ್ಲಿಮರ ವಿರುದ್ಧ ದ್ವೇಷ ಹರಡುವಿಕೆ ತಡೆಗೆ ಏಕತೆ ಮಂತ್ರ : ಚಿಂತಕ ಪ್ರೊ. ಅಪೂರ್ವಾನಂದ ಅಭಿಪ್ರಾಯ
ಹಿಂದೂಗಳಲ್ಲಿ ಮುಸ್ಲಿಂ ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡುವ ಅಭಿಯಾನ ದೇಶದಲ್ಲಿ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಇದನ್ನು ಮಣಿಸಬೇಕಾದ ಐಕ್ಯತೆ ರೂಪಿಸುವ ಕಲೆಗಾರಿಕೆಯನ್ನು ರೂಢಿಸಿಕೊಳ್ಳಬೇಕಿದೆ ಎಂದು ಚಿಂತಕ ದೆಹಲಿ ವಿಶ್ವವಿದ್ಯಾಲಯದ ಪ್ರೊ. ಅಪೂರ್ವಾನಂದ ಅಭಿಪ್ರಾಯಪಟ್ಟರು.
ನಗರದ ಬಲ್ಮಠದ ಬಿಷಪ್ ಜತ್ತನ್ನ ಸಭಾಂಗಣದಲ್ಲಿಂದು ಅವರು ಸಮದರ್ಶಿ ವೇದಿಕೆ, ಹೊಸತು ಪತ್ರಿಕೆ ಮತ್ತು ಎಂ.ಎಸ್.ಕೃಷ್ಣನ್ ಸ್ಮಾರಕ ಟ್ರಸ್ಟ್ ಸಹಯೋಗದೊಂದಿ ಹಮ್ಮಿಕೊಂಡಿದ್ದ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ದಲ್ಲಿಂದು ವಿವರಿಸಿದ್ದಾರೆ. ಮನುಷ್ಯನ ಮನಶಾಸ್ತ್ರದ ಪ್ರಕಾರ ಆತನಲ್ಲಿ ಹುದಗಿರುವ, ಭಯ, ಆತಂಕ, ಖಿನ್ನತೆ ಸೇರಿದಂತೆ ಆತನ ಮಾನಸಿಕ ದೌರ್ಬಲ್ಯವನ್ನು ಎದುರಿಸಲು ಇನ್ನೊಬ್ಬರನ್ನು ದ್ವೇಷಿಸಲು ಆರಂಭಿಸುತ್ತಾನೆ. ದ್ವೇಷ ಸಹಜವಾಗಿ ಬಂದಿರುವ ಗುಣವಲ್ಲ. ದ್ವೇಷ ಮನುಷ್ಯನೊಳಗಿನ ನ್ಯೂನತೆಯಿಂದ ಉತ್ಪಾದನೆಯಾಗಿದೆ. ದ್ವೇಷ ಹುಟ್ಟು ಹಾಕುವ ವ್ಯಕ್ತಿ, ಸಂಘಟನೆಗಳಿಂದ ಸಮಾಜಕ್ಕೆ ಸಾಕಷ್ಟು ಹಾನಿಯಾಗುತ್ತಿದೆ. ದೇಶದಲ್ಲಿ ಇಂತಹ ಸಾಕಷ್ಟು ಘಟನೆಗಳನ್ನು ನಾವು ಕಾಣಬಹುದಾಗಿದೆ.
ದಿ.ಬಿ.ವಿ.ಕಕ್ಕಿಲಾಯರು ಜನಸಾಮಾನ್ಯರು, ಕಾರ್ಮಿಕರ ಜೊತೆ ಸ್ಪಂದಿಸಿರುವ ರೀತಿ ನಮಗೆ ಮಾದರಿಯಾಗಿದೆ ಎಂದರು.
ಸಮಾರಂಭದಲ್ಲಿ ಡಾ. ಶ್ರೀನಿವಾಸ ಕಕ್ಕಿಲಾಯ ಸ್ವಾಗತಿಸಿದರು. ಡಾ.ಬಾಲ ಸರಸ್ವತಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ನಾಗೇಶ್ ಕಲ್ಲೂರು ವಂದಿಸಿದರು.