’ಪೂವರಿ’ ಪತ್ರಿಕೆಗೆ ರಾಜ್ಯ ಗಡಿನಾಡ ಧ್ವನಿ ಮಾಧ್ಯಮ ಪ್ರಶಸ್ತಿ
ಪುತ್ತೂರು: ಗಡಿನಾಡ ಧ್ವನಿ, ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ರಿ., ಆರ್ಲಪದವು ಹಾಗೂ ಇತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯುವ 6ನೇ ಕರ್ನಾಟಕ ಗಡಿನಾಡ ಸಮ್ಮೇಳನದ ’ಗಡಿನಾಡ ಧ್ವನಿ ರಾಜ್ಯ ಮಾಧ್ಯಮ ಪ್ರಶಸ್ತಿಗೆ 2014 ರಲ್ಲಿ ಆರಂಭಿಸಲಾದ ವಿಜಯ್‌ಕುಮಾರ್ ಭಂಡಾರಿ ಹೆಬ್ಬಾರಬೈಲು ಪ್ರಧಾನ ಸಂಪಾದಕತ್ವದಲ್ಲಿ ಹೊರಡುತ್ತಿರುವ ಒಂದುವರೆ ಕೋಟಿ ತುಳುವರ ಏಕೈಕ ತುಳು ಮಾಸಿಕ ಪತ್ರಿಕೆ ’ಪೂವರಿ’ ಆಯ್ಕೆಯಾಗಿದೆ.ಫೆ. 25ರಂದು ಪುತ್ತೂರು ತಾಲೂಕಿನ ಒಡ್ಯ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ 6ನೇ ಕರ್ನಾಟಕ ಗಡಿನಾಡ ಸಮ್ಮೇಳನ-2023ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಈ ಮಾಧ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಗಡಿನಾಡ ಶ್ರೆಯೋಭಿವೃದ್ಧಿ ಟ್ರಸ್ಟ್ ಸಂಚಾಲಕ, ಸಮ್ಮೇಳನದ ರೂವಾರಿ ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು, ಟ್ರಸ್ಟ್ ಕಾರ್ಯದರ್ಶಿ ಕೆ. ಈಶ್ವರ ಭಟ್ ಕಡಂದೇಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.