ತಿರುಪತಿ ಕ್ಷೇತ್ರದ ಭಕ್ತಿ ವಾಹಿನಿಯ ನಿರ್ದೇಶಕರಾಗಿ ಡಾ.ವಸಂತ ಕವಿತಾ ನೇಮಕ

ತಿರುಪತಿ ಕ್ಷೇತ್ರದ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿ ಡಾ.ವಸಂತ ಕವಿತ ಅವರು ನೇಮಕಗೊಂಡಿದ್ದಾರೆ.
ತಿರುಪತಿ ಕ್ಷೇತ್ರದ ಭಕ್ತಿ ಚಾನೆಲ್ ಗೆ ವಸಂತ ಕವಿತಾ ಸೇರಿದಂತೆ ನಾಲ್ಕು ಮಂದಿ ಹೊಸ ನಿರ್ದೇಶಕರ ನೇಮಕಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ‌ಅನುಮೋದನೆ ನೀಡಿದೆ.ಬೆಂಗಳೂರಿನವರಾಗಿರುವ ಶ್ರೀಮತಿ ವಸಂತ ಕವಿತಾ ಅವರು ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಅವರ ಮೊಮ್ಮಗಳು . ವಸಂತ ಕವಿತಾ ಅವರು ಅನೇಕ ಸಮಾಜಮುಖಿ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು , ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದವರು .

ವಸಂತ ಕವಿತಾ ಅವರು ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ನ ಕರ್ನಾಟಕ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್ಪೇರ್ ಫೌಂಡೇಶನ್ ‌ನ ಸಂಸ್ಥಾಪಕರಾಗಿದ್ದಾರೆ. ಹೊಸದಿಲ್ಲಿಯ ಇಂಡಿಯಾ ಇಂಟರ್ ನ್ಯಾಶನಲ್ ಸೆಂಟರ್ ನ ನಾಮ ನಿರ್ದೇಶಿತ ಸದಸ್ಯರಾಗಿ, ಹೊಸ ದಿಲ್ಲಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ನ ನಾಮ ನಿರ್ದೇಶಿತ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಸಂತ ಕವಿತಾ ಅವರು ಬಹುಮುಖ್ಯವಾಗಿ ಮಹಿಳೆಯರ ಸಬಲೀಕರಣ ಮತ್ತು ಯುವಜನ ತರಬೇತಿ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ.ವಸಂತ ಕವಿತಾ ಅವರು ಭಕ್ತಿ ಟಿ.ವಿ.ವಾಹಿನಿಯ ನಿರ್ದೇಶಕರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ಮಾಧ್ಯಮ ಸಂಘಟನೆಗಳು , ಪತ್ರಕರ್ತರ ಸಂಘಟನೆಗಳು ಅಭಿನಂದಿಸಿವೆ.

Related Posts

Leave a Reply

Your email address will not be published.