ಮೂಡುಬಿದಿರೆ : ಪಲ್ಸ್ ಪೋಲಿಯೋ ಅಭಿಯಾನದಂಗವಾಗಿ ಇಲ್ಲಿನ ರೋಟರಿ ಕ್ಲಬ್ ಸಹಯೋಗದಲ್ಲಿ ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪುಟಾಣಿ ಮಕ್ಕಳಿಗೆ ಎರಡು ಹನಿ ಪೋಲಿಯೋ ಡ್ರಾಪ್ಸ್ ನ್ನು ಹಾಕಲಾಯಿತು.

ಮೂಡುಬಿದಿರೆ ರೋಟರಿ ಕ್ಲಬ್ ನ ಅಧ್ಯಕ್ಷ ನಾಗರಾಜ್ ಅವರು ಆಗಮಿಸಿದ ಮೊದಲ ಮಗುವಿಗೆ ಡ್ರಾಪ್ಸ್ ಹಾಕುವ ಮೂಲಕ ಚಾಲನೆ ನೀಡಿದರು.
ಹಿರಿಯ ವಕೀಲ, ರೋಟರಿ ಕ್ಲಬ್ ನ ಸದಸ್ಯ ಕೆ. ಆರ್. ಪಂಡಿತ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಖಾದರ್ ನದಾಫ್, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಕ್ಷತಾ ನಾಯಕ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯೆ ಸುಪ್ರಿಯಾ ಡಿ. ಶೆಟ್ಟಿ, ರೋಟರಿ ಸದಸ್ಯರಾದ ಸಿ. ಹೆಚ್ ಗಫೂರ್, ಉದಯಕುಮಾರ್,ಸೂರಜ್ ಬನ್ನಡ್ಕ, ಸುರೇಶ್, ಡಾ. ಮುರಳೀಕೃಷ್ಣ, ಡಾ. ರಮೇಶ್, ನಾರಾಯಣ ಪಿ. ಎಂ, ಜಯರಾಮ್ ಕೋಟ್ಯಾನ್, ಡಾ. ಸದಾನಂದ, ಸದಾಶಿವ ರಾವ್ ಮತ್ತಿತರರಿದ್ದರು.


