HomeFresh Newsಕೆಂಪೇಗೌಡರು ಒಕ್ಕಲಿಗ ಸಮಾಜಕ್ಕೆ ಮಾತ್ರ ಸೀಮಿತವಲ್ಲ : ಶ್ರೇಯಸ್ ಎಂ ಪಟೇಲ್

ಕೆಂಪೇಗೌಡರು ಒಕ್ಕಲಿಗ ಸಮಾಜಕ್ಕೆ ಮಾತ್ರ ಸೀಮಿತವಲ್ಲ : ಶ್ರೇಯಸ್ ಎಂ ಪಟೇಲ್

ಹಾಸನ :- ನಾಡಪ್ರಭು ಕೆಂಪೇಗೌಡ ಅವರು ಒಕ್ಕಲಿಗ ಸಮಾಜಕ್ಕೆ ಮಾತ್ರ ಸೀಮಿತವಲ್ಲ ಎಲ್ಲಾ ಸಮುದಾಯಗಳಿಗೂ ವಿಶೇಷವಾದ ಕೊಡುಗೆ ನೀಡಿದ ಮಹಾನ್ ಪುರುಷ ಎಂದು ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ತಿಳಿಸಿದ್ದಾರೆ.

ಹಾಸನಾಂಬ ಕಲಾಕ್ಷೇತ್ರದಲ್ಲಿ ಇಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
ದೇಶ ಮತ್ತು ರಾಜ್ಯಗಳು ಬೆಂಗಳೂರು ರಾಜಧಾನಿ ಮೇಲೆ ಅವಲಂಬಿತವಾಗಿವೆ ಹಾಗೂ ಬೆಂಗಳೂರು ರಾಜಧಾನಿಯನ್ನು ಇಡೀ ದೇಶ ತಿರುಗಿ ನೋಡುವಂತಹ ಕೆಲಸ ಮಾಡಿರೋದು ಕೆಂಪೇಗೌಡರು ಎಂದರು.

ಸಮಾಜದಲ್ಲಿ ಎಲ್ಲರೂ ಒಂದಾಗಿ ಕೆಂಪೇಗೌಡ ಅವರ ಆದಿಯಲ್ಲಿ ನಡೆಯುವುದು ಸಮಾಜದ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾ ಗಿದೆ ಎಂದು ತಿಳಿಸಿದರು.

ಕೆಂಪೇಗೌಡ ಅವರ ದೂರ ದೃಷ್ಟಿಯಿಂದ ನಿರ್ಮಾಣವಾದ ಬೆಂಗಳೂರಿನಲ್ಲಿ ಅತ್ಯಂತ ಸುಭಿಕ್ಷವಾಗಿ ಜನರು ನೆಲೆಸಿದ್ದಾರೆ. ನಾಡ ಪ್ರಭು ಕೆಂಪೇಗೌಡ ಅವರು ನಮ್ಮ ಸಮಾಜದ ಹೆಮ್ಮೆ ನಾಯಕ ಎಂದರು.

ಶಾಸಕರಾದ ಹೆಚ್‌.ಪಿ ಸ್ವರೂಪ್ ಪ್ರಕಾಶ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೆಂಪೇಗೌಡ ಅವರ ಮಾರ್ಗದರ್ಶನಗಳನ್ನು ಅನುಸರಿಸುವ ಮೂಲಕ ಸರ್ಕಾರಿ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿ ಬಡವರಿಗೆ ಸಹಾಯ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಮಾತನಾಡಿ ನಾಡ ಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಅತ್ಯಂತ ಸಡಗರ, ಸಂತೋಷ, ಸಂಭ್ರಮದಿಂದ ಅದ್ದೂರಿ ಯಾಗಿ ಆಚರಿಸುತ್ತಿದ್ದೇವೆ. ಕೆಂಪೇಗೌಡ ಅವರ ಆಡಳಿತ ಪ್ರತಿಯೊಬ್ಬ ಪ್ರಜೆ ಮನಸ್ಸಿನಲ್ಲಿ ನೆಲೆಸಿದೆ.ಸಮಾಜಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಮೆಲುಕು ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಎಂದರು.

ಕೆರೆ ಕಟ್ಟೆಗಳು, ಕಲ್ಯಾಣಿಗಳ ನಿರ್ಮಾಣ ಹಾಗೂ ಸಾಲು ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ದೂರದೃಷ್ಟಿಯಿಂದ ಹಾಗೂ ಸಾಮಾಜಿಕ ಕಳಕಳಿಯಿಂದ ಜಾತ್ಯಾತೀತವಾಗಿ ಪ್ರತಿ ಕುಲಕಸುಬುಗಳಿಗೆ ಆದ್ಯತೆ ನೀಡಿ ಪೇಟೆಗಳನ್ನು ನಿರ್ಮಾಣ ಮಾಡಿಸಿದರು ಎಂದು ತಿಳಿಸಿದರು

ಹಾಸನ ಮತ್ತು ಕೊಡಗು ಜಿಲ್ಲೆ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿಗಳಾದ ಪರಮಪೂಜ್ಯ ಶ್ರೀ ಶಂಭು ನಾಥ ಸ್ವಾಮೀಜಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರತಿ ಸಮುದಾಯದ ಜನರು ಕೆಂಪೇಗೌಡ ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.

ಹದಿನಾರನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿ ಆಡಳಿತ ನಡೆಸಿದ ಕೆಂಪೇಗೌಡರು, ಕೇವಲ ಒಬ್ಬ ಪಾಳೇಗಾರರಾ ಗಿರದೆ, ಅದ್ಭುತ ದೂರದೃಷ್ಟಿ ಹೊಂದಿದ ಮಹಾನ್ ಶಿಲ್ಪಿಯಾಗಿದ್ದರು ಎಂದರು.

ಮಣ್ಣಿನ ಕೋಟೆಯನ್ನು ನಿರ್ಮಿಸುವ ಮೂಲಕ ಸುಂದರವಾದ ಬೆಂಗಳೂರು ನಗರಕ್ಕೆ ಭದ್ರವಾದ ಅಡಿಪಾಯ ಹಾಕಿದ ನಾಡಪ್ರಭು ಕೆಂಪೇಗೌಡ ಅವರು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶುಭಂ ಶುಕ್ಲಾ ಅವರು ಮಾತನಾಡಿ ಕೆಂಪೇಗೌಡ ಅವರ ದೂರ ದೃಷ್ಟಿ ಮತ್ತು ಧೈರ್ಯದಿಂದ ಬೆಂಗಳೂರು ನಗರ ನಿರ್ಮಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಬೇರೆ ರಾಜ್ಯ ಬೇರೆ ಜಿಲ್ಲೆಗಳಿಂದ ಜನರು ಬಂದು ನಮ್ಮ ನಾಡಿನ ಗೌರವವಾದ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ ಎಂದು ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ ಅವರು ಮಾತನಾಡಿ ಜಗತ್ತಿನಲ್ಲಿ ಬೆಂಗಳೂರು ಒಂದು ಪ್ರಮುಖ ನಗರವಾಗಿದ್ದು, ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡ ಅವರ ಜಯಂತಿ ಮಾಡುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.

ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂಬುದು ಅವರ ಜೀವನದ ಆಶಯವಾಗಿತ್ತು ಹಾಗೆಯೇ ನಾವು ಕೂಡ ಅವರ ಮಾರ್ಗದರ್ಶನದಂತೆ ನಡೆಯೋಣ ಎಂದರು.

ಜನಪ್ರಿಯ ಮತ್ತು ದೂರದೃಷ್ಟಿ ಇರುವ ನಾಯಕರು ಹಾಗೂ ಬೆಂಗಳೂರಿನಲ್ಲಿ ಕೆರೆ, ಮಾರುಕಟ್ಟೆ, ಉದ್ಯಾನವನ, ರಸ್ತೆಗಳನ್ನು ನಿರ್ಮಿಸಿವಲ್ಲಿ ಇವರ ಪಾತ್ರ ಅಪಾರವಾದು ದು ಎಂದು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಟೇಲ್ ಶಿವಪ್ಪನವರು ಮಾತನಾಡಿ ಭಾರತ ದೇಶ ಹಾಗೂ ಕರ್ನಾಟಕ ರಾಜ್ಯದಲ್ಲಿ ಬಹಳ ಜನ ರಾಜರು,ನಾಡಪ್ರಭುಗಳು ಇದ್ದರು ಆದರೆ ಕೆಂಪೇಗೌಡ ಅವರು ಕಟ್ಟಿರುವ ಬೆಂಗಳೂರು ನಗರವು ದೇಶ ವಿಖ್ಯಾತಿ ಪಡೆದು ಪ್ರಸಿದ್ಧತೆ ಹೊಂದಿದೆ ಎಂದರು.

ನಾಡಪ್ರಭು ಕೆಂಪೇಗೌಡ ಅವರು ರೈತರಿಗೆ ಮತ್ತು ವ್ಯಾಪಾರಿಕರಿಗೆ ಹೆಚ್ಚಾಗಿ ಸಹಕಾರ ನೀಡುತ್ತಿದ್ದರು ಹಾಗೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು ಎಂದು ತಿಳಿಸಿದರು.

ಇಂದು ಇಡೀ ವಿಶ್ವವೇ ಬೆರಗುಗಾಣುವ ರೀತಿಯಲ್ಲಿ ಮಹಾನಗರವಾಗಿ ಬೆಂಗಳೂರು ಬೆಳೆದಿದೆ ಎಂದರೆ, ಅದಕ್ಕೆ ಅಡಿಪಾಯ ಹಾಕಿದವರು ನಮ್ಮ ಕೆಂಪೇಗೌಡರು ಎಂದರು.

ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರತತ್ವ ಅಧ್ಯಯನ ವಿಭಾಗದ ನಿವೃತ್ತ ಉಪನ್ಯಾಸಕರಾದ ಡಾ. ಎನ್.ಎಸ್ ರಂಗರಾಜು ಅವರು ಕಾರ್ಯಕ್ರಮ ಕುರಿತು ಮಾತನಾಡಿ ಇತಿಹಾಸ ಪುರುಷರಾಗಿದ್ದ ನಾಡ ಪ್ರಭು ಕೆಂಪೇಗೌಡ ಅವರು ವಿಜಯನಗರ ಸಾಮ್ರಾಜ್ಯದ ಪ್ರಭಾವದಿಂದ ಪ್ರೇರಿತರಾಗಿ ಒಂದು ಸುಂದರ ಮತ್ತು ವ್ಯವಸ್ಥಿತ ನಗರವನ್ನು ಕಟ್ಟಲು ಕನಸು ಕಂಡರು. ಅವರು ಕೇವಲ ಒಂದು ನಗರವನ್ನು ನಿರ್ಮಿಸಲಿಲ್ಲ, ಬದಲಿಗೆ ವ್ಯಾಪಾರ, ಕಲೆ ಮತ್ತು ಧಾರ್ಮಿಕ ಕೇಂದ್ರಗಳನ್ನು ಒಳಗೊಂಡ ಮಹಾನಗರಕ್ಕೆ ಅಡಿಪಾಯ ಹಾಕಿದರು.

ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿ, ಸರ್ವರಿಗೂ ಸಮಾನವಾದ ಆಡಳಿತವನ್ನು ನೀಡಿದವರು ಅವರ ಈ ಪರೋಪಕಾರಿ ಗುಣ ಮತ್ತು ಅಭಿವೃದ್ಧಿಯ ದೂರದೃಷ್ಟಿಯೇ ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆಯಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಕರಗ ನಡೆಸುವ ಮೂಲಕ ಜನಪದ ಕಲೆಗೂ ಸಹ ಪ್ರೋತ್ಸಾಹಿಸುತ್ತಿ ದ್ದರು ಎಂದು ತಿಳಿಸಿದರು.

ಕೆಂಪೇಗೌಡರು ಕೃಷಿ ಚಟುವಟಿಕೆಗಳಿಗೆ ಹೆಚ್ಚು ಹೊತ್ತು ನೀಡುತ್ತಿದ್ದರು ಮತ್ತು ರೈತರ ಪರವಾಗಿ ಕೆಲಸ ಮಾಡುತ್ತಿದ್ದರು ಹಾಗೂ ಕೆಂಪೇಗೌಡರಲ್ಲಿದ್ದಂತಹ ಮುಂದಾಲೋಚನೆ ಮತ್ತು ಬುದ್ಧಿವಂತಿಕೆ ಪ್ರತಿಯೊಬ್ಬ ಸಮಾಜದ ನಾಗರಿಕರಲ್ಲೂ ಇರಬೇಕು ಎಂದರು.

ಜಾತಿ, ಧರ್ಮಗಳ ಎಲ್ಲೆಯನ್ನು ಮೀರಿ, ಸರ್ವರಿಗೂ ಸಮಾನವಾದ ಆಡಳಿತವನ್ನು ನೀಡಿದವರು ಅವರ ಈ ಪರೋಪಕಾರಿ ಗುಣ ಮತ್ತು ಅಭಿವೃದ್ಧಿಯ ದೂರದೃಷ್ಟಿಯೇ ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಬೆಳೆಯಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷರಾದ ಬಿ. ಪಿ ಕೃಷ್ಣೆ ಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಹೆಚ್. ಎಲ್ ಮಲ್ಲೇಶ್ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್. ಪಿ ತಾರಾನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments