ದಾಖಲೆಗಾಗಿ ಅಲೆದಾಡಿಸುತ್ತಿದ್ದ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು : ದಾಖಲೆ ಪತ್ರಗಳಿಗಾಗಿ ತಾಲೂಕು ಕಛೇರಿಯಲ್ಲಿ ಅಲೆದಾಟ ಮಾಡುತ್ತಿದ್ದ ಮಹಿಳೆಯ ಅಹವಾಲು ಕೇಳಿದ ಶಾಸಕ ಅಶೋಕ್ ಕುಮಾರ್ ರೈ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಸಣ್ಣ ದಾಖಲೆಗಾಗಿ ಒಂದು ತಿಂಗಳಿನಿಂದ ಅಲೆಡಾಡಿಸುತ್ತಿದ್ದ ವಿಚಾರ ತಿಳಿದ ಶಾಸಕ ಅಶೋಕ್ ಕುಮಾರ್ ರೈ ಮಹಿಳೆಯೊಂದಿಗೆ ಅಧಿಕಾರಿಯ ಕಛೇರಿಗೆ ತೆರಳಿದ್ದರು. ಮಹಿಳೆಯ ದಾಖಲೆ ಪತ್ರಗಳನ್ನು ತಕ್ಷಣವೇ ನೀಡುವಂತೆ ತಾಕೀತು ಮಾಡಿದ್ದಾರೆ. ಇಂಥ ಕೆಲಸಗಳು ಇಂದಿಗೇ ಕೊನೆಯಾಗಬೇಕು, ಬಡವರಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು, ಮುಂದೆ ಇಂಥಹ ಘಟನೆ ನಡೆದಲ್ಲಿ ಸುಮ್ಮನೆ ಕೂರುವುದಿಲ್ಲಎಂದು ಶಾಸಕ ಅಶೋಕ್ ಕುಮಾರ್ ಅಧಿಕಾರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
