ಪೊಲೀಸರ ಕೊಲೆ ಯತ್ನ-ಐವರು ಅಪಹರಣಕಾರರು ಸಿನಿಮೀಯ ಮಾದರಿಯಲ್ಲಿ ಸೆರೆ

ಮಂಗಳೂರಿನಲ್ಲಿ ಸಿನಿಮಾ ರೀತಿಯಲ್ಲಿ ನಡೆದ ಕಿಡ್ನಾಪ್ ಪ್ರಕರಣವೊಂದನ್ನು ಪೊಲೀಸರೂ ಅದೇ ಸ್ಟೈಲ್ ನಲ್ಲಿ ಭೇದಿಸಿದ್ದಾರೆ.ಹಣಕ್ಕಾಗಿ ಇಬ್ಬರನ್ನು ಕಿಡ್ನಾಪ್ ಮಾಡಿ ಡೀಲ್ ಕುದುರಿಸಿದ್ದ ಅಪಹರಣಕಾರರು ದಾರಿ ಮಧ್ಯೆಯೇ ಪೊಲೀಸ್ ಬಲೆಗೆ ಬಿದ್ದಿದ್ದಾರೆ.ಗೋಲ್ಡ್ ಬಿಸ್ಕೇಟ್ ಹಾಗೂ ಹಣ ದೋಚಲು ಯತ್ನಿಸಿದ ಖದೀಮರು ಇದೀಗ ಜೈಲು ಕಂಬಿ ಎಣಿಸಿತ್ತಿದ್ದಾರೆ.
ಹಣಕ್ಕಾಗಿ ಜನ ಏನು ಬೇಕಾದ್ರು ಮಾಡ್ತಾರೆ ಅನ್ನೋದು ಆಗ್ಗಾಗ್ಗೆ ಸಾಬೀತಾಗುತ್ತಿದೆ. ಮಂಗಳೂರಿನಲ್ಲಿ ಇದೇ ರೀತಿ ಹಣದ ಆಸೆಗೆ ಬಿದ್ದು ಇಬ್ಬರನ್ನು ಕಿಡ್ನಾಪ್ ಮಾಡಿದ ಐವರು ಖದೀಮರು ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ.ಸಿನಿಮಾ ರೀತಿಯಲ್ಲಿ ಕಿಡ್ನಾಪ್ ಮಾಡಿ ಹಣ ಸಂಪಾದಿಸಲು ಹೋದ ಕಿಡ್ನಾಪರ್ಸ್ ಇದೀಗ ಪೊಲೀಸರ ಸಿನಿಮಾ ರೀತಿಯ ಕಾರ್ಯಾಚರಣೆಯಿಂದಲೇ ಬಲೆಗೆ ಬಿದ್ದಿದ್ದಾರೆ.ಈ ಸ್ಟೋರಿಯೂ ಇಂಟ್ರಸ್ಟಿಂಗ್ ಆಗಿದ್ದು ಆರಂಭದಲ್ಲಿ ಐವರ ತಂಡವೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾ ಎಂಬಲ್ಲಿನ ನಿವಾಸಿಗಳಾದ ಶಾರೂಕ್ ಹಾಗೂ ನಿಜಾಮುದ್ದೀನ್ ಎಂಬ ಇಬ್ಬರನ್ನು ಅಪಹರಿಸುತ್ತದೆ.ಇವರಿಬ್ಬರ ನಾಪತ್ತೆ ಬಗ್ಗೆ ಮನೆಯವರು ಕಡಬ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ವಿಚಾರಣೆಯನ್ನೂ ನಡೆಸುತ್ತಿದ್ದರು..ಈ ಇಬ್ಬರನ್ನು ಅಪಹರಿಸಲು ಕಾರಣವೂ ಇದೆ.ಅಪಹರಣಕ್ಕೊಳಗಾದ ನಿಜಾಮುದ್ದೀನ್ ನ ಸಂಬಂಧಿ ಶಫೀಕ್ ಎಂಬಾತ ದುಬೈನಲ್ಲಿದ್ದು ಆತ ಗೋಲ್ಡ್ ಬಿಸ್ಕತ್ತು ವ್ಯವಹಾರ ನಡೆಸುತ್ತಿದ್ದ,ಇದರ ಮಾಹಿತಿ ಪಡೆಯಲೆಂದು ನಿಜಾಮುದ್ದೀನ್ ಹಾಗೂ ಶಾರೂಕ್ ನ ನ್ನು ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಆದರೆ ಈ ಇಬ್ಬರಿಗೂ ಗೋಲ್ಡ್ ಬಿಸ್ಕತ್ತು ವ್ಯವಹಾರದ ಬಗ್ಗೆ ಮಾಹಿತಿ ಇರಲಿಲ್ಲ.ಹೀಗಾಗಿ ನಿಜಾಮುದ್ದೀನ್ ನನ್ನು ಬಿಡುಗಡೆ ಮಾಡಿ ಶಾರೂಕ್ ನನ್ನು ಬಿಡದೆ ಕಾರಿನಲ್ಲಿ ಸುತ್ತಾಡಿಸಿಕೊಂಡಿದ್ದರು..ಈ ವೇಳೆಯೇ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾತರೆ..
ಆರೋಪಿಗಳು ಶಾರೂಕ್ ನನ್ನು ಕಾರಿನಲ್ಲಿ ತಿರುಗಾಡಿಸುತ್ತಿದ್ದ ವೇಳೆ ಮಂಗಳೂರು ಗ್ರಾಮಾಂತರ ಪೊಲೀಸರ ವಾಹನ ಸುತ್ತಾಡುತ್ತಿದ್ದು ಅನುಮಾನ ಬಂದಿರೋ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳ ಕಾರನ್ನು ಹಿಂಬಾಲಿಸಿದ್ದರು.ಈ ವೇಳೆ ಆರೋಪಿಗಳು ಕಾರನ್ನು ವೇಗವಾಗಿ ಚಲಿಸಿ ತಪ್ಪಿಸಲು ಪ್ರಯತ್ನಿಸಿದರು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಳ ಕಾರಿಗೆ ಅಡ್ಡ ಹಾಕಿ ನಿಲ್ಲಿಸಿ ವಾಹನ ತಪಾಸಣೆ ನಡೆಸಿದ್ದರು..ಈ ವೇಳೆ ಪೊಲೀಸರಿಗೆ ಹಲ್ಲೆಗೆ ಯತ್ನಿಸಿ ಪರಾರಿಯಾಗಿದ್ದರು.ಕೊನೆಗೂ ಟ್ರೇಸ್ ಮಾಡಿ ಆರೋಪಿಗಳನ್ನು ಬಂದಿಸಿದ್ದು ಈ ವೇಳೆ ಕಿಡ್ನಾಪ್ ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳೂರಿನ ರೌಡಿ ಶೀಟರ್ ತಲ್ಲತ್ ಫೈಝಲ್ನಗರ ಸೂಚನೆಯಂತೆ ಈ ಕೃತ್ಯ ಮಾಡಿದ್ದು ಉಪ್ಪಿನಂಗಡಿಯ ಅಬೂಬಕ್ಕರ್ ಸಿದ್ದಿಕ್(39), ಬಂಟ್ವಾಳದ ಕಲಂದರ್ ಶಾಫಿ(22), ದೇರಳಕಟ್ಟೆಯ ಇರ್ಫಾನ್(38), ಪಾಂಡೇಶ್ವರದ ರಿಯಾಜ್(33) ಮತ್ತು ಬೆಳ್ತಂಗಡಿಯ ಇರ್ಷಾದ್(28) ಅನ್ನುವ ಆರೋಪಿಗಳನ್ನು ಬಂಧಿಸಲಾಗಿದೆ.ಒಟ್ಟಿನಲ್ಲಿಕಿಡ್ನಾಪ್ ಮಾಡಿ ಹಣ ಸಂಪಾದಿಸುತ್ತೇವೆ ಅಂದುಕೊಂಡಿದ್ದ ಖದೀಮರು ಇದೀಗ ಜೈಲು ತಲುಪಿದ್ದಾರೆ.ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಐವರ ಮೇಲೆ ಕೊಲೆಯತ್ನ ಪ್ರಕರಣವೂ ದಾಖಲಾಗಿದೆ.