ಬಿಜೆಪಿ ಕಾರ್ಯಕರ್ತರು ಜೆಡಿಎಸ್‍ಗೆ ಸೇರ್ಪಡೆ
ಚುನಾವಣಾ ಸಂದರ್ಭದಲ್ಲಿ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವುದು ಮಾಮೂಲಿಯಾಗಿದೆ. ಆದರೆ ಈಗಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯ ವೈಖರಿ ಜನರಿಗೆ ಬೇಸತ್ತು ಹೋಗಿದೆ. ಕುಮಾರ ಸ್ವಾಮಿಯ ಪಂಚರತ್ನ ಯೋಜನೆ ಜನರಿಗೆ ಭರವಸೆ ಮೂಡಿದೆ ಇದರಿಂದಾಗಿ ಬೇರೆ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಒಲವು ತೋರಿದ್ದರೆ.
ಈ ಹಿನ್ನೆಲೆ ಪುತ್ತೂರು ವಿಧಾನಸಭಾ ಕ್ಷೇತ್ರದ ಚಿಕ್ಕಮೂಡ್ನೂರ್ ವಾರ್ಡ್‍ನ ತಾರಿಗುಡ್ಡೆಯಲ್ಲಿ ಜೆಡಿಎಸ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀಮತಿ ದಿವ್ಯ ಪ್ರಭಾ ಗೌಡ ಹಾಗೂ ಕೈಲಾಶ್ ಗೌಡರವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ಹಾಗೂ ಬೃಹತ್ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಹಾಗೂ ಕೈಲಾಶ್ ಗೌಡ ಹಾಗೂ ದಿವ್ಯ ಪ್ರಭಾರವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅಬ್ದುಲ್ಲಾ ಕೆದುವಡ್ಕ, ಶಿವ ಸಾಲಿಯಾನ್, ರಾಧಾಕೃಷ್ಣ ಸಾಲಿಯಾನ್, ಆಶ್ರಫ್ ಕೆಮ್ಮಾಯಿ, ಉಸ್ತಾದ್ ಸತ್ತಾರ್ ಮುಸ್ಲಿಯಾರ್ ತಾರಿಗುಡ್ಡೆ, ಜುನೈದ್ ಮತ್ತಿತರರು ಉಪಸ್ಥಿತರಿದ್ದರು.