ಕೆಳ ಮತ್ತು ಮಧ್ಯಮ ವರ್ಗದ ಜನರ ಏಳಿಗೆಯ ದೃಷ್ಠಿಯಲ್ಲಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರುವುದು ಸ್ವಾಗತಾರ್ಹ. ಅಟಲ್ ಟಿಂಕರ್ ಲ್ಯಾಬ್‌ಗಳನ್ನು ಶಾಲೆಗಳಿಗೆ ವಿಸ್ತರಿಸಿರುವುದು, ಆದಾಯ ತೆರಿಗೆ ಪಾವತಿಯ ಮಿತಿಯನ್ನು 12 ಲಕ್ಷ ರೂ.ಗೆ ಏರಿಸಿರುವುದು, ಕಿಸಾನ್ ಕೆಡಿಟ್‌ನ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಸಿರುವುದು ಜೊತೆಗೆ ಪ್ರತಿ ಜಿಲ್ಲಾ
ಆಲೂರು : ಕಳೆದ 40 ವರ್ಷಗಳಿಂದಲೂ ಸಹ ಬಿಜೆಪಿಯ ಕಾರ್ಯಕರ್ತನಾಗಿ ತಳಮಟ್ಟದಿಂದ ತಾಲೂಕಿನಲ್ಲಿ ಪಕ್ಷಕಟ್ಟಲು ಸಮವಹಿಸುತ್ತಿದ್ದ ಹಿರಿಯ ಮುಖಂಡರಾದ ಧರ್ಮರಾಜ್ ಬಿಜೆಪಿ ತೊರೆದು ಭವಾನಿ ರೇವಣ್ಣ ರವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.ಆಲೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಹಾಗೂ ಶಾಸಕರು ನಡೆಸಿದ ರೋಡ್ ಶೋನಲ್ಲಿ ಭಾಗವಹಿಸಿದ ಭವಾನಿ ರೇವಣ್ಣ ರವರ ಸಮ್ಮುಖದಲ್ಲಿ ಹಲವಾರು ಜೆಡಿಎಸ್ ಕಾರ್ಯಕರ್ತರ ಎದುರು ಧರ್ಮರಾಜ್ ರವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು
ಸುಂಕದಕಟ್ಟೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡ ಅವರು ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳಿಗೆ ಶಕ್ತಿ ತುಂಬಿದರು.. ಹೆಚ್.ಡಿ.ದೇವೇಗೌಡರು ಸುಂಕದಕಟ್ಟೆ ಬಜಪೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಜೊತೆಗೆ ಮಂಗಳೂರು ಉತ್ತರ ಅಭ್ಯರ್ಥಿ ಮೊಯ್ದೀನ್ ಭಾವ ಮತ್ತು ಮಂಗಳೂರು ಕೇಂದ್ರ ಅಭ್ಯರ್ಥಿ ಸುಮತಿ ಹೆಗ್ಡೆ, ಗಣೇಶ್ ಉಡುಪ, ಫರಾಕ್ ಅಬ್ದುಲ್ಲಾ ಸೇರಿದಂತೆ ಹಲವರು
ಕರಾವಳಿಯಲ್ಲಿ ಚುನಾವಣಾ ಕಾವು ರಂಗೇರುತ್ತಿದ್ದಂತೆ ಎಲ್ಲಾ ಪಕ್ಷದ ಪ್ರಚಾರ ಕಾರ್ಯ ಭಾರದಿಂದ ಸಾಗುತ್ತಿದೆ.ಅದರಂತೆ ಪುತ್ತೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಪಲ್ಲತ್ತೂರು, ಪಡುವನ್ನೂರು, ಮುಂಡೂರುನಲ್ಲಿ ತನ್ನ ಕಾರ್ಯಕರ್ತರೊಂದಿಗೆ ಬಿರುಸಿನ ಪ್ರಚಾರ ಕಾರ್ಯ ಹಾಗೂ ಮತಯಾಚನೆ ನಡೆಸಿದರು.
ಚುನಾವಣಾ ಸಂದರ್ಭದಲ್ಲಿ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವುದು ಮಾಮೂಲಿಯಾಗಿದೆ. ಆದರೆ ಈಗಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಕಾರ್ಯ ವೈಖರಿ ಜನರಿಗೆ ಬೇಸತ್ತು ಹೋಗಿದೆ. ಕುಮಾರ ಸ್ವಾಮಿಯ ಪಂಚರತ್ನ ಯೋಜನೆ ಜನರಿಗೆ ಭರವಸೆ ಮೂಡಿದೆ ಇದರಿಂದಾಗಿ ಬೇರೆ ಪಕ್ಷದ ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಒಲವು ತೋರಿದ್ದರೆ. ಈ ಹಿನ್ನೆಲೆ ಪುತ್ತೂರು ವಿಧಾನಸಭಾ ಕ್ಷೇತ್ರದ ಚಿಕ್ಕಮೂಡ್ನೂರ್ ವಾರ್ಡ್‍ನ ತಾರಿಗುಡ್ಡೆಯಲ್ಲಿ ಜೆಡಿಎಸ್ ವಿಧಾನಸಭಾ
ಮಂಗಳೂರು: “ಮಂಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷದಿಂದ ಕಣಕ್ಕಿಳಿಸಿದ್ದ ನನ್ನನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ತಂಡವೊಂದು ಅಪಹರಿಸಿ ಕರೆದೊಯ್ದು ಬಲವಂತವಾಗಿ ನಾಮಪತ್ರ ಹಿಂತೆಗೆಯುವಂತೆ ಮಾಡಿದ್ದಾರೆ” ಎಂದು ಮಂಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ.“ನಾನು ಎಲ್ಲೂ ಓಡಿಹೋಗಿಲ್ಲ, ನನ್ನನ್ನು ಅಪಹರಿಸಿ ಬೆದರಿಸಿ ನನ್ನಿಂದ ನಾಮಪತ್ರ ಹಿಂದೆ ಪಡೆಯುವಂತೆ ಮಾಡಲಾಗಿದೆ. ನನಗೆ ಯಾವುದೇ
ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ವಂಚಿತವಾದ ಬಳಿಕ ತೀವ್ರ ಅಸಮಾಧಾನದಿಂದಿದ್ದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಜೆಡಿಎಸ್‍ಗೆ ಸೇರ್ಪಡೆಗೊಂಡಿದ್ದಾರೆ. ಇದೀಗ ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೇ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಮೊಯ್ದಿನ್ ಬಾವಾ ಅವರು, ಅನ್ಯಾಯದ ಪರಮಾವಧಿ, ದುಡ್ಡಿನ ಮದ ಯಾರಿಗೂ ಇರಬಾರದು. ಇತಿಹಾಸವುಳ್ಳ
ಮಂಗಳೂರು ಉತ್ತರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕ ಮೊಯ್ದಿನ್ ಬಾವ ಅವರು ಜೆಡಿಎಸ್ ಪಕ್ಷ ಸೇರಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ನನಗೆ ಅನ್ಯಾಯವಾಗಿದೆ ಎಂದ ಅವರು, ಮಂಗಳೂರು ಉತ್ತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತು ಮಾಜಿ ಶಾಸಕ ಮೊಹಿಯುದ್ದಿನ್ ಬಾವ ಅವರ ನಡುವಣ ತೀವ್ರ
ಕಾಪು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಬೀನ ಸಮದ್ ಕಾರ್ಯಕರ್ತರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಸ್ಥಳೀಯ ದೈವಸ್ಥಾನ, ದೇವಸ್ಥಾನ, ಮಸೀದಿ, ಚರ್ಚ್ ಗಳಿಗೆ ತೆರಳಿ ಪ್ರಾರ್ಥಿಸಿ ಬಳಿಕ ಕಾಪು ತಾಲೂಕು ಆಢಳಿತ ಸೌದಕ್ಕೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಯೋಗೀಶ್ ಶೆಟ್ಟಿ, ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ “ಜನತಾ ಪರ್ವ”
ಕಾಪುವಿನ ಹೃದಯ ಭಾಗದಲ್ಲಿರುವ ಮಹಾಬಲ ಮಾರ್ಲ್ ಖಾಸಗಿ ಕಟ್ಟಡದಲ್ಲಿ ಜೆಡಿಯಸ್ ಪಕ್ಷದ ಚುನಾವಣಾ ಕಛೇರಿಯನ್ನು ಜಿಲ್ಲಾ ಅಧ್ಯಕ್ಷ ಯೋಗೀಶ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಪಕ್ಷ ಈ ಬಾರಿ ಒರ್ವ ಸಮಾಜಮುಖಿ ಕೆಲಸ ಕಾರ್ಯಗಳನ್ನು ನಡೆಸುತ್ತಿರುವ ಸಮರ್ಥ ಅಭ್ಯರ್ಥಿ ಸಬೀನ ಸಮದ್ ರವರನ್ನು ಕಣಕಿಳಿಸಿದ್ದು, ಅವರು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಇವರ ಗೆಲುವಿಗೆ ನಮ್ಮ ರಾಜ್ಯ ನಾಯಕ ಕುಮಾರಸ್ವಾಮಿಯವರ ಅಭಿವೃದ್ಧಿ ಕಾರ್ಯಗಳೇ ಶ್ರೀ ರಕ್ಷೆಯಾಗಲಿದೆ