HomeFresh Newsಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಬಾಲ ಪ್ರತಿಭೆ ನಟಿಸಿದ ʻಮಿಥ್ಯʼ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಬಾಲ ಪ್ರತಿಭೆ ನಟಿಸಿದ ʻಮಿಥ್ಯʼ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ

ಮಂಗಳೂರು: ರಾಷ್ಟ್ರಪ್ರಶಸ್ತಿ ಪಡೆದ ‘ಮಿಥ್ಯ’ ಚಲನಚಿತ್ರದಲ್ಲಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಮಾ. ಅವಿಶ್ ಶೆಟ್ಟಿ ನಟಿಸಿದ್ದು, ಈತನ ಸಹೋದರ ಅತೀಶ್‌ ಶೆಟ್ಟಿ ಅದೇ ಚಿತ್ರದಲ್ಲಿ ನಟಿಸಿ ಉತ್ತಮ ಬಾಲನಟ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದು, ಆತನ ಜತೆಗೆ ಮಾ.ಅವಿಶ್‌ ಶೆಟ್ಟಿ ನಟಿಸಿರುವುದು ಸಂಸ್ಥೆಗೆ ಹೆಮ್ಮೆಯನ್ನು ತಂದುಕೊಟ್ಟಿದೆ.

‘ಮಿಥ್ಯ’ ಚಿತ್ರವು ಅತ್ಯುತ್ತಮ ಕನ್ನಡ ಚಲನಚಿತ್ರ, ಅತ್ಯುತ್ತಮ ಬಾಲನಟ, ಹಾಗೂ ಅತ್ಯುತ್ತಮ ಪೋಷಕ ನಟಿ ವಿಭಾಗಗಳಲ್ಲಿ ಒಟ್ಟು ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ನಿಜ ಜೀವನದಲ್ಲಿಯೂ ಅತೀಶ್‌ ಶೆಟ್ಟಿ ಮತ್ತು ಮಾ.ಅವೀಶ್‌ ಶೆಟ್ಟಿ ಸಹೋದರರಾಗಿದ್ದಾರೆ. ಇಬ್ಬರು ಸಹೋದರರು ಒಂದೇ ಚಿತ್ರದಲ್ಲಿ ಅಭಿನಯಿಸಿರುವುದು ವಿಶೇಷ ಆಕರ್ಷಣೆಯಾಗಿದೆ.

ಈ ಸಾಧನೆಗೆ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪ್ರಾಂಶುಪಾಲರಾದ ಫಾ. ರೋಹನ್ ಡಿ ಅಲ್ಮೇಡ ಎಸ್.ಜೆ ,ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಅವಿಶ್ ಶೆಟ್ಟಿ, ಅವರ ಪೋಷಕರು, ಖ್ಯಾತ ನಿರ್ದೇಶಕ ಸುಮಂತ್ ಭಟ್, ನಿರ್ಮಾಪಕ ರಕ್ಷಿತ್ ಶೆಟ್ಟಿ, ‘ಮಿಥ್ಯ’ ಚಿತ್ರದ ಕಲಾವಿದರು ಹಾಗೂ ತಾಂತ್ರಿಕ ವರ್ಗದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments