HomeFresh Newsಇಂದಿನಿಂದ ಆಸ್ತಿ ನೋಂದಣಿ ಶುಲ್ಕ ದುಪ್ಪಟ್ಟು : ಕಂದಾಯ ಇಲಾಖೆ ಆದೇಶ

ಇಂದಿನಿಂದ ಆಸ್ತಿ ನೋಂದಣಿ ಶುಲ್ಕ ದುಪ್ಪಟ್ಟು : ಕಂದಾಯ ಇಲಾಖೆ ಆದೇಶ

ರಾಸ್ತಿಗಳ ಮೇಲಿನ ವ್ಯವಹಾರಗಳ ದಸ್ತಾವೇಜುಗಳ ನೋಂದಣಿ ಶುಲ್ಕವನ್ನು ಶೇ 1ರಿಂದ ಶೇ 2ಕ್ಕೆ ಏರಿಸಿ ರಾಜ್ಯ ಸರ್ಕಾರವು ಆದೇಶಿಸಿದೆ. ಭಾನುವಾರದಿಂದಲೇ (ಆಗಸ್ಟ್‌ 31) ಇದು ಜಾರಿಯಾಗಲಿದ್ದು, ಸಾರ್ವಜನಿಕರು ಆಸ್ತಿ ನೋಂದಣಿಗೆ ಹೆಚ್ಚು ಶುಲ್ಕ ತೆರಬೇಕಾಗುತ್ತದೆ.

ಈ ಮೊದಲು ಸ್ಥಿರಾಸ್ತಿ ನೋಂದಣಿ ವೇಳೆ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ 5ರಷ್ಟು ಮುದ್ರಾಂಕ ಶುಲ್ಕ, ಶೇ 0.5ರಷ್ಟು ಸೆಸ್‌, ಶೇ 0.1ರಷ್ಟು ಸರ್ಚಾರ್ಜ್ ಮತ್ತು ಶೇ1ರಷ್ಟು ನೋಂದಣಿ ಶುಲ್ಕ ವಿಧಿಸಲಾಗುತ್ತಿತ್ತು. ಒಟ್ಟಾರೆ ಆಸ್ತಿ ನೋಂದಣಿ ವೇಳೆ, ಅದರ ಮಾರ್ಗಸೂಚಿ ಮೌಲ್ಯದ ಶೇ 6.6ರಷ್ಟು ವೆಚ್ಚವನ್ನು ಭರಿಸಬೇಕಾಗುತ್ತಿತ್ತು.

ಈಗ ನೋಂದಣಿ ಶುಲ್ಕವನ್ನು ಶೇ 2ರಷ್ಟಕ್ಕೆ ಹೆಚ್ಚಿಸಿರುವ ಕಾರಣ ಮುದ್ರಾಂಕ ಶುಲ್ಕ (ಶೇ 5), ಸೆಸ್‌ (ಶೇ 0.5) ಮತ್ತು ಸರ್ಚಾರ್ಜ್‌ (ಶೇ 0.1) ಸೇರಿ ಆಸ್ತಿಯ ಮಾರ್ಗಸೂಚಿ ಮೌಲ್ಯದ ಶೇ 7.6ರಷ್ಟನ್ನು ನೋಂದಣಿ ವೇಳೆ ಭರಿಸಬೇಕಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments