ಕಟೀಲು : ದೇವಿಯ ದರ್ಶನ ಪಡೆದ ನಟಿ ಸಪ್ತಮಿಗೌಡ

ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕಾಂತಾರ ಖ್ಯಾತಿಯ ನಟಿ ಸಪ್ತಮಿಗೌಡ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಇವರನ್ನು ದೇವಳದ ವತಿಯಿಂದ ಪ್ರಧಾನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಗೌರವಿಸಿದರು.ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಪ್ತಮಿ ಗೌಡ ‘ಕಾಂತಾರ ಯಶಸಿಸ್ಸಿನ ಬಗ್ಗೆ ಹೆಮ್ಮೆ ಇದೆ, ತುಳುನಾಡಿನ ದೈವಾರಾಧನೆ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ, ಕಾಂತಾರಾ ಚಿತ್ರದ ನಂತರ ತಿಳಿದುಕೊಂಡೆ, ಬೇರೆ ಬೇರೆ ನಿನಿಮಾದ ಬಗ್ಗೆ ಮಾತುಕತೆ ನಡೆಯುತಿದೆ, ತುಳುವಲ್ಲಿ ಅವಕಾಶ ಸಿಕ್ಕಿದೆ ಖಂಡಿತ ನಟಿಸುವೆ ಎಂದರು.