HomeFresh Newsದಸರಾ ಹಬ್ಬವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಂಘಪರಿವಾರ : ಅಬೂಬಕ್ಕರ್ ಕುಳಾಯಿ ಆರೋಪ

ದಸರಾ ಹಬ್ಬವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಸಂಘಪರಿವಾರ : ಅಬೂಬಕ್ಕರ್ ಕುಳಾಯಿ ಆರೋಪ

ಮಂಗಳೂರು: ತಲಾತಲಾಂತರದಿಂದ ಜಾರಿಯಲ್ಲಿರುವ ಹಲವಾರು ವರ್ಷಗಳ ಇತಿಹಾಸ ಇರುವ ದಸರಾ ಹಬ್ಬವನ್ನು ಸಂಘಪರಿವಾರವು ದುರುಪಯೋಗ ಪಡಿಸಿಕೊಂಡು ತಮ್ಮ ಕೋಮು ರಾಜಕೀಯಕ್ಕೆ ಬಳಸಿಕೊಂಡಿದೆ ಎಂದು ಎಸ್‍ಡಿಪಿಐ ದ.ಕ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಕುಳಾಯಿ ಆರೋಪಿಸಿದ್ದಾರೆ.

ಹಲವಾರು ವರ್ಷಗಳ ಇತಿಹಾಸ ಇರುವ ನಾಡ ಹಬ್ಬವಾಗಿರುವ ದಸರಾ ಹಬ್ಬವನ್ನು ಸಂಘಪರಿವಾರವೂ ದ್ವೇಷ ಹಬ್ಬಿಸುವ ಹಬ್ಬವಾಗಿ ಮಾರ್ಪಡಿಸುತ್ತಿದೆ.ಗೂಂಡಾ ರಾಜ್ಯ ಎಂಬ ಕುಖ್ಯಾತಿ ಹೊಂದಿದ ಉತ್ತರ ಪ್ರದೇಶ ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರ ಸಂವಿಧಾನ ಬಾಹಿರ ಬುಲ್ಡೋಝರ್ ದಾಳಿಯ ಟ್ಯಾಬ್ಲೋವನ್ನು ಪ್ರದರ್ಶಿಸುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತ ವೈಫಲ್ಯವನ್ನು ಕೋಮು ದ್ವೇಷದ ಮೂಲಕ ಮರೆಮಾಚಲು ಈ ರೀತಿಯ ಕೃತ್ಯ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಯುಪಿಯಲ್ಲಿ ವ್ಯಾಪಕವಾಗಿ ಚಾಲ್ತಿಯಲ್ಲಿರುವ ಬುಲ್ಡೋಝರ್ ದಾಳಿಯು ಅಸಾಂವಿಧಾನಿಕ ವಾಗಿದೆ. ಬಡ ವ್ಯಕ್ತಿಗಳನ್ನು ಹಾಗೂ ಸರ್ಕಾರದ ನಡೆಯನ್ನು ವಿರೋಧಿಸುವವರ ಮನೆಗಳ ಮೇಲೆ ಮಾತ್ರ ಬುಲ್ಡೋಝರ್ ದಾಳಿ ಯಾಗುತ್ತಿದೆ ಹೊರತು ಶ್ರೀಮಂತ ರ, ಕಾಪೆರ್Çರೇಟ್ ಕುಳಗಳ ಮತ್ತು ರಾಜಕಾರಣಿಗಳ ಅಕ್ರಮ ಕಟ್ಟಡಗಳ ಮೇಲೆ ದಾಳಿಯಾಗುತ್ತಿಲ್ಲ.

ಆರೋಪಿಯ ಆರೋಪ ಸಾಬೀತಾಗುವುದು ನ್ಯಾಯಲಯದಲ್ಲಾಗಿರುತ್ತದೆ, ತಪ್ಪಿತಸ್ಥನಾಗಿದ್ದರೆ ನ್ಯಾಯಾಲಯವೇ ಕಾನೂನು ರೀತಿಯ ಶಿಕ್ಷೆ ವಿಧಿಸುತ್ತದೆ ಹಾಗಾಗಿ ಈ ರೀತಿಯ ದಾಳಿ ಅಸಾಂವಿಧಾನಿಕ ವಾಗಿದೆ. ಆದರೆ ಸಂಘಪರಿವಾರವು ಇದನ್ನು ಪ್ರತಿಬಿಂಬಿಸುವ ಟ್ಯಾಬ್ಲೋ ಪ್ರದರ್ಶಿಸುವ ಮೂಲಕ ದಸರಾ ಹಬ್ಬದ ಮೌಲ್ಯವನ್ನು ಹಾಗೂ ಗೌರವವನ್ನು ಇಲ್ಲದಾಗಿಸುತ್ತಿದೆ. ಇದನ್ನು ನಾಗರಿಕ ಸಮಾಜ ಖಂಡಿಸಬೇಕಾಗಿದೆ ಹಾಗೂ ಸಂಘಪರಿವಾರದ ದ್ವೇಷ ರಾಜಕೀಯವನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments