HomeFresh Newsಸೇವಾಭಾರತಿ ಕನ್ಯಾಡಿ ಹೊಸ ವಿಶ್ವಸ್ಥ ಮಂಡಳಿ ರಚನೆ - ಅಧ್ಯಕ್ಷರಾಗಿ ಕೆ.ವಿನಾಯಕ ರಾವ್ ಕನ್ಯಾಡಿ

ಸೇವಾಭಾರತಿ ಕನ್ಯಾಡಿ ಹೊಸ ವಿಶ್ವಸ್ಥ ಮಂಡಳಿ ರಚನೆ – ಅಧ್ಯಕ್ಷರಾಗಿ ಕೆ.ವಿನಾಯಕ ರಾವ್ ಕನ್ಯಾಡಿ

ಕೊಕ್ಕಡ:2026 ರಿಂದ 2029ರ ಅವಧಿಗೆ ಹೊಸ ವಿಶ್ವಸ್ಥ ಮಂಡಳಿ ರಚನೆಯ ಕಾರ್ಯಕ್ರಮವನ್ನು ಮಂಗಳವಾರದಂದು ಸೌತಡ್ಕದಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ಸರಳವಾಗಿ ನಡೆಸಲಾಯಿತು.

ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕೆ.ವಿನಾಯಕ ರಾವ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಾಲಕೃಷ್ಣ, ಕೋಶಾಧಿಕಾರಿಯಾಗಿ ಜೈ ರಾಜ್ ಸಾಲ್ಯಾನ್ ಕಾನರ್ಪ, ಕಾರ್ಯದರ್ಶಿಯಾಗಿವಿಷ್ಣು ಪ್ರಸಾದ್ ತೆಂಕಿಲ್ಲಾಯ ಹಾಗೂ ಟ್ರಸ್ಟಿಗಳಾಗಿ ಸ್ವರ್ಣಗೌರಿ, ಗಿರೀಶ್ ರಾವ್ ಕೆ.ಯು. ಮತ್ತು ಪೃಥ್ವೀಶ ಆಯ್ಕೆಯಾಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷೆ ಸ್ವರ್ಣಗೌರಿ ಅವರು ಕಳೆದ ಮೂರು ವರ್ಷಗಳ ಸೇವಾ ಪಯಣದ ಅನುಭವವನ್ನು ಹಂಚಿಕೊಂಡರು. ಹೊಸದಾಗಿ ರಚನೆಯಾದ ವಿಶ್ವಸ್ಥ ಮಂಡಳಿ ಸದಸ್ಯರಿಗೆ ಐಡಿ ಕಾರ್ಡ್‌ಗಳನ್ನು ನೀಡುವ ಮೂಲಕ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾರುಪತ್ಯಗಾರ ಲಕ್ಷ್ಮೀನಾರಾಯಣ ರಾವ್, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ ಕೃಷ್ಣ ಭಟ್, ಸೇವಾಭಾರತಿ ಸಲಹಾ ಮಂಡಳಿ ಸದಸ್ಯ ಡಾ.ಜಯಕುಮಾರ್ ಶೆಟ್ಟಿ, ಸೇವಾಧಾಮ ಸಂಚಾಲಕ ಕೆ.ಪುರಂದರ ರಾವ್, ಹಾಗೂ ನಿಕಟಪೂರ್ವ ಟ್ರಸ್ಟಿಗಳು ಉಪಸ್ಥಿತರಿದ್ದರು.

ಇದೇ ವೇಳೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸಂಸ್ಥೆಯ ಹಿತೈಷಿ ಹಾಗೂ ದಾನಿಯಾದ ಬೆನ್ನುಹುರಿ ಅಪಘಾತಕ್ಕೊಳಗಾದ ಮಧ್ವಮೂರ್ತಿ ಅವರ ಸ್ಮರಣಾರ್ಥವಾಗಿ ನುಡಿನಮನ ಸಲ್ಲಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments