ಸೇವಾಭಾರತಿಯ ಚೇತನಾ ಬಾಲವಿಕಾಸ ಕೇಂದ್ರ – ಶಾಲಾ ಪ್ರಾರಂಭೋತ್ಸವ
ಸೇವಾಭಾರತಿ ಮಂಗಳೂರು ಸಂಸ್ಥೆಯ ಅಂಗಸಂಸ್ಥೆಯಾದ ವಿ.ಟಿ.ರಸ್ತೆಯಲ್ಲಿರುವ ಚೇತನಾ ಬಾಲ ವಿಕಾಸ ಕೇಂದ್ರ ವಿಶೇಷ ಮಕ್ಕಳ ಶಾಲಾ ಪ್ರಾರಂಭೋತ್ಸವವು ವಿಜೃಭಣೆಯಿಂದ ಜರುಗಿತು.
ಕಲಶ, ಕೊಡೆ, ನಾದಸ್ವರ ಹಾಗೂ ಚೆಂಡೆ ವಾದನಗಳೊಂದಿಗೆ ನಲಂದಾ ಶಾಲಾ ಪರಿಸರದಿಂದ ಚೇತನಾ ಶಾಲೆಯವರಗೆ ನಡೆದ ಆಕರ್ಷಕ ಮೆರವಣಿಗೆಯಲ್ಲಿ ಭಿನ್ನ ಸಾಮಥ್ರ್ಯದ ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಸುಧಾಕರ ಕೊಟಾರಿ,ಜನರಲ್ ಮ್ಯಾನೇಜರ್,ಕೆನರಾ ಬ್ಯಾಂಕ್,ವೃತ್ತ ಕಚೇರಿ,ಮಂಗಳೂರು,ಇವರುಮಕ್ಕಳೊಂದಿಗೆ ಶಾಲಾ ಗೇಟನ್ನು ರಿಬ್ಬನ್‍ಬಿಡಿಸುವ ಮೂಲಕತೆರೆದು ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.
ಮಕ್ಕಳು ಹಾಗೂ ಅತಿಥಿಗಳು ಬಲೂನನ್ನು ಗಾಳಿಯಲ್ಲಿ ಹಾರಿಬಿಟ್ಟು ಸಂತಸ ಪಟ್ಟರು. ತದನಂತರ ಶಾಲಾ ಶಿಕ್ಷಕಿಯರು ಮಕ್ಕಳಿಗೆ ಸಿಹಿತಿಂಡಿ ಹಂಚಿ, ಪುಷ್ಪವೃಷ್ಟಿಗೈದು, ಅವರನ್ನು ಶಾಲೆಗೆ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳು ವಿಶೇಷ ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಹೊರತರುವಲ್ಲಿ ಸೇವಾಭಾರತಿಕೈಗೊಂಡಿರುವ ಯೋಜನೆಗಳನ್ನು ಹಾಗೂ ಶಿಕ್ಷಕಿಯರ ಅರ್ಪಣಾ ಮನೋಭಾವನೆಯನ್ನು ಶ್ಲಾಘಿಸಿದರು. ನಂತರ ಶಿಕ್ಷಕಿಯರಿಂದ ಹಾಗೂ`ಗ್ರಾವಿಟಿ ಸ್ಟುಡಿಯೊ” ತಂಡದವರಿಂದ ನೃತ್ಯಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಚೇತನಾ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಪ್ರೀತಾ, ಸೇವಾ ಭಾರತಿ ಸಂಸ್ಥೆಯಗೌರವ ಕಾರ್ಯದರ್ಶಿ ಶ್ರೀ ಹೆಚ್ ನಾಗರಾಜ ಭಟ್, ಕೋಶಾಧಿಕಾರಿ ಶ್ರೀ ಪಿ ವಿನೋದ್ ಶೆಣೈ, ಇತರ ವಿಶ್ವಸ್ಥರು, ಸ್ವಯಂ ಸೇವಕರು, ಕಛೇರಿ ಸಿಬ್ಬಂದಿ, ಶಾಲಾ ಶಿಕ್ಷಕಿಯರು ಹಾಗೂ ಶಿಕ್ಷಕೇತರರು, ಪೋಷಕರು ಭಾಗವಹಿಸಿದ್ದರು.