ಕೋವಿಡ್ ಮಹಾಮಾರಿ ನಾಶಕ್ಕಾಗಿ ಶಬರಿಮಲೆ ಪಾದಯಾತ್ರೆ ಕೈಗೊಂಡ ಪಡುಬಿದ್ರಿ ಈಚು ಸ್ವಾಮಿ

ಕೊರೊನಾ ವೈರಸ್ ಎಂಬ ಭಯಾನಕ ವಿಷರೋಗವು ಭಾರತ ದೇಶದಿಂದ ನಾಶವಾಗಿ ಹೋಗಲೆಂದು ಶಬರಿಮಲೆ ಕ್ಷೇತ್ರಕ್ಕೆ ತುಪ್ಪದ ಅಭಿಷೇಕವನ್ನು ಪಾದಯಾತ್ರೆಯ ಮೂಲಕ ಹರಕೆ ಹೊತ್ತು ಪಡುಬಿದ್ರಿ ಭಗವತಿ ಗ್ರೂಫ್ ಸದಸ್ಯ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ). ಎರಡು ವರ್ಷಗಳ ಹಿಂದೆ ಈ ಹರಕೆ ಹೇಳಿದ್ದರು. ಆದರೆ ಶಬರಿಮಲೆಗೆ ಪಾದಯಾತ್ರೆ ನಿಷಿದ್ಧವಿದ್ದರಿಂದ ಈ ಸೇವೆ ಮಾಡಲು ವಿಳಂಬವಾಯಿತು. ಹಲವು ವರ್ಷಗಳಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಯಾಗಿ ಕ್ಷೇತ್ರ ದರ್ಶನ ಮಾಡಿರುವ ಇವರು ಕಳೆದ ಕೆಲವು ವರ್ಷಗಳಿಂದ ಪಾದಯಾತ್ರೆಯ ಮೂಲಕವೇ ಕ್ಷೇತ್ರಕ್ಕೆ ಭೇಟಿ ನೀಡಿದ್ದು,ಈ ಬಾರಿ ದೇಶದ ಮನುಕುಲದ ಒಳಿತಿಗಾಗಿ ಪಾದಯಾತ್ರೆಯ ಸೇವೆಗೈಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಹಲವು ವರ್ಷಗಳ ಹಿಂದೆ ನರೇಂದ್ರ ಮೋದಿ ಪ್ರಧಾನಿಯಾಗಲೆಂದು ಶಬರಿಮಲೆಗೆ ಪಾದಯಾತ್ರೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ದೇಶದ ಒಳಿತಿಗಾಗಿ ಸೇವೆಯನ್ನು ಮಾಡುವ ಇಂತಹ ಅಯ್ಯಪ್ಪ ಸ್ವಾಮಿ ಭಕ್ತರ ಯಾತ್ರೆಗೆ ನಾವು ಆಶೀರ್ವಾದಿಸಿ ಹರಸೋಣ.

Related Posts

Leave a Reply

Your email address will not be published.