ಅಕ್ರಮ ಗಣಿಗಾರಿಕೆಗೂ ನನಗೆ ಯಾವುದೇ ಸಂಬಂಧವಿಲ್ಲ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿಧರ್ ಶೆಟ್ಟಿ ಹೇಳಿಕೆ
ಬೆಳ್ತಂಗಡಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿಧರ ಶೆಟ್ಟಿ ಹೇಳಿದರು.
ಅವರು ಬೆಳ್ತಂಗಡಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾನು ಆ ದಿನ ಕಲೆಂಜದಲ್ಲಿ ಇದ್ದು ನಮ್ಮ ಮನೆಗೆ ಪೊಲೀಸರು ಬಂದಾಗಲೇ ವಿಷಯ ತಿಳಿದಿದ್ದು ಕೂಡಲೇ ಪೊಲೀಸರಿಗೆ ಹಾಗೂ ತಹಶೀಲ್ದಾರರಿಗೆ ವಿಷಯ ಮನದಟ್ಟು ಮಾಡಿದ್ದೇನೆ. ಆದರೂ ಕೂಡ ರಾಜಕೀಯ ಒತ್ತಡದಿಂದ ನನ್ನ ಮೇಲೆ ಸುಳ್ಳು ದೂರು ದಾಖಲು ಮಾಡಲಾಗಿದೆ. ಇದಕ್ಕೆಲ್ಲ ಮೂಲ ಕಾರಣ ರಕ್ಷಿತ್ ಶಿವರಾಂ ಅವರೇ ಕಾರಣ, ಅಲ್ಲದೆ ಬೆಳ್ತಂಗಡಿ ಬಿಜೆಪಿಯ ಸಕ್ರಿಯ ಕಾರ್ಯಕರ್ತರನ್ನೆ ಗುರಿಯಾಗಿಸಿ ನಮ್ಮನ್ನು ಅಡಗಿಸುವ ಪ್ರಯತ್ನ ಮಾಡಲು ಯತ್ನಿಸುತ್ತಿದ್ದಾರೆ, ಈ ಬಗ್ಗೆ ನಾನು ಯಾವುದೇ ತಪುö್ಪ ಮಾಡಿಲ್ಲ ಹೇಳಿದರು.