HomeFresh Newsಅಮ್ಮ ಮಂಗಳೂರಲ್ಲಿ : ಭಕ್ತರಿಂದ ಕರಸೇವೆ ಮೂಲಕ ಸ್ವಚ್ಛತಾ ಕಾರ್ಯ

ಅಮ್ಮ ಮಂಗಳೂರಲ್ಲಿ : ಭಕ್ತರಿಂದ ಕರಸೇವೆ ಮೂಲಕ ಸ್ವಚ್ಛತಾ ಕಾರ್ಯ

ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ದಿನಾಂಕ 28 ರಂದು ಮಂಗಳೂರಿಗೆ ಆಗಮಿಸಲಿದ್ದು ಎರಡು ದಿನಗಳ ಕಾಲ ಜರುಗುವ ಬ್ರಹ್ಮಸ್ಥಾನಂ ಮಹೋತ್ಸವದಲ್ಲಿ ಭಾಗವಹಿಸಲಿರುವರು.ಆ ಪ್ರಯುಕ್ತ ಮಂಗಳೂರಿನ ಶಾಖಾ ಮಠದಲ್ಲಿ ಅನೇಕ ಚಟುವಟಿಕೆಗಳು ಈಗಾಗಲೇ ಪ್ರಾರಂಭವಾಗಿವೆ.

ಏಳು ವರ್ಷಗಳ ನಂತರ ಅಮ್ಮನವರು ಮಂಗಳೂರಿಗೆ ಬಂದು ಭಕ್ತರನ್ನು ಅಪ್ಪಿಕೊಂಡು ಅನಗ್ರಹಿಸುವ “ಅಮೃತಾಲಿಂಗನ”, ಅಮ್ಮನ ದಿವ್ಯ ಸಾನ್ನಿಧ್ಯದಲ್ಲಿ ಜುಗುವ “ಉದಯಾಸ್ತಮಾನ ಪೂಜೆ”ಗಳಿಗೆ ಭರದ ಸಿದ್ಧತೆ ನಡೆಯುತ್ತಿದೆ.ಆ ಪ್ರಯುಕ್ತ ಅಮ್ಮನ ಭಕ್ತರು , ಸೇವಾ ಸಮಿತಿಗಳ ಪದಾಧಿಕಾರಿಗಳು ಸೇರಿ ಕರಸೇವೆಯ ಮೂಲಕ ಆಶ್ರಮ, ದೇವಸ್ಥಾನಗಳ ಸ್ವಚ್ಛತಾ ಕಾರ್ಯ ನಡೆಸಿದರು.

Shri Mata Amritanandamayi

ದೇಶ ವಿದೇಶಗಳ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ವಾಸ್ತವ್ಯದ ವ್ಯವಸ್ಥೆಗೆ ಪೂರ್ವ ಸಿದ್ಧತೆ ಮಾಡಲಾಗುತ್ತಿದೆ.

ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ನೇತೃತ್ವದಲ್ಲಿ ಭಾನುವಾರ ನಡೆದ ಕರಸೇವೆ ಯಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಸುರೇಶ್ ಅಮಿನ್,ಯುವ ಸೇವಾ ವಿಭಾಗ ಅಯುಧ್ ಮಂಗಳೂರು ಇದರ ಅಧ್ಯಕ್ಷೆ ವಕೀಲೆ ಸ್ವಸ್ತಿ ಶೆಟ್ಟಿ, ವಿವಿಧ ಸಮಿತಿಗಳ ಪದಾಧಿಕಾರಿಗಳು ಅಮ್ಮನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments