HomeFresh Newsಮಧ್ಯ ಇಂಗ್ಲೆಂಡಿನ ನಾಟಿಂಗ್‍ಹಾಮ್ ನಗರದ ನೆಲದಡಿಯಲ್ಲಿ ದಾಖಲೆಯ ಸಾವಿರ ಗವಿಗಳು ಪತ್ತೆಯಾಗಿ ಸೋಜಿಗ ಸೃಷ್ಟಿಸಿವೆ

ಮಧ್ಯ ಇಂಗ್ಲೆಂಡಿನ ನಾಟಿಂಗ್‍ಹಾಮ್ ನಗರದ ನೆಲದಡಿಯಲ್ಲಿ ದಾಖಲೆಯ ಸಾವಿರ ಗವಿಗಳು ಪತ್ತೆಯಾಗಿ ಸೋಜಿಗ ಸೃಷ್ಟಿಸಿವೆ

ನೆಲದಡಿಯ ಮರಳುಗಲ್ಲನ್ನು ಕೊರೆದು ಈ ಗುಹೆಗಳನ್ನು ನಿರ್ಮಿಸಲಾಗಿದೆ. ಮಾನವ ನಿರ್ಮಿತ ಗವಿಗಳು ರಸ್ತೆಯಡಿ, ಅಂಗಡಿಯಡಿ, ಮನೆಯಡಿ ಎಂದೆಲ್ಲ ಇವೆ. ಗೋದಾಮು, ಕೆಲಸದ ತಾಣ, ವಸತಿ, ಗೋರಿ ಎಂದೆಲ್ಲ ಬಳಕೆಯಾದ ಇವು ಎರಡನೆಯ ಮಹಾಯುದ್ಧದ ವೇಳೆ ಅಡಗುದಾಣವಾಗಿ ಬಳಕೆಯಾಗಿತ್ತು.

ಕೆಲವು ದಾಖಲೆಗಳ ಆಧಾರದಲ್ಲಿ 2008ರಲ್ಲಿ ನಾಟಿಂಗ್‍ಹಾಮ್ ಆರ್ಕಿಯಾಲಜಿಸ್ಟ್ ಸ್ಕಾಟ್ ಸಿ. ಲೋಮಾಕ್ಸ್‍ರಿಂದ ಬದಿಯಗೆತ ಆರಂಭವಾಯಿತು. 425 ಗವಿಗಳು ಇರಬೇಕು ಎಂದು ಅಂದಾಜಿಸಲಾಗಿತ್ತು. ಆದರೆ ಅದೀಗ ಸಾವಿರ ಮುಟ್ಟಿ ದಾಖಲೆ ಬರೆದಿದೆ.

ಮಧ್ಯ ಯುಗದಿಂದ ಹದಿನೆಂಟನೆಯ ನೂರಟ್ಟಿಯವರೆಗೂ ಗವಿ ಕೊರೆದಿದ್ದಾರೆ. ಹದಿನೆಂಟನೆಯ ಶತಮಾನದ್ದು ಒಂದು ಉಪ್ಪು ಸಂಗ್ರಹದ್ದು, ಇನ್ನೊಂದು ಮದ್ಯ ಗೋದಾಮು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments