ಕಾಣಿಯೂರಿನ ಸೌಮ್ಯ ಪೂಜಾರಿ – ರಾಷ್ಟ್ರಮಟ್ಟದ ನ್ಯಾಷನಲ್ ಗೇಮ್ಸ್ -2025 ಗೆ ಆಯ್ಕೆ

ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯಲಿರುವ 38ನೇ ನ್ಯಾಷನಲ್ ಗೇಮ್ಸ್ -2025 ರಲ್ಲಿ ರಾಷ್ಟ್ರೀಯ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ನಲ್ಲಿ ಭಾಗವಹಿಸಲು ಕರ್ನಾಟಕ ತಂಡಕ್ಕೆ ಕಾಣಿಯೂರಿನ ಸೌಮ್ಯ ಪೂಜಾರಿ ರವರು ಆಯ್ಕೆ ಆಗಿರುತ್ತಾರೆ.

ಇವರು ಕಾಣಿಯೂರು ಅಬೀರ ರಾಮಣ್ಣ ಪೂಜಾರಿ ಮತ್ತು ಲಲಿತಾ ದಂಪತಿಗಳ ಸುಪುತ್ರಿ ಹಾಗೂ ಸುರೇಶ್ ಅಬೀರ ಮತ್ತು ಪುತ್ತೂರಿನಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಯಾಗಿರುವ ಸಂತೋಷ್ ಕುಮಾರ್ ರವರ ಸಹೋದರಿ. ಇವರು ಕಾಣಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪ್ರಗತಿ ಆಂಗ್ಲಮಾದ್ಯಮ ಶಾಲೆ ಹಾಗೂ ಆಳ್ವಾಸ್ ವಿದ್ಯಾಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯಾಗಿರುತ್ತಾರೆ.
ಸೌಮ್ಯಾ ರವರು ಪ್ರಸ್ತುತ ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯ ಉದ್ಯೋಗಿಯಾಗಿದ್ದು, ಕರ್ನಾಟಕ ರಾಜ್ಯ ಪೊಲೀಸ್ ಮಹಿಳಾ ಕಬಡ್ಡಿ ತಂಡದ ಸದಸ್ಯೆಯಾಗಿರುತ್ತಾರೆ.

add - Rai's spices

Related Posts

Leave a Reply

Your email address will not be published.