ಕರ್ನಾಟಕ ಖೋಖೋ ತಂಡದ ಸಹಾಯಕ ತರಬೇತುದಾರರಾಗಿ ಪುತ್ತೂರಿನ ಕಾರ್ತಿಕ್ ಎನ್ ಆಯ್ಕೆ

ಪುತ್ತೂರು : ಇದೇ ಜನವರಿ 28 ರಿಂದ ಫೆಬ್ರವರಿ 1 ರ  ತನಕ ಉತ್ತರಾಖಂಡ್ ರಾಜ್ಯದಲ್ಲಿ ನಡೆಯಲಿರುವ ರಾಷ್ಟಿಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ಪುರುಷರ ಖೋಖೋ ತಂಡದ ಸಹಾಯಕ ತರಬೇತುದಾರರಾಗಿ ಪುತ್ತೂರಿನ ಕಾರ್ತಿಕ್ ಎನ್ ಇವರು ಆಯ್ಕೆಯಾಗಿದ್ದಾರೆ. ಖೋಖೋ ಕೋಚಿಂಗ್‌ನಲ್ಲಿ ಎನ್.ಐ.ಎಸ್ ಅರ್ಹತೆ ಇರುವ ತರಬೇತುದಾರರಾಗಿರುವ ಇವರು ಪ್ರಸ್ತುತ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ.

ಇವರು ಪ್ರಾಥಮಿಕ ಶಿಕ್ಷಣವನ್ನು ಬಿ.ಇ.ಎಂ ಶಾಲೆ , ಪ್ರೌಢ ಶಿಕ್ಷಣವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪಿ ಯು ಶಿಕ್ಷಣವನ್ನು ಕೊಂಬೆಟ್ಟು ಸರಕಾರಿ ಪ.ಪೂ ಕಾಲೇಜು ಹಾಗೂ ಪದವಿಯನ್ನು ಜಿಡೆಕಲ್ಲು ಸರಕಾರಿ ಪದವಿ ಕಾಲೇಜಿನಲ್ಲಿ ಪೂರೈಸಿದ್ದಾರೆ. ಬಿ.ಪಿ.ಎಡ್ ಮತ್ತು ಎಂ.ಪಿ.ಎಡ್ ಪದವಿಯನ್ನು ಆಳ್ವಾಸ್ ಕಾಲೇಜಿನಲ್ಲಿ ಹಾಗೂ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಎನ್.ಐ.ಎಸ್ ಡಿಪ್ಲೊಮೊ

ಪಡೆದಿದ್ದಾರೆ. ಅಲ್ಲದೆ ಖೋಖೋ ಫೆಡರೇಷನ್ ಆಫ್ ಇಂಡಿಯಾ ದಿಂದ ರಾಷ್ಟ್ರೀಯ ಖೋಖೋ ತೀರ್ಪುಗಾರರಾಗಿ ಕೂಡ ಅರ್ಹತೆ ಪಡೆದಿದ್ದಾರೆ.

ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಖೋಖೋ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದಾರೆ. ಪುತ್ತೂರು ತಾಲೂಕಿನಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಹಲವು ಶಾಲಾ ಕಾಲೇಜುಗಳಲ್ಲಿ ಖೋಖೋ ತರಬೇತಿಯನ್ನು ನೀಡುತ್ತಾ ಇದ್ದಾರೆ.

ಇವರು ಪುತ್ತೂರು ನೆಹರು ನಗರದ ಸಿಟಿಗುಡ್ಡೆ ಶ್ರೀ ನಾರಾಯಣ ಮತ್ತು ಶ್ರೀಮತಿ ವಿಜಯ ದಂಪತಿಗಳ ಪುತ್ರರಾಗಿರುತ್ತಾರೆ.

Related Posts

Leave a Reply

Your email address will not be published.