HomeFresh Newsಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ಶೈಕ್ಷಣಿಕ ಮೌಲ್ಯ ಸಂವರ್ಧನ ಕಾರ್ಯಗಾರ

ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ಶೈಕ್ಷಣಿಕ ಮೌಲ್ಯ ಸಂವರ್ಧನ ಕಾರ್ಯಗಾರ

ಪಟ್ಟೆ ಬಡಗನ್ನೂರು: ಪಟ್ಟೆ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಶ್ರೀಮಾನ್ ಗೋಪಾಲಕೃಷ್ಣ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಜ್ಞಾನದ ವಿಷಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಹಂಚುವುದರಿಂದ ವಿದ್ಯಾರ್ಥಿಗಳ ಜ್ಞಾನ ಅರಳುತ್ತದೆ. ಶಿಕ್ಷಕರಾದವರು ಸಂಸ್ಕಾರ ಶಿಸ್ತುನ್ನು ಮೈಗೂಡಿಸಿಕೊಂಡು ಸಂಸ್ಕೃತ ಸಮಾಜ ನಿರ್ಮಾಣ ಮಾಡಬೇಕೆಂದು ಹೇಳಿದರು.

ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳ ಸದಸ್ಯರಾದ ಶ್ರೀ ಗಣರಾಜ ಕುಂಬ್ಳೆ ಅವರು ಆಶಯದ ಮಾತುಗಳನಾಡುತ್ತಾ ನಮ್ಮ ಶಿಕ್ಷಣದಲ್ಲಿ ಶೈಕ್ಷಣಿಕ ಮೌಲ್ಯ ಹೆಚ್ಚಾಗಬೇಕು. ಮಾನವ ಸಂಪನ್ಮೂಲ ಸರಿಯಾದರೆ ಎಲ್ಲಾ ಸಂಪನ್ಮೂಲಗಳು ಸರಿಯಾದಂತೆ, ಕಲಿಕೆ ಎಂಬುದು ನಿರಂತರ ಎಂದು ಕರೆ ನೀಡಿದರು. ತರಬೇತಿಯು ಸಂಪನ್ಮೂಲ ವ್ಯಕ್ತಿಗಳಾದ ಪ್ರತಿಭಾ ವಿದ್ಯಾಲಯ ಸುಳ್ಯದ ಪ್ರಾಂಶುಪಾಲರಾದ ವೆಂಕಟರಾಮ ಭಟ್ ಸುಳ್ಯ, ಮುಖ್ಯ ನಿವೃತ್ತ ಮುಖ್ಯಗುರುಗಳಾದ ಶ್ರೀ ರಾಮಕೃಷ್ಣ ಭಟ್ಟ ಚೂಂತಾರು, ಸುಳ್ಯಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಶ್ರೀ ಪ್ರಕಾಶ್ ಮೂಡಿತ್ತಾಯ ಇವರು ವಿಷಯ ಸಂಪನ್ಮೂಲಕರಾಗಿ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು. ಪ್ರೌಢಶಾಲಾ ಮುಖ್ಯಗುರುಗಳಾದ ಶ್ರೀಮತಿ ಸುಮನ ಮಾತಾಜಿ ಸ್ವಾಗತಿಸಿ, ಶ್ರೀಮತಿ ಭಾರತಿ ಮಾತಾಜಿ ಧನ್ಯವಾದನ್ನಿತ್ತರು ಶ್ರೀಮತಿ ಭವಿತಾ ಮಾತಾಜಿ ಅವರು ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments