ಅಂತರ್ ಶಾಲಾ ಪುಟ್ಬಾಲ್ ಪಂದ್ಯಾಟ ಗೊನ್ಝಾಗ ಶಾಲೆಗೆ ಪ್ರಥಮ ಸ್ಥಾನ
ಮಂಗಳೂರಿನ ಎಸ್.ಡಿ.ಎಂ ಶಾಲೆಯ ಆಶ್ರಯದಲ್ಲಿ ನಡೆದ ಐಕ್ಸ್ ಅಂತರ್ ಶಾಲಾ ಫುಟ್ಬಾಲ್ ಪಂದ್ಯಾಟದಲ್ಲಿ
ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಜೂನಿಯರ್ ಫುಟ್ಬಾಲ್ ತಂಡವು ಪ್ರಥಮ ಸ್ಥಾನ ಗಳಿಸಿದೆ .ಆಗಸ್ಟ್ 30 ಮತ್ತು 31
ರಂದು ನಡೆದ ಈ ಪಂದ್ಯಾಟದಲ್ಲಿ 33 ತಂಡಗಳು ಭಾಗವಹಿಸಿದ್ದವು. ಈ ವಿಜಯವು ತಂಡದ ಕೌಶಲ ಹಾಗೂ ಸಂಘಟಿತ
ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ. ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ. ಮೆಲ್ವಿನ್ ಅನಿಲ್ ಲೋಬೊ ಹಾಗೂ ಸಿಬ್ಬಂದಿ ವರ್ಗ
ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.