ಫೆ.17ರಂದು ಸಂತ ಅಲೋಶಿಯಸ್ ಕಾಲೇಜಿನಲ್ಲಿ”ನಿರುತ್ತಾಯಣ” ಯಕ್ಷರೂಪಕ

ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯು (NSD) “ಭಾರತ್ ರಂಗ್ ಮಹೋತ್ಸವ್” ಎಂಬ ಹೆಸರಿನಲ್ಲಿ ನಾಟಕೋತ್ಸವವನ್ನು ಪ್ರತೀವರ್ಷ ಆಯೋಜಿಸುತ್ತದೆ. ಈ ಉತ್ಸವದ 22 ನೇ ಆವೃತ್ತಿಯು, ಇದೇ ಫೆಬ್ರವರಿಯ 14 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದೆ. ಭಾರತದಾದ್ಯಂತ 10 ಸ್ಥಳಗಳಲ್ಲಿ ಪ್ರದರ್ಶಿಸಲು 960 ನಾಟಕಗಳಿಂದ, ಕೇವಲ  77 ನಾಟಕಗಳನ್ನು ಪ್ರಸಕ್ತ ವರ್ಷದಲ್ಲಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಅಸ್ತಿತ್ವ ® ಮಂಗಳೂರು ತಂಡದ ‘ಕೆಂಡೋನಿಯನ್ಸ್’  ನಾಟಕ ಕೂಡ ಒಂದಾಗಿದೆ. 

 ಅಸ್ತಿತ್ವ ®, ಮಂಗಳೂರು, ರಂಗಭೂಮಿಯ ಬಗ್ಗೆ ವಿಶೇಷ ಒಲವು ಹೊಂದಿರುವ ಯುವಕರ ಗುಂಪು. 2015 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ 18 ರಾಷ್ಟ್ರೀಯ ನಾಟಕೋತ್ಸವಗಳು, ಹನ್ನೆರಡು ಬಹುಭಾಷಾ ನಾಟಕೋತ್ಸವಗಳು ಮತ್ತು ದುಬೈನಲ್ಲಿ ನಡೆದ ಒಂದು ಅಂತರರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾಗವಹಿಸಿದೆ. ತುಳು, ಕನ್ನಡ ಮತ್ತು ಕೊಂಕಣಿ ರಂಗಭೂಮಿಯಲ್ಲಿ ರಂಗದ ಹಿನ್ನೆಲೆಯಲ್ಲಿ ದುಡಿದ  ಏಳು ಹಿರಿಯ ವ್ಯಕ್ತಿಗಳಿಗೆ  ಅಸ್ತಿತ್ವದಿಂದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ರಾಜ್ಯ ಮಟ್ಟದ ಸಿಜಿಕೆ ಪ್ರಶಸ್ತಿ ಸಮಾರಂಭಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಆಯೋಜಿಸಿದೆ. ಕಲೆ ಮತ್ತು ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಗುರಿಯೊಂದಿಗೆ ಸಂಸ್ಥೆಯು ಈಗ ಪ್ರತೀ ವರ್ಷ ಒಬ್ಬ ವಿದ್ಯಾರ್ಥಿಯ ಶಿಕ್ಷಣಕ್ಕೆ ವೆಚ್ಚವನ್ನು  ಭರಿಸುತ್ತಿದೆ.

ಈ ಸಂಸ್ಥೆಯ ಪ್ರಸಿದ್ಧ ನಾಟಕ ‘ಕೆಂಡೋನಿಯನ್ಸ್’ ಭಾರತ ರಂಗ ಮಹೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಫೆಬ್ರುವರಿ 20, 2023 ರಂದು ಆಂಧ್ರಪ್ರದೇಶದ ರಾಜಮುಂಡ್ರಿಯಲ್ಲಿ ಇದರ ಪ್ರದರ್ಶನ ನಡೆಯಲಿದೆ. ಅಸ್ತಿತ್ವ ತಂಡದ ಕಲಾವಿದರು ಹಾಗೂ  ಮಂಗಳೂರಿನ ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ವಿದ್ಯಾರ್ಥಿಗಳು  ಈ ನಾಟಕದಲ್ಲಿ ಅಭಿನಯಿಸಲಿದ್ದಾರೆ. ಪ್ರಸ್ತುತ ನಾಟಕವು ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಭಾಗಿಯಾಗಿ ಹಲವು ಬಹುಮಾನಗಳನ್ನು ಪಡೆದಿರುತ್ತದೆ. ಈ ನಾಟಕವನ್ನು ಇದೇ ತಂಡದ ಕಲಾವಿದರು ಕನ್ನಡ, ತುಳು ಹಾಗೂ ಕೊಂಕಣಿ ಹೀಗೆ ಮೂರೂ ಭಾಷೆಗಳಲ್ಲಿ ಪ್ರದರ್ಶನ ನೀಡುತ್ತಾರೆ.

 ಎಂ.ಪಿ. ರಾಜೇಶ್  ಕಥಾಧಾರಿತ ಈ ನಾಟಕವನ್ನು  ಕೇರಳದ ಮೂಲದ ಪ್ರಸಿದ್ಧ ರಂಗಕರ್ಮಿ, ನಿರ್ದೇಶಕ ಅ ರುಣ್ ಲಾಲ್ ರವರು ನಿರ್ದೇಶಿಸಿದ್ದಾರೆ. ರಂಗ ನಿರ್ದೇಶನದ  ಕ್ಷೇತ್ರದಲ್ಲಿ ಅವರ ಕೊಡುಗೆಗಾಗಿ ಹಲವಾರು ಪ್ರಮುಖ ಗೌರವಗಳನ್ನು ಪಡೆದಿದ್ದಾರೆ. ‘ಕೆಂಡೋನಿಯನ್ಸ್’, ಭಾರತ್ ರಂಗ್ ಮಹೋತ್ಸವದಲ್ಲಿ ಪ್ರಸ್ತುತಪಡಿಸಲಾಗುವ ಅವರ ಮೂರನೆಯ ನಾಟಕವಾಗಿದೆ. 

ನಾಟಕದ ಬಗ್ಗೆ:

            “ಕೆಂಡೋನಿಯನ್ಸ್” ಆಧುನಿಕ-ಕಾಲದ ಆರ್ಥಿಕ ಸಮಸ್ಯೆಗಳು, ನಿರುದ್ಯೋಗ ಮತ್ತು ಜಾಗತೀಕರಣದ ಕುರಿತ ವಿಡಂಬನೆಯಾಗಿದೆ. ಬ್ರ್ಯಾಂಡ್‌ಗಳು, ಗ್ರಾಹಕೀಕರಣ ಮತ್ತು ಬೂಟಾಟಿಕೆಗಳ ಜಗತ್ತಿನಲ್ಲಿ ಬಂಧಿತರಾಗಿರುವ ಜನರ ಸಂಕಟವನ್ನು ಈ ಕ್ರಾಂತಿಕಾರಿ ಕಥೆಯಲ್ಲಿ ಚಿತ್ರಿಸಲಾಗಿದೆ.

ಮಂಗಳೂರಿನ ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ಎಲ್‌.ಸಿ.ಆರ್‌.ಐ. ಸಭಾಂಗಣದಲ್ಲಿ  ಫೆಬ್ರವರಿ 11, 2023 ರಂದು ಮಧ್ಯಾಹ್ನ 2:00 ಮತ್ತು ಸಂಜೆ 7:00 ಗಂಟೆಗೆ ಕನ್ನಡ ವಿಭಾಗ ಮತ್ತು ರಂಗ ಅಧ್ಯಯನ ಕೇಂದ್ರ ಸಂತ  ಅಲೋಶಿಯಸ್ (ಸ್ವಾಯತ್ತ) ಕಾಲೇಜು, ಮಂಗಳೂರು ಇವರ ಸಹಯೋಗದಲ್ಲಿ ಈ ನಾಟಕದ ಎರಡು ಪ್ರದರ್ಶನಗಳು ನಡೆಯಲಿವೆ. 

ಸುಮಾರು ಮೂರು ವರ್ಷಗಳ ನಂತರ ಮಂಗಳೂರಿನಲ್ಲಿ  ನಡೆಯುವ ಈ ರಂಗ ಪ್ರದರ್ಶನಕ್ಕೆ ರಂಗಾಸಕ್ತರು ಬಂದು ಕಾರ್ಯಕ್ರಮ ಯಶಸ್ವಿಗೊಳಿಸಲು ಆಯೋಜಕರು ವಿನಂತಿಸಿದ್ದಾರೆ.

ಸಂತ ಅಲೋಶಿಯಸ್ ರಂಗ ಅಧ್ಯಯನ ಕೇಂದ್ರವು ಯುಜಿಸಿ ಸ್ಟ್ರೈಡ್ ಯೋಜನೆ ಮತ್ತು ಕನ್ನಡ ವಿಭಾಗದ ಸಹಯೋಗದೊಂದಿಗೆ “ನಿರುತ್ತಾಯಣ” ಎಂಬ ವಿನೂತನ ಯಕ್ಷರೂಪಕ ವನ್ನು  ಆಯೋಜಿಸುತ್ತಿದೆ. ಈ ರಂಗ ಪ್ರಯೋಗ ದಿನಾಂಕ 17, ಫೆಬ್ರವರಿ,2023ರಂದು ಸಂತ ಅಲೋಶಿಯಸ್ ಕಾಲೇಜಿನ ಎಲ್ ಸಿ ಆರ್ ಐ ಸಭಾಂಗಣದಲ್ಲಿ ಮಧ್ಯಾಹ್ನ 2:30ಕ್ಕೆ ನಡೆಯಲಿದೆ.

ಬದುಕಿನುದ್ದಕ್ಕೂ ಉತ್ತರ ರವೇ ಸಿಗದೆ ಉತ್ತರಾಯಣದ ನಿರೀಕ್ಷೆಯಲ್ಲಿದ್ದ ಮಹಾಭಾರತದ ಭೀಷ್ಮ‌ನ ಕಥಾನಕ ಇದಾಗಿದ್ದು, ಆಧುನಿಕ ಬೆಳಕು ಮತ್ತು ರಂಗತಂತ್ರಗಳ ಮೂಲಕ ಸಂತ ಅಲೋಶಿಯಸ್ ಯಕ್ಷತಂಡ ಈ ಕಥನವನ್ನು ಪ್ರಸ್ತುತಪಡಿಸಲಿದೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ತೆಂಕುತಿಟ್ಟಿನ ದಶವತಾರಿಯೆಂದು ಪ್ರಸಿದ್ಧ ರಾಗಿರುವ ಸೂರಿಕುಮೇರು ಕೆ ಗೋವಿಂದ ಭಟ್ಟರ ಭೀಷ್ಮ ಪಾತ್ರ ಇಲ್ಲಿ ವಿಶೇಷ ಆಕರ್ಷಣೆಯಾಗಿದೆ.

Related Posts

Leave a Reply

Your email address will not be published.