ಕಟಪಾಡಿಯಲ್ಲಿ ಹೆದ್ದಾರಿ ಬ್ಲಾಕ್, ಚಾಲಕರ ಮತ್ತು ಪ್ರಯಾಣಿಕರ ಪರದಾಟ

ಇಕ್ಕಟ್ಟಾದ ಕಟಪಾಡಿ ಪೇಟೆಭಾಗದಲ್ಲಿ ಹೆದ್ದಾರಿ ದುರಸ್ಥಿ ಕಾರ್ಯ ಹಗಲಲ್ಲೇ ನಡೆಸಿದ್ದರ ಪರಿಣಾಮ ಮೈಲುದ್ಧ ವಾಹನಗಳು ಬ್ಲಾಕ್ ಆಗಿ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತ್ತಾಗಿದೆ. ಬ್ಲಾಕ್‍ನಲ್ಲಿ ಅಗ್ನಿಶಾಮಕ ವಾಹನ ಕೂಡಾ ಸಿಲುಕಿಕೊಂಡಿತ್ತು. ಈ ದಿನ ಬಹಳಷ್ಟು ಕಾರ್ಯಕ್ರಮಗಳು ಇದ್ದು ವಾಹನ ದಟ್ಟಣೆ ಅತಿಯಾಗಿದ್ದು ಹೆದ್ದಾರಿ ಇಲಾಖಾ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಕಟಪಾಡಿ ಪೇಟೆಯಲ್ಲಿ ಅಂಡರ್ ಪಾಸ್ ಬೇಡಿಕೆ ಇದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಜನರ ಬೇಡಿಕೆ ಈಡೇರಿಲ್ಲ ಎಂಬ ಆರೋಪವೂ ಇದೆ. ಕಾಪು ಸರ್ಕಲ್ ಪೂವಯ್ಯ ಸಹಿತ ಕಾಪು ಪೆÇಲೀಸರು ಬ್ಲಾಕ್ ನಿಯಂತ್ರಿಸಲು ಬಹಳಷ್ಟು ಶ್ರಮಿಸಿದ್ದಾರೆ

Related Posts

Leave a Reply

Your email address will not be published.