HomeFresh Newsಸುಳ್ಯ : ಸಿ.ಎಸ್.ಸಿ. ಕೇಂದ್ರದಲ್ಲಿ ಡಿಜಿ-ಪೇ ಕಾರ್ಯಕ್ರಮಕ್ಕೆ ಚಾಲನೆ

ಸುಳ್ಯ : ಸಿ.ಎಸ್.ಸಿ. ಕೇಂದ್ರದಲ್ಲಿ ಡಿಜಿ-ಪೇ ಕಾರ್ಯಕ್ರಮಕ್ಕೆ ಚಾಲನೆ

ಗ್ರಾಮೀಣ ಭಾಗದ ಜನರು ತಮ್ಮ ಬ್ಯಾಂಕ್ ಖಾತೆಯಿಂದ ಹಣ ಪಡೆಯಲು ಎಟಿಎಂ ಅಥವಾ ಬ್ಯಾಂಕ್‌ಗೆ ದೂರದ ಪ್ರದೇಶಗಳಿಗೆ ತೆರಳಬೇಕಾಗಿರುವ ಸಮಸ್ಯೆಗೆ ಪರಿಹಾರವಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ವತಿಯಿಂದ ಆರಂಭಿಸಲಾದ ಡಿಜಿ-ಪೇ ಸೇವೆ ಗ್ರಾಮೀಣ ಜನರಿಗೆ ವರದಾನವಾಗಲಿದೆ ಎಂದು ದ.ಕ.-2 ಜಿಲ್ಲೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಎ. ಬಾಬು ನಾಯ್ಕ ಹೇಳಿದರು.


ಸುಳ್ಯ ತಾಲೂಕಿನ ಸಿ.ಎಸ್.ಸಿ. ಕೇಂದ್ರದಲ್ಲಿ ಡಿಜಿ-ಪೇ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸೇವೆಯಿಂದ ಗ್ರಾಮೀಣ ಜನರು ತಮ್ಮ ಹಳ್ಳಿಯಲ್ಲಿಯೇ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆಯಲು, ಮಿನಿ ಸ್ಟೇಟ್ಮೆಂಟ್ ಪಡೆಯಲು ಹಾಗೂ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಸಾಧ್ಯವಾಗುತ್ತದೆ. ಇದರಿಂದ ಸಮಯ ಮತ್ತು ಪ್ರಯಾಣ ವೆಚ್ಚ ಉಳಿತಾಯವಾಗುವುದರ ಜೊತೆಗೆ ಬ್ಯಾಂಕ್ ಅಥವಾ ಎಟಿಎಂಗೆ ತೆರಳುವ ಅಗತ್ಯ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಎಟಿಎಂ ಬಳಕೆ ಅಥವಾ ವಿತ್‌ಡ್ರಾ ಸ್ಲಿಪ್ ಭರ್ತಿ ಮಾಡುವ ಗೊಂದಲವೂ ಇಲ್ಲದೆ, ಸುಲಭವಾಗಿ ಹಣಕಾಸು ಸೇವೆಗಳನ್ನು ಪಡೆಯಬಹುದಾಗಿದೆ. ಗ್ರಾಮೀಣ ಜನರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ಶ್ರೀ ಮಾಧವ ಗೌಡ, ತಾಲೂಕು ಜನಜಾಗೃತಿ ಸದಸ್ಯರಾದ ಮಲ್ಲೇಶ್ ಬೆಟ್ಟಂಪಾಡಿ, ಬೂಡು ರಾಧಾಕೃಷ್ಣ ರೈ, ವಲಯ ಅಧ್ಯಕ್ಷ ಮನೋಹರ್, ಹಣಕಾಸು ಹಾಗೂ ಐಟಿ ಪ್ರಬಂಧಕರು, ತಾಲೂಕು ನೋಡಲ್ ಅಧಿಕಾರಿ, ಮೇಲ್ವಿಚಾರಕ ವರ್ಗದ ಕಾರ್ಯಕರ್ತರು, ಸೇವಾಪ್ರತಿನಿಧಿಗಳು, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

sudha add new -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments