HomeFresh Newsಸುಳ್ಯ : ಕೆವಿಜಿ ಪಾಲಿಟೆಕ್ನಿಕ್ - ನಿವೃತ್ತರಿಗೆ ಬೀಳ್ಕೊಡುಗೆ

ಸುಳ್ಯ : ಕೆವಿಜಿ ಪಾಲಿಟೆಕ್ನಿಕ್ – ನಿವೃತ್ತರಿಗೆ ಬೀಳ್ಕೊಡುಗೆ

ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಕಛೇರಿಯಲ್ಲಿ ಬೆರಳಚ್ಚುಗಾರರಾಗಿ ಸೇವೆ ಸಲ್ಲಿಸುತ್ತಿದ್ದು ಮೇ 31ರಂದು ನಿವೃತ್ತಿ ಗೊಂಡ ಯಶಸ್ವತಿ ಎಂ.ಎಸ್ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.


ಪ್ರಾಂಶುಪಾಲರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಎ.ಓ.ಎಲ್.ಇ ಕಮಿಟಿ “ಬಿ”ಯ ಪ್ರಧಾನ ಕಾರ್ಯದರ್ಶಿ ಡಾ. ಜ್ಯೋತಿ ಆರ್.ಪ್ರಸಾದ್ ನಿವೃತ್ತರನ್ನು ಆಡಳಿತ ಮಂಡಳಿ ಹಾಗೂ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಅಣ್ಣಯ್ಯ ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು , ಕಚೇರಿ ಅಧೀಕ್ಷಕ ಧನಂಜಯ ಕಲ್ಲುಗದ್ದೆ ಅಭಿನಂದನಾ ಭಾಷಣ ಮಾಡಿದರು. ನಿವೃತ್ತಿಗೊಂಡ ಯಶಸ್ವತಿಯವರ ಪತಿ ಸೀತಾರಾಮ ಗೌಡ ಉಳುವಾರು ಉಪಸ್ಥಿತರಿದ್ದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಸಮಾರಂಭದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಹರೀಶ್ ಕುಮಾರ್ ಪಿ, ವಿಭಾಗ ಮುಖ್ಯಸ್ಥರುಗಳಾದ ಎಂ. ಎನ್. ಚಂದ್ರಶೇಖರ್ , ಯತೀಶ್ ಕೆ.ಎನ್, ವಿವೇಕ್ ಪಿ, ರವಿಶಂಕರ್ ಹೊಳ್ಳ, ರಮಾದೇವಿ, ಬಿಂದು ಕೆ ವಿ ಕ ಅಧೀಕ್ಷಕ ಶಿವರಾಮ ಕೇರ್ಪಳ ಮತ್ತು ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಚಂದ್ರಶೇಖರ ಬಿಳಿನೆಲೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments