ಬೈಂದೂರು : ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ

ಶ್ರೀ ರಾಮಕ್ಷತ್ರಿಯ ಸಂಘ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಬೈಂದೂರು ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಸಂಭ್ರಮದಲ್ಲಿ ನಡೆಯಿತು.
ಬೆಳಿಗ್ಗೆ ದೇವತಾ ಪ್ರಾರ್ಥನೆ ಕರ್ಮಾರಂಭ ಧ್ವಜಾರೋಹಣ ಮತ್ತು ವಿವಿಧ ವಾದ್ಯಘೋಷಗಳೊಂದಿಗೆ ದಿಬ್ಬಣ ಎದುರುಗೊಳ್ಳುವಿಕೆ, ವಧು ನಿರೀಕ್ಷಣೆ, ಅರಶಿಣ ಕುಂಕುಮ ಸಮರ್ಪಣೆ, ತಾಳಿ ಕಟ್ಟುವುದು, ಧಾರೆ ಎರೆಯುವುದು, ಚಿನ್ನಾಭರಣ ಮತ್ತು ಕಪ್ಪ ಕಾಣಿಕೆ ಸಮರ್ಪಣೆ, ಅಷ್ಟಾವಧಾನ ಸೇವೆ, ಪ್ರಸನ್ನ ಪೂಜೆ ಮೊದಲಾದ ಧಾರ್ಮಿಕ ಹಾಗೂ ಪೂರ್ವಾಹ್ನ 12.20ಕ್ಕೆ ಒದಗುವ ಶುಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶ್ರೀಮದ್ ಸ್ವರ್ಣವಲ್ಲಿ ಮಠಾದೀಶ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿಯಲ್ಲಿ ವಿದ್ವಾನ್ ವೆಂಕಟ್ಟೆ ತಿಮ್ಮಣ್ಣ ಪರಮೇಶ್ವರ ಭಟ್ಟರ ನೇತೃತ್ವದಲ್ಲಿ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವವು ಸಂಭ್ರಮದಲ್ಲಿ ನಡೆಯಿತು. ಮಧ್ಯಾಹ್ನ ಮಹಾ ಸಂತರ್ಪಣೆ ಕೂಡ ನೆರವೇರಿತು
ದೇವಸ್ಥಾನ ಸುತ್ತಲೂ ಹೂವಿನ ಅಲಂಕಾರ ದೀಪಲಂಕಾರ ಕಂಗೊಳಿಸ್ತಿತ್ತು.
18ನೇ ವರ್ಷದ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವದ ಸೇವಾಕರ್ತರು ದಿ| ಸುಬ್ರಾಯ ನಾಯ್ಕ ಮತ್ತು ದಿ.ವಿಲಾಸಿನಿ ನಾಯ್ಕ ದೊಡ್ಡನಾಯ್ಕರಮನೆ ಪಡುವರಿ ಇವರ ಸ್ಮರಣಾರ್ಥ ಗಾಯತ್ರಿ ಮತ್ತು ಕಮಾಂಡರ್ ರಾಜೇಶ ಸುಬ್ರಾಯ ನಾಯ್ಕ ಮತ್ತು ಮಕ್ಕಳು ದೊಡ್ಡನಾಯ್ಕರಮನೆ ಕುಟುಂಬಸ್ಥರು ಪಡುವರಿ ಕಾರವಾರ, ಆಶಾ ಮತ್ತು ಗೋಪಾಲಕೃಷ್ಣ ನಾಯ್ಕ ಮತ್ತು ಮಕ್ಕಳು ಪಡುವರಿ ದೊಡ್ಡನಾಯ್ಕರಮನೆ ಕುಟುಂಬಸ್ಥರು ಹಾಗೂ ಸರೋಜಿನಿ ಮತ್ತು ಎಂ. ಗಣಪತಿ ಮಾಪಾರಿಮನೆ ತುಮಕೂರು ಮತ್ತು ಮಾಪಾರಿಮನೆ ಕುಟುಂಬಸ್ಥರು ಪಡುವರಿ ಇವರ ಸೇವೆಯಾಗಿರುತ್ತದೆ.
ಈ ಸಂದರ್ಭದಲ್ಲಿ ಶ್ರೀ ರಾಮಕ್ಷತ್ರಿಯ ಸಂಘ ಬೈಂದೂರಿನ ಆಡಳಿತ ಮಂಡಳಿ ಅಧ್ಯಕ್ಷರು ರಾಮಕೃಷ್ಣ ಸಿ ಮತ್ತು ಸದಸ್ಯರು ಹಾಗೂ ಮೊಕ್ತೇಸರರು, ಶ್ರೀ ರಾಮಕ್ಷತ್ರಿಯ ಯುವಕ ಸಮಾಜ ಅಧ್ಯಕ್ಷರು ಹಾಗೂ ಸದಸ್ಯರು, ಶ್ರೀ ರಾಮಕ್ಷತ್ರಿಯ ಮಾತೃ ಮಂಡಳಿಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
