ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ : ಅಧ್ಯಕ್ಷರಾಗಿ ಕೆ.ಸಿ.ಸದಾನಂದ,ಉಪಾಧ್ಯಕ್ಷರಾಗಿ ದಿನೇಶ್ ಮಡಪ್ಪಾಡಿ ಆಯ್ಕೆ

ಸುಳ್ಯ: ಸುಳ್ಯ ಶ್ರೀ ವೆಂಕಟರಮಣ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿ ನೂತನ ಅಧ್ಯಕ್ಷರಾಗಿ ಕೆ.ಸಿ.ಸದಾನಂದ ಹಾಗೂ ಉಪಾಧ್ಯಕ್ಷರಾಗಿ ದಿನೇಶ್ ಮಡಪ್ಪಾಡಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಇಂದು ನಡೆದ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಅವಿರೋಧ ಆಯ್ಕೆ ನಡೆಯಿತು. ಸಹಕಾರ ಇಲಾಖೆಯ ಶೋಭಾ ಎನ್.ಎಸ್. ಚುನಾವಣಾಧಿಕಾರಿಯಾಗಿದ್ದರು.
ನಿರ್ದೇಶಕರಾದ ಪಿ.ಸಿ.ಜಯರಾಮ, ಎ.ವಿ.ತೀರ್ಥರಾಮ, ಜಾಕೆ ಸದಾನಂದ ಗೌಡ, ಚಂದ್ರಾ ಕೋಲ್ಚಾರ್, ಪಿ.ಎಸ್.ಗಂಗಾಧರ, ಮೋಹನ್ ರಾಮ್ ಸುಳ್ಳಿ, ಶೈಲೇಶ್ ಅಂಬೆಕಲ್ಲು, ಲಕ್ಷ್ಮೀನಾರಾಯಣ ನಡ್ಕ, ದೊಡ್ಡಣ್ಣ ಬರೆಮೇಲು, ಸದಾನಂದ ಮಾವಜಿ, ದಾಮೋದರ ನಾರ್ಕೋಡು, ನಳಿನಿ ಸೂರಯ್ಯ, ಪ್ರೇಮಾ ಲೋಕೇಶ್, ಜಯಲಲಿತಾ ಬಡ್ಡಡ್ಕ, ವೃತ್ತಿಪರ ನಿರ್ದೇಶಕರಾದ ಡಾ.ಎನ್.ಎ.ಜ್ಞಾನೇಶ್ ಇದ್ದರು. ಸೊಸೈಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್ ಸ್ವಾಗತಿಸಿ, ವಂದಿಸಿದರು.
