ಮಂಜೇಶ್ವರ: ವ್ಯಕ್ತಿಯೋರ್ವನನ್ನು ಇರಿದು ಕೊಲೆ

ಮಂಜೇಶ್ವರ : ವ್ಯಕ್ತಿಯೋರ್ವನನ್ನು ಕಡಿದು ಕೊಲೆ ಮಾಡಿದ ಘಟನೆ ಮಂಜೇಶ್ವರದ ಉಪ್ಪಳದಲ್ಲಿ ನಡೆದಿದೆ.

ಕಣ್ಣೂರು ಪಯ್ಯನ್ನೂರು ನಿವಾಸಿ ಹಾಗೂ ಉಪ್ಪಳ ಮೀನು ಮಾರುಕಟ್ಟೆ ಸಮೀಪದ ಫ್ಲಾಟಿನ ನೌಕರನಾಗಿರುವ ಸುರೇಶ್ ಕುಮಾರ್ (48) ಸಾವನ್ನಪ್ಪಿದ ದುರ್ದೈವಿ.

ಮಂಗಳವಾರ ರಾತ್ರಿ ಉಪ್ಪಳ ಮೀನು ಮಾರುಕಟ್ಟೆ ಪರಿಸರದಲ್ಲಿ ಈ ದುಷ್ಕೃತ್ಯ ನಡೆದಿದೆ. ಘಟನೆಗೆ ಸಂಬಂಧಿಸಿ ಉಪ್ಪಳ ಫತ್ವಾಡಿ ಕಾರ್ಗಿಲ್ ನಿವಾಸಿ ಸವಾದ್( 23) ಎಂಬಾತನನ್ನು ಮಂಜೇಶ್ವರ ಪೊಲೀಸರು  ವಶಕ್ಕೆ ತೆಗೆದಿದ್ದಾರೆ.

ಈತ ಕಳವು ಪ್ರಕರಣ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದಕ್ಕಿಂತ ಮೊದಲು ಈ ಇಬ್ಬರ ಜಗಳ ತಾರಕ್ಕೇರಿತ್ತು. ಆದರೆ ಇದೀಗ ಇದರ ಮುಂದುವರಿದ ಭಾಗವಾಗಿ ಮಂಗಳವಾರ ರಾತ್ರಿ ಪುನಃ ಜಗಳ ಉಂಟಾಗಿ ಸವಾದ್ ಸುರೇಶ್ ನನ್ನು ಕತ್ತಿಯಿಂದ ಇರಿದು ಕೊಲೆಗೈದಿದ್ದಾನೆ. ಗಂಭೀರ ಗಾಯಗೊಂಡ ಸುರೇಶ್ ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಜೀವವನ್ನು ಉಳಿಸಲು ಸಾಧ್ಯವಾಗಿಲ್ಲ.

ಕೊಲೆಗೀಡಾದ ಸುರೇಶ್ ಕಳೆದ ಹಲವಾರು ವರ್ಷಗಳಿಂದ ಉಪ್ಪಳದಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದನೆಂದು ತಿಳಿದು ಬಂದಿದೆ.

Related Posts

Leave a Reply

Your email address will not be published.