ಸೋರುತ್ತಿರುವ ಸುರತ್ಕಲ್ ವಲಯ ಮನಪಾ ಕಚೇರಿ || SURATKAL MCC POOR WORK: CRACKED WALLS AND WATER LEAK PROBLEM.

ಸುರತ್ಕಲ್‍ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ವಲಯ ಕಚೇರಿ ಸೋರುತ್ತಿದೆ. ಕಚೇರಿಯ ಗೋಡೆಗಳು ಬಿರುಸುರಕು ಬಿಟ್ಟಿದೆ. ಈ ರೀತಿ ಮಳೆ ನೀರು ಸೋರುತ್ತಿದ್ದರೆ ಕಚೇರಿಯಲ್ಲಿ ಕುಳಿತುಕೊಳ್ಳಲು ಕಷ್ಟಕರ ಪರಿಸ್ಥಿತಿ ನಿರ್ಮಾಣವಾದಂತಾಗಿದೆ.

ಕಳೆದ ವರ್ಷ ಈ ಮಂಗಳೂರು ಪಾಲಿಕೆಯ ವಲಯ ಕಚೇರಿ ಸುರತ್ಕಲ್‍ನಲ್ಲಿ ಉದ್ಘಾಟನೆಗೊಂಡಿದ್ದು, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾದ ಸುನೀಲ್ ಕುಮಾರ್ ಅವರು ಕಟ್ಟಡವನ್ನು ಉದ್ಘಾಟಿಸಿದರು. ಕಟ್ಟಡ ಉದ್ಘಾಟಿಸಿ ವರ್ಷ ಒಂದು ಕಳೆಯುವುದಕ್ಕೆ ಮುಂಚೆನೇ ಗೋಡೆಗಳ ಮೇಲೆ ನೀರು ಸೋರುತ್ತಿದೆ. ಮಾತ್ರವಲ್ಲದೆ ಗೋಡೆಗಳು ಬಿರುಕುಬಿಟ್ಟಿದೆ. ಸುರತ್ಕಲ್ ಜನತೆ ಉಪಯೋಗಕ್ಕಾಗಿ ವಲಯ ಕಚೇರಿಯನ್ನು ತೆರೆದಿದ್ದು, ಈ ರೀತಿಯಲ್ಲಿ ಮಳೆ ನೀರು ಸೋರಿದ್ರೆ ಏನು ಪ್ರಯೋಜನ ಎಂಬಂತಾಗಿದೆ.

Suratkal's MCC Building Poor Work

ಈ ಬಗ್ಗೆ ಡಿವೈಎಫ್‍ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಅವರು ಮಾತನಾಡಿ, ಇದು ಹೊಸದಾಗಿ ಕಟ್ಟಿದ ಕಟ್ಟಡವಾಗಿದ್ದು, ಈ ಕಟ್ಟಡ ಸುರತ್ಕಲ್‍ಗೆ ಒಂದು ಹಿರಿಮೆಯಾಗಬೇಕಾಗಿತ್ತು. ಆದರೆ ಕಚೇರಿ ಒಂದು ವರ್ಷ ಪೂರ್ಣ ಆಗದಿದ್ದರು ಸೋರುತ್ತಿದೆ. ಇದರ ಹಿಂದೆ ಕಳಪೆ ಕಾಮಗಾರಿ ಎದ್ದು ತೋರುತ್ತಿದೆ. ನಿರ್ವಹಣೆ ವಹಿಸಿಕೊಂಡ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

Suratkal's MCC Building Poor Work

ಬಿ.ಕೆ ಇಮ್ತಿಯಾಜ್, ಡಿವೈಎಫ್‍ಐ ಜಿಲ್ಲಾಧ್ಯಕ್ಷಒಟ್ಟಿನಲ್ಲಿ ಸುರತ್ಕಲ್ ಮಂಗಳೂರು ಪಾಲಿಕೆಯ ವಲಯ ಕಚೇರಿ ಅಧೋಗತಿಗೆ ಸಾಗಿದೆ. ಮಳೆ ನೀರು ಸೋರುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ. ಈ ಬಗ್ಗೆ ಅಲ್ಲಿನ ಶಾಸಕರು ಮತ್ತು ಜನಪ್ರತಿನಿಧಗಳು ಎಚ್ಚೆತ್ತು ಸೂಕ್ತ ವ್ಯವಸ್ಥೆ ಕಲ್ಪಿಸಬೇಕಾಗಿದೆ.


Related Posts

Leave a Reply

Your email address will not be published.