ಮಂಜೇಶ್ವರ : ತೋಟದ ಕೆಲಸಕ್ಕಿದ್ದ ವ್ಯಕ್ತಿ ಕುಸಿದು ಬಿದ್ದು ಮೃತ್ಯು || A MAN WHO WAS WORKING IN THE GARDEN COLLAPSED AND DIED

ಮಂಜೇಶ್ವರದ ವರ್ಕಾಡಿ ಕುಂಡಡ್ಕ ಎಂಬಲ್ಲಿ ರಬ್ಬರ್ ತೋಟದಲ್ಲಿ ಕೆಲಸಕ್ಕಿದ್ದ ತನಿಯ ಎಂಬ ವ್ಯಕ್ತಿ ದಿಢೀರ್ ಅಸೌಖ್ಯಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮಜೀರ್ ಪಳ್ಳ ಟೌನ್ ಸೋಶಿಯಲ್ ವರ್ಕ್ ತಂಡದ ಅಧ್ಯಕ್ಷ ಮುಸ್ತಫಾ ಕಡಂಬಾರ್ ರವರ ನೇತೃತ್ವದ ಕಾರ್ಯಕರ್ತರು ವರ್ಕಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಿದ್ದಾರೆ. ಬಳಿಕ ವ್ಯಕ್ತಿಯ ವಿಳಾಸವನ್ನು ಪತ್ತೆ ಹಚ್ಚಿದ ಕಾರ್ಯಕರ್ತರು ಕಾಞಂಗಾಡಿನಲ್ಲಿರುವ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಲುಪಿದ ಮಂಜೇಶ್ವರ ಠಾಣೆಯ ಎಸ್ ಐ ಅನ್ಸಾರ್ ನೇತೃತ್ವದ ಪೆÇಲೀಸರು ಸಾವನ್ನಪ್ಪಿದ ವ್ಯಕ್ತಿಯ ಪಂಚೆನಾಮೆ ನಡೆಸಿ, ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮಜೀರ್ ಪಳ್ಳ ಟೌನ್ ಸೋಶಿಯಲ್ ವರ್ಕ್ ತಂಡ ಶವವನ್ನು ಕಾಞಂಗಾಡಿಗೆ ತಲುಪಿಸಿದ್ದಾರೆ.

ವರ್ಕಾಡಿ ಸರಕಾರಿ ಆಸ್ಪತ್ರೆಯಲ್ಲಿ ಶವವನ್ನು ಇಡಲು ಸರಿಯಾದ ವ್ಯವಸ್ಥೆ ಇಲ್ಲದೆ ತಾಸುಗಳ ತನಕ ಪರದಾಡಬೇಕಾದ ಪರಿಸ್ಥಿತಿ ಬಂದೊದಗಿರುವುದಾಗಿ ಕಾರ್ಯಕರ್ತರು ಆರೋಪಿಸಿದ್ದಾರೆ.

Related Posts

Leave a Reply

Your email address will not be published.