ಚಿತ್ರಾಪುರದಲ್ಲಿ ಕಡಲ್ಕೊರೆತ ತಡೆ ಕಾಮಗಾರಿಯನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ವೀಕ್ಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಡಲ್ಕೊರೆತ ತಡೆಗೆ ಈ ಭಾಗದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಅಂದಾಜು 4.60 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಚಿತ್ರಾಪುರದಲ್ಲಿ ಮೀನುಗಾರಿಕೆಗೆ ಮತ್ತು ಧಾರ್ಮಿಕ ಕಾರ್ಯಗಳಿಗೆ ಅಡಚಣೆಯಾಗದಂತೆ ಈಗಿರುವ
ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯಕ್ರಮದ ಅಂಗವಾಗಿ ಪಾದುಕಾನ್ಯಾಸ ಕಾರ್ಯಕ್ರಮ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಶ್ರೀಪಾದರ ಮುಂದಾಳತ್ವದಲ್ಲಿ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ಮಾರ್ಗದರ್ಶನ ಮತ್ತು ವಾಸ್ತು ತಜ್ಞ ಕುಡುಪು ಶ್ರೀ ಕೃಷ್ಣರಾಜ ತಂತ್ರಿಗಳ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನದ ಅನುಸಾರ ಜರುಗಿತು. ಮಂಗಳೂರು ಉತ್ತರ ವಲಯದ ಶಾಸಕ ಡಾ. ವೈ ಭರತ್ ಶೆಟ್ಟಿ, ದಾನಿಗಳಾದ ದಿ. ಕಲ್ಬಾವಿ
ಪವಿತ್ರ ರಮಝಾನ್ನ 30 ವೃತಗಳನ್ನು ಅನುಷ್ಠಾನಗೊಳಿಸಿದ ದ.ಕ.ಜಿಲ್ಲೆಯಲ್ಲಿ ಇಂದು ಬೆಳಗ್ಗಿನಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ `ಈದುಲ್ ಫಿತ್ರ್’ ಆಚರಿಸಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಈದುಲ್ ಫಿತ್ರ್ ಸಂಭ್ರಮದ ವಾತಾವರಣ ಕಂಡು ಬಂದಿದೆ. ಸುರತ್ಕಲ್ನ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಭ್ರಮದಿಂದ ಈದುಲ್ ಫಿತ್ರ್ ಆಚರಿಸಿದರು. ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಉಪವಾಸಿಗರು ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ ಹಬ್ಬವನ್ನು
ರಾಷ್ಟ್ರೀಯ ಮತ್ತು ದ.ಕ. ಜಿಲ್ಲಾ ಇಂಟಕ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್, ಪಣಂಬೂರು ಮೊಗವೀರ ಮಹಾಸಭಾ ಚಿತ್ರಾಪುರ ವತಿಯಿಂದ ಶ್ರಮಿಕರ ಸಂಭ್ರಮದ ಕ್ರೀಡಾ ಕೂಟವು ಬಹಳ ಅದ್ಧೂರಿಯಾಗಿ ನಡೆಯಿತು. ಶನಿವಾರ ಮುಂಜಾನೆ ನಡೆದ ತ್ರೋಬಾಲ್ ಪಂದ್ಯಾಟದಲ್ಲಿ 17 ಮಹಿಳೆಯರ ತಂಡ ಪಾಲ್ಗೊಳ್ಳಲು ನೋಂದಾವಣಿಯಾಗಿತ್ತು. ಇದರ ಜತೆಗೆ ಗಾಳಿ ಪಟ ಪ್ರದರ್ಶನ, ಸರ್ಫೀಂಗ್ ಪ್ರದರ್ಶನಕ್ಕೂ ಉತ್ತಮ ವ್ಯವಸ್ಥೆ ಮಾಡಲಾಗಿತ್ತು. ಇಂಟಕ್ನ ಸಹ ಕಾರ್ಮಿಕ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಸಂಸ್ಥೆ ಬಂಟರ ಸಂಘ ಸುರತ್ಕಲ್ ಬಂಟರ ಸಂಘ ದ ವತಿಯಿಂದ “ಯಕ್ಷ ಸಿರಿ” ಬಂಟರ ಸಂಘ ಸುರತ್ಕಲ್ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನಾ ಸಮಾರಂಭ ಕಾರ್ಯಕ್ರಮವು ಎಪ್ರಿಲ್ 14ರಂದು ಸಂಜೆ 4.00 ,ಸುರತ್ಕಲ್ ನ ಬಂಟರ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಪಂಚ ಯಕ್ಷಗಾನ ಮೇಳಗಳ ಸಂಚಾಲಕರಾದ ಪಳ್ಳಿ ಕಿಶನ್ ಹೆಗ್ಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು
ಮಂಗಳೂರಿನ ಶ್ರೀನಿವಾಸ ಶೈಕ್ಷಣಿಕ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭವು ಮುಕ್ಕದಲ್ಲಿರುವ ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಲಾಜಿಯ ಅವರಣದಲ್ಲಿ ಜರುಗಿತು. ಹಿರಿಯ ಐಎಎಸ್ ಅಧಿಕಾರಿ, ಕರ್ನಾಟಕ ರಾಜ್ಯ ಮುಖ್ಯ ಮಂತ್ರಿಗಳ ಕಾರ್ಯದರ್ಶಿಗಳು ಹಾಗೂ ಇ-ಗವರ್ನೆನ್ಸ್ ವಿಭಾಗದ ಕಾರ್ಯದರ್ಶಿಗಳಾದ ಶ್ರೀ ವಿ.ಪೊನ್ನುರಾಜ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಗಳೂರಿನ ಎ ಶಾಮರಾವ್
ಚಿತ್ರಾಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜೀರ್ಣೋದ್ದಾರ ಅಂಗವಾಗಿ ದೇವಸ್ಥಾನದ ನೂತನ ಶಿಲಾಮಯ ಸುತ್ತು ಪೌಳಿ ಹಾಗೂ ಶ್ರೀ ಗಣಪತಿ, ಶ್ರೀ ಧರ್ಮಶಾಸ್ತಾ ದೇವರ ಗರ್ಭಗೃಹ ಶಿಲಾನ್ಯಾಸ ಮತ್ತು ನೂತನ ಧ್ವಜ ಸ್ತಂಭ ತೈಲಾಧಿವಾಸ ನಡೆಯಿತು. ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಕೃಷ್ಣ ರಾಜ ತಂತ್ರಿ ಅವರ ಪೌರೋಹಿತ್ಯದಲ್ಲಿ ವೇದ ಮೂರ್ತಿ ಕುಡುಪು ನರಸಿಂಗ ತಂತ್ರಿ ಶಿಲಾನ್ಯಾಸಗೈದರು.
ಚಿತ್ರಾಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಿದ್ಧತೆಯಲ್ಲಿದ್ದು, ಗಣಪತಿ ದೇವರು ಮತ್ತು ಧರ್ಮಶಾಸ್ತ್ರ ದೇವರ ಮೂರ್ತಿಗಳನ್ನು ಸಂಕೋಚಗೊಳಿಸಿದ ಬಳಿಕ ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯ ನಡೆಯಿತು.ಇದಕ್ಕೆ ಪೂರ್ವಭಾವಿಯಾಗಿ ವಿವಿಧ ಹೋಮ, ಕಲಶಾಭಿಷೇಕಗಳು ನಡೆದವು. ಧೂಮಾವತಿ ದೈವವನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯ ನಡೆಯಿತು. ಈ ಸಂದರ್ಭ ಗೋವಿನ ಗಂಡು ಕರುವಿನಿಂದ ಮಾಡಿಬ ಹೆಂಚು ಎಳೆಸುವ ಮೂಲಕ ಕರಸೇವೆಗೆ ಸಾಂಕೇತಿಕ ಚಾಲನೆಯನ್ನು
ಸುರತ್ಕಲ್: “ರಾಜ್ಯ ಇಂಟಕ್, ಮೊಗವೀರ ಮಹಾಸಭಾ, ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮತ್ತು ಹಲವಾರು ಸಂಘಟನೆಗಳ ಸಹಕಾರದೊಂದಿಗೆ ಏಪ್ರಿಲ್ 30 ಹಾಗೂ ಮೇ 1ರಂದು ಚಿತ್ರಾಪುರ ಕಡಲ ತೀರದಲ್ಲಿ ಬೀಚ್ ಫೆಸ್ಟ್ ಸಂಭ್ರಮ ನಡೆಯಲಿದೆ” ಎಂದು ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಹೇಳಿದರು.ಮಂಗಳವಾರ ಸಂಜೆ ಚಿತ್ರಾಪುರ ಬೀಚ್ ನಲ್ಲಿ ಕಾರ್ಯಕ್ರಮದ ಲಾಂಛನವನ್ನು ಅನಾವರಣಗೊಳಿಸಿ ಮಾತಾಡಿದಅವರು, “ಏಪ್ರಿಲ್ 30 ಮತ್ತು ಮೇ 1ರಂದು ಕಾರ್ಮಿಕರಿಗಾಗಿ ಬೀಚ್ ಫೆಸ್ಟ್
ಸುರತ್ಕಲ್ನ ಹೃದಯಭಾಗವಾದ ಅಭಿಷ್ ಮಾಲ್ನಲ್ಲಿ ಗ್ಯಾಲಕ್ಸಿ ಮಲ್ಟಿಪ್ಲೆಕ್ಸ್ ಸಿನೆಮಾ ಥಿಯೇಟರ್ ಶುಭಾರಂಭಗೊಂಡಿತು. ಮೂರು ಸಿನೆಮಾ ಹಾಲ್ಗಳು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಿದ್ದು ಇಂದು ನೂತನ ಚಿತ್ರಮಂದಿರ ಉದ್ಘಾಟನೆಗೊಂಡಿತು. ಸುರತ್ಕಲ್ನ ಹೃದಯಭಾಗದಲ್ಲಿ ಗ್ಯಾಲಕ್ಸಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಶುಭಾರಂಭಗೊಂಡಿದ್ದು, ನೂತನ ಚಿತ್ರಮಂದಿರದಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ರಿಬ್ಬನ್ ಕತ್ತರಿಸಿ