Home Posts tagged #bantwala (Page 15)

ಮೋದಿ, ಅದಾನಿ, ಅಂಬಾನಿಗೆ ಬಂದ ಅಮೃತಕಾಲ ದಲಿತರಿಗೆ ಬರುವುದು ಯಾವಾಗ : ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಪ್ರಶ್ನೆ

ಬಂಟ್ವಾಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಸಚಿವರಿಗೆ, ದೊಡ್ಡ ಉದ್ಯಮಿಗಳಿಗೆ ಇಂದು ಅಮೃತಕಾಲ, ಪ್ರತಿದಿನವೂ ದಲಿತ ದೌರ್ಜನ್ಯ ನಡೆಯುತ್ತಿದ್ದು, ಅದೀಗ ಹೆಚ್ಚಾಗಿದೆ, ದಲಿತರಿಗೆ ಅಮೃತ ಕಾಲಬರುವುದು ಯಾವಾಗ ಎಂದು ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ ಪ್ರಶ್ನಿಸಿದ್ದಾರೆ. ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ಮತ್ತು

ಬಂಟ್ವಾಳ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

ಶನಿವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಬಿ.ಸಿ.ರೋಡ್ ಸಮೀಪದ ಮಿತ್ತಬೈಲು ನಿವಾಸಿ, ಶಾಲಾ ಬಾಲಕನೋರ್ವನ ಮೃತದೇಹ ಕಳ್ಳಿಗೆ ಗ್ರಾಮದ ಕುಪ್ಪಿಲ ಎಂಬಲ್ಲಿ ಕೆರೆಯಲ್ಲಿ ಪತ್ತೆಯಾದ ಘಟನೆ ಶನಿವಾರ ತಡ ರಾತ್ರಿ ನಡೆದಿದೆ. ಸ್ಥಳೀಯ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ, ಬಿ.ಸಿ.ರೋಡಿನ ಖಾಸಗಿ ಆಂಗ್ಲ ಮಾಧ್ಯಮ ಶಾಲಾ 8ನೇ ತರಗತಿ ವಿದ್ಯಾರ್ಥಿ ಅಝೀಂ (13) ಮೃತ ಬಾಲಕ ಎಂದು ಗುರುತಿಸಲಾಗಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ಪಾಣೆಮಂಗಳೂರು ಅಜ್ಜಿ ಮನೆಗೆ ಬಂದಿದ್ದ ಬಾಲಕ ಅಲ್ಲಿ

ರಸ್ತೆ ರಫಘಾತದಲ್ಲಿ ಕೊಡಂಗೆಯ ಸದಾಶಿವ ಆಚಾರ್ಯ ನಿಧನ

ಬಂಟ್ವಾಳ: ಇಲ್ಲಿನ ಕೊಡಂಗೆ ನಿವಾಸಿ ಸದಾಶಿವ ಆಚಾರ್ಯ (77) ಅವರು ಶುಕ್ರವಾರ ತಡರಾತ್ರಿ ಬಿ.ಸಿ.ರೋಡಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದರು.ಮೃತರು ಪತ್ನಿ 4ಗಂಡು ಹಾಗೂ 5ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಪುತ್ತೂರಿನ ಸಂಬಂಧಿಯ ಮನೆಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸು ಮನೆಗೆ ಬರುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರು ಬಿ.ಸಿ.ರೋಡಿನ ಪದ್ಮ ಪೆಟ್ರೋಲ್ ಪಂಪ್ ಬಳಿ ಆಕಸ್ಮಿಕವಾಗಿ ಸ್ಕಿಡ್ ಆಗಿ ಬಿದ್ದು ಗಂಭೀರ

ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4ರ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ಜಿಲ್ಲೆಯ ಪ್ರತಿಷ್ಠಿತ ಸುದ್ದಿವಾಹಿನಿ ವಿ4 ನ್ಯೂಸ್ ಹಾಗೂ ತುಳುಕೂಟ ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಎ.16ರಂದು ಭಾನುವಾರ ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನದ ಬಳಿಯ ಸ್ಪರ್ಶಾ ಕಲಾ ಮಂದಿರರದಲ್ಲಿ ನಡೆಯಲಿರುವ ನಾಲ್ಕನೆ ಸೀಸನ್‍ನ ಕಾಮಿಡಿ ಪ್ರೀಮಿಯರ್ ಲೀಗ್‍ನ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಗುರುವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಿತು. ಬಂಟ್ವಾಳ ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ಆಮಂತ್ರಣ ಪತ್ರಿಕೆ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ : 108 ತೆಂಗಿನ ಕಾಯಿ ಗಣಯಾಗ ಹಾಗೂ ಮೂಡಪ್ಪ ಸೇವೆ

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 108 ತೆಂಗಿನ ಕಾಯಿ ಗಣಯಾಗ ಹಾಗೂ ಮೂಡಪ್ಪ ಸೇವೆ ವಿಜ್ರಂಭಣೆಯಿಂದ ನಡೆಯಿತು. ಬಂಟ್ವಾಳದ ಉದ್ಯಮಿ ನಾಗೇಶ್ ಸಾಲ್ಯಾನ್ ಹಾಗೂ ಪಲ್ಲವಿ ಎನ್. ಸಾಲ್ಯಾನ್ ಇವರು ಸೇವಾರ್ಥವಾಗಿ 108 ತೆಂಗಿನಕಾಯಿಯ ಗಣಯಾಗ, ಮೂಡಪ್ಪ ಸೇವೆ ಹಾಗೂ ರಂಗ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭ ಶ್ರೀ ದೇವರನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.

ಬಂಟ್ವಾಳ : 170ಕ್ಕೂ ಹೆಚ್ಚು ಗಡಿಯಾರಗಳಿರುವ ಮನೆ

ಮನುಷ್ಯನ ಜೀವನದಲ್ಲಿ ಸಮಯಕ್ಕೆ ಎಷ್ಟು ಮಹತ್ವವಿದೆಯೋ, ಸಮಯವನ್ನು ಸೂಚಿಸುವ ಗಡಿಯಾರಕ್ಕೂ ಅಷ್ಟೇ ಪ್ರಾಮುಖ್ಯತೆಯಿದೆ. ಇಂದಿನ ಯುಗದಲ್ಲಿ ಕನಿಷ್ಟ ಒಂದಾದರೂ ಗಡಿಯಾರ ಇಲ್ಲದ ಮನೆ ಇರೋದು ಅಪರೂಪವೇ ಅಲ್ಲವೇ. ಆದರೆ ಈ ಮನೆಯಲ್ಲಿ ಮಾತ್ರ ಎಲ್ಲಿ ನೋಡಿದರೂ ಅಲ್ಲಿ ಗಡಿಯಾರ. 170 ಕ್ಕಿಂತಲೂ ಹೆಚ್ಚು ಗಡಿಯಾರಗಳಿರುವ ಈ ಮನೆ ಒಂದು ಗಡಿಯಾರಗಳ ಮ್ಯೂಸಿಯಂ. ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡ್ತಮುಗೇರು ಸಮೀಪದ ಶಶಿ ಭಟ್ ಪಡಾರ್ ಎಂಬವರಿಗೆ ಸೇರಿದ ಮನೆ.

ಬಂಟ್ವಾಳ: ದ.ಕ. ಗ್ಯಾರೇಜ್ ಮಾಲಕರ ಸಂಘದ ಮಹಾಸಭೆ

ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇದರ ಬಂಟ್ವಾಳ ವಲಯದ ವಾರ್ಷಿಕ ಮಹಾಸಭೆ ಹಾಗೂ ನೂತನ ಜಿಲ್ಲಾ ಅಧ್ಯಕ್ಷರ ಭೇಟಿ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬಜಾರ್ ಸಮೂಹ ಸಂಸ್ಥೆಗಳ ಆಡಳಿತ ಪಾಲುದಾರ ಸುಧಾಕರ್ ಆಚಾರ್ಯ ಉದ್ಘಾಟಿಸಿದರು. ಅವರು ಮಾತನಾಡಿ ನಾವು ಶಕ್ತಿಯುತರಾದಾಗ ಸಂಘಟನೆಯು ಬಲಯುತವಾಗಿರುತ್ತದೆ. ಸಂಘಟನೆಯಲ್ಲಿ ಇರುವ ಜೊತೆಗೆ ಸಮಾಜದ ಕಾರ್ಯದಲ್ಲೂ ತೊಡಗಿಸಿಕೊಳ್ಳಬೇಕಾಗಿದೆ ಎಂದರು. ಮುಖ್ಯ ಅತಿಥಿ

ಬಂಟ್ವಾಳ : ಮಹಿಳೆ ಆತ್ಮಹತ್ಯೆಗೆ ಪ್ರೇರಣೆ ನೀಡಿದ ವ್ಯಕ್ತಿಯ ವಿರುದ್ದ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಪತಿ ಮನವಿ

ಬಂಟ್ವಾಳ: ಸಜೀಪಪಡು ಗ್ರಾಮದ ಸೇನರಬೆಟ್ಟು ನಿವಾಸಿ ವಿವಾಹಿ ಮಹಿಳೆಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ಫೆಬ್ರವರಿ 14ರಂದು ನಡೆದಿದ್ದು ಮಹಿಳೆಯ ಸಾವಿನ ಬಗ್ಗೆ ಆಕೆಯ ಪತಿ ಸಂಶಯ ವ್ಯಕ್ತಪಡಿಸಿ, ಆತ್ಮಹತ್ಯೆಗೆ ಪ್ರೇರಣೆ ನೀಡಿದ ವ್ಯಕ್ತಿಯ ವಿರುದ್ದ ನಿಷ್ಪಕ್ಷಪಾತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿಯವರಿಗೆ ಮನವಿಯ ಮೂಲಕ ಆಗ್ರಹಿಸಿದ್ದಾರೆ. ಇಲ್ಲಿನ ನಿವಾಸಿ ಸತೀಶ್ ಪಿ. ಎಂಬವರ ಪತ್ನಿ ಬೀನಾ ಸಿ.

ಚುನಾವಣೆ ಜಾಗೃತಿ : ಬಣ್ಣದ ಚಿತ್ರಗಳಿಂದ ಸೆಳೆಯುವ ಮತಗಟ್ಟೆಗಳು

ಬಂಟ್ವಾಳ: ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳು ತಯಾರಿಯನ್ನು ಆರಂಭಿಸಿದೆ. ಇತ್ತ ಚುನಾವಣೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಲು ದ.ಕ. ಜಿಲ್ಲಾಡಳಿತವೂ ಕಾಯೋನ್ಮುಖವಾಗಿದ್ದು ಆಯ್ದ ಮತಗಟ್ಟೆಗಳಲ್ಲಿ(ಶಾಲೆಗಳಲ್ಲಿ) ಬಣ್ಣದ ಚಿತ್ರಗಳನ್ನು ರಚಿಸಿ ಮತದಾರರನ್ನು ಮತಗಟ್ಟೆಗೆ ಸೆಳೆಯಲು ಹೊಸ ಪ್ರಯತ್ನ ನಡೆಸಿದೆ. ಕರಾವಳಿಯ ಜಾನಪದ ಕಲೆಗಳಾದ ಯಕ್ಷಗಾನ, ಕಂಬಳ ಸೇರಿದಂತೆ ಪರಂಪರೆ

ಬಂಟ್ವಾಳ: ಕಾಂಗ್ರೆಸ್ ವತಿಯಿಂದ ಕರಾವಳಿ ಪ್ರಜಾಧ್ವನಿ ಯಾತ್ರೆ

ಬಂಟ್ವಾಳ: ಕರ್ನಾಟಕವನ್ನು ಸಾಮಾಜಿಕ ಸಾಮರಸ್ಯದ, ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಕಾಂಗ್ರೆಸ್ ಆಡಳಿತದ ಸರಕಾರವನ್ನು ಆಯ್ಕೆ ಮಾಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ನಡೆಯುತ್ತಿರುವ ಕರಾವಳಿ ಪ್ರಜಾಧ್ವನಿ ಯಾತ್ರೆ ಪ್ರಯುಕ್ತ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವಗ್ಗ, ಕಾರಿಂಜ ಕ್ರಾಸ್ ಜಂಕ್ಷನ್‌ನಲ್ಲಿ ಶನಿವಾರ ನಡೆದ ಸಾರ್ವಜನಿಕ