HomeFresh Newsತುಳುವರ ದೈವಾರಾಧನೆ ಭೂತಾರಾಧನೆಯನ್ನು ಮೊದಲು ದಾಖಲೆ ಮಾಡಿದವರು ಎ. ಸಿ. ಬರ್ನೆಲ್

ತುಳುವರ ದೈವಾರಾಧನೆ ಭೂತಾರಾಧನೆಯನ್ನು ಮೊದಲು ದಾಖಲೆ ಮಾಡಿದವರು ಎ. ಸಿ. ಬರ್ನೆಲ್

ತುಳುವರ ದೈವಾರಾಧನೆ ಭೂತಾರಾಧನೆಯನ್ನು ಮೊದಲು ದಾಖಲೆ ಮಾಡಿದವರು ಎ. ಸಿ. ಬರ್ನೆಲ್. ಅವರು ಮಂಗಳೂರಿನ ಜಿಲ್ಲಾ ನ್ಯಾಯಮೂರ್ತಿ ಆಗಿದ್ದರು.

ಆದರೆ ಬರ್ನೆಲ್‍ರ ದಾಖಲೆಗಳಲ್ಲಿ ದೈವಗಳನ್ನು ಪೇಯ್, ಡೆವಿಲ್ ಎಂದು ಕರೆಯಲಾಗಿದೆ. ಆರ್ಥರ್ ಕೋಕ್ ಬರ್ನೆಲ್‍ರ ಮಾಹಿತಿದಾರ ಒಬ್ಬ ಬ್ರಾಹ್ಮಣ.
ಬರ್ನೆಲ್‍ರಿಗೆ ಈ ಮಾಹಿತಿ ನುಡಿ ನೀಡಲು ಅವನು ಒಂದೂವರೆ ನೂರಟ್ಟಿಗೂ ಹಿಂದೆ ಮದರಾಸಿನಲ್ಲಿ ಓದಿದ್ದ ಎಂದು ತಿಳಿಯಬಹುದು.

1857ರಲ್ಲಿ ಬ್ರಿಟಿಷರು ಮೊದಲ ಆಧುನಿಕ ವಿಶ್ವವಿದ್ಯಾನಿಲಯಗಳನ್ನು ಕೊಲ್ಕತ್ತಾ, ಬಾಂಬೆ, ಮದರಾಸುಗಳಲ್ಲಿ ಸ್ಥಾಪಿಸಿದರು. ಪೇಯ್ ಎಂದರೆ ದೆವ್ವ, ಅತೀತ ಶಕ್ತಿ ಎಂಬ ಅರ್ಥವಿದೆ. ಈ ಮೂಲ ದ್ರಾವಿಡ ನುಡಿ ಈಗಲೂ ಬಳಕೆಯಲ್ಲಿ ಇರುವುದು ತಮಿಳಿನಲ್ಲಿ ಮಾತ್ರ.



ಮದರಾಸಿನಲ್ಲಿ ಅದಾಗಲೇ ಪೇಯ್ ಎಂದರೆ ಡೆವಿಲ್ ಎಂದು ಅರ್ಥ ನೀಡಲಾಗಿತ್ತು. ಆದ್ದರಿಂದಲೇ ಇಲ್ಲಿ ದೈವಾರಾಧನೆಯನ್ನು ಬಾರ್ಬರಸ್ ಡೆವಿಲ್ಸ್ ವರ್ಶಿಪ್ ಎಂದು ವಿವರಿಸಲಾಗಿದೆ.


ಆಡಳಿತ ಪ್ರಾಂತ್ಯವಲ್ಲದೆ ಮಂಗಳೂರು ಮದರಾಸು ವಿಶ್ವವಿದ್ಯಾನಿಲಯದ ಭಾಗವಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments