Home Posts tagged #bramhavara

ಬಜ್ಪೆಯ ಸಮ್ಯತಾಳ ಕೈಚಳಕಕ್ಕೆ ಬೇಷ್ ಎಂದ ಸಂಸದ ಕೋಟ

ಬ್ರಹ್ಮಾವರ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ಪದವಿ ಪೂರ್ವಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ 96.5 ಅಂಕ ಪಡೆದು ಶಿಕ್ಷಣದಲ್ಲಿ ಟೋಪರ್ ಆಗಿ ಚಿತ್ರ ರಚನೆ ಕಲೆಯಲ್ಲಿ ಸೂಪರ್ ಎನಿಸಿಕೊಂಡ ಬಜ್ಪೆಯ ಸಮ್ಯತ ಆಚಾರ್ಯ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ಚಿತ್ರವನ್ನು ರಚಿಸಿ ಕಾರ್ಯಕ್ರಮವೊಂದರಲ್ಲಿ ನೀಡಿ ಬೇಷ್ ಎನಿಸಿಕೊಂಡಿದ್ದಾಳೆ. ಕೋಟೇಶ್ವರದ ಕಾರ್ಯಕ್ರಮವೊಂದರಲ್ಲಿ

ಬ್ರಹ್ಮಾವರ|| ನಾರಾಯಣ ಗುರುಗಳು ಹಿಂದುಳಿದ ವರ್ಗಗಳ ಶಕ್ತಿ: ಸಚಿವ ಮಧು ಬಂಗಾರಪ್ಪ

ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದಿಂದ ಬ್ರಹ್ಮಾವರ ನಾರಾಯಣ ಗುರು ಸಭಾ ಭವನದ ಬಳಿ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಸೋಲೂರು ಮಠದ ವಿಖ್ಯಾತಾನಂದ ಸ್ವಾಮೀಜಿ ಅವರು ಶಿಲಾನ್ಯಾಸ ನೆರವೇರಿಸಿದರು. ಸಭಾ ಕಾರ್ಯಕ್ರಮವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಮಹಾ ಪುರುಷರ ದಿನಾಚರಣೆಗೆ ಸರಕಾರಿ ರಜೆ ನೀಡಿದಲ್ಲಿ ಮಹಾಪುರಷರನ್ನು ಮರೆತು ರಜೆಯ ಮಜಾ ಹೆಚ್ಚುತ್ತದೆ.

ಆ.12 ಮತ್ತು 13ರಂದು ಬ್ರಹ್ಮಾವರದಲ್ಲಿ ಸಸ್ಯ ಮೇಳ ಮತ್ತು ಆಹಾರೋತ್ಸವ

ಬ್ರಹ್ಮಾವರ ರೋಟರಿ ರೋಯಲ್, ಕೃಷಿ ಕೇಂದ್ರ ಬ್ರಹ್ಮಾವರ, ತೋಟಗಾರಿಕಾ ಇಲಾಖೆ, ಇವರ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ನಿರ್ಮಲ ಪ್ರೌಢಶಾಲಾ ಆವರಣದಲ್ಲಿ ಅಗಸ್ಟ್ 12 ಮತ್ತು 13ರಂದು ಸಸ್ಯ ಮೇಳ ಮತ್ತು ಆಹಾರೋತ್ಸವ ಜರುಗಲಿದೆ ಎಂದು ರೋಟರಿ ರೋಯಲ್ ಅಧ್ಯಕ್ಷ ಅಭಿರಾಮ್ ನಾಯಕ್ ಕಾರ್ಯಕ್ರಮದ ಆವರಣದಲ್ಲಿ ಹೇಳಿದರು. ಉಡುಪಿ ಶಾಸಕ ಯಶ್‍ಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದು ರೋಟರಿ , ಕೃಷಿ ವಿಜ್ಞಾನಿಗಳು ಇನ್ನಿತರ ಗಣ್ಯರ ಸಮ್ಮುಖದಲ್ಲಿ ಸಸ್ಯ ಮತ್ತು

ಬ್ರಹ್ಮಾವರ : ಸರ್ವರ್ ಸಮಸ್ಯೆಯಿಂದ ಪಡಿತರಕ್ಕೆ ಕಾದುಕುಳಿತ ಜನತೆ

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಪಡಿತರ ವಿತರಣಾ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಿಸಲಾಗುತ್ತಿಲ್ಲ. ಕಳೆದ 4 ದಿನದಿಂದ ಪಡಿತರದಾರರು ಕಾದು ಕಾದು ಸುಸ್ತಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ 8 ಪಡಿತರ ವಿತರಣಾ ಕೇಂದ್ರದಲ್ಲಿ 8000 ಮಂದಿ ಪಡಿತರ ಕಾರ್ಡು ಹೊಂದಿದವರು ಇದ್ದಾರೆ. ಇಲ್ಲಿನ ಬಹತೇಕ ಕೇಂದ್ರದಲ್ಲಿ ಕಳೆದ 5 ದಿನದಿಂದ ಪಡಿತರ ಸಿಗದೆ ಜನರು ಕಾದು ಸುಸ್ತಾಗಿದ್ದಾರೆ. 70 ವರ್ಷ

ಬ್ರಹ್ಮಾವರದಲ್ಲಿ ಆಂಬುಲೆನ್ಸ್ ಟಯರ್ ಸ್ಪೋಟ: ತಪ್ಪಿದ ಭಾರೀ ದುರಂತ

ಕುಂದಾಪುರ: ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್ ನ ಟಯರ್ ಸ್ಪೋಟಗೊಂಡ ಪರಿಣಾಮ ಆಂಬುಲೆನ್ಸ್ ರಸ್ತೆ ವಿಭಾಜಕವೇರಿ ಆವರಣಗೋಡೆಗೆ ಢಿಕ್ಕಿ ಹೊಡೆದ ಘಟನೆ ಬ್ರಹ್ಮಾವರ ತಾಲೂಕಿನ ಮಾಬುಕಳ ಸೇತುವೆಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಉತ್ತರಕನ್ನಡ ಮೂಲದ ಅನಾರೋಗ್ಯಪೀಡಿತ ಮಗುವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದ ಆಂಬುಲೆನ್ಸ್‌ನ ಟಯರ್ ಏಕಾಏಕಿ ಸ್ಪೋಟಗೊಂಡಿದ್ದು ಚಾಲಕನ ನಿಯಂತ್ರಣ ತಪ್ಪಿ