ಬ್ರಹ್ಮಾವರ : ಸರ್ವರ್ ಸಮಸ್ಯೆಯಿಂದ ಪಡಿತರಕ್ಕೆ ಕಾದುಕುಳಿತ ಜನತೆ
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಪಡಿತರ ವಿತರಣಾ ಕೇಂದ್ರದಲ್ಲಿ ಸರ್ವರ್ ಸಮಸ್ಯೆಯಿಂದ ಪಡಿತರ ವಿತರಿಸಲಾಗುತ್ತಿಲ್ಲ. ಕಳೆದ 4 ದಿನದಿಂದ ಪಡಿತರದಾರರು ಕಾದು ಕಾದು ಸುಸ್ತಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ 8 ಪಡಿತರ ವಿತರಣಾ ಕೇಂದ್ರದಲ್ಲಿ 8000 ಮಂದಿ ಪಡಿತರ ಕಾರ್ಡು ಹೊಂದಿದವರು ಇದ್ದಾರೆ. ಇಲ್ಲಿನ ಬಹತೇಕ ಕೇಂದ್ರದಲ್ಲಿ ಕಳೆದ 5 ದಿನದಿಂದ ಪಡಿತರ ಸಿಗದೆ ಜನರು ಕಾದು ಸುಸ್ತಾಗಿದ್ದಾರೆ.
70 ವರ್ಷ ಪ್ರಾಯದ ಸುನಂದ ಭಟ್ ಅವರು ಪಡಿತರ ಕೇಂದ್ರದಿಂದ ದೂರ ಇದ್ದು, ಮನೆಯಿಂದ ಪ್ರತೀ ದಿನ ಅಟೋ ಮೂಲಕ ಬಂದು ಪಡಿತರ ಕೊಂಡುಹೋಗುತ್ತಿದ್ದರು. ಇದೀಗ ಸರ್ವರ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.
ಬ್ರಹ್ಮಾವರ ಮುಖ್ಯ ಕಛೇರಿಯಲ್ಲಿ 2500 ಮಂದಿ ಪಡಿತರ ಕಾರ್ಡು ಹೊಂದಿದವರಿದ್ದಾರೆ. ಈಗಾಗಲೆ 70 ಶೇಖಡಾ ಮಂದಿ ಪಡಿತರ ತೆಗೆದುಕೊಂಡು ಹೋಗಿದ್ದಾರೆ. ಉಳಿದವರು ಪಡಿತರ ಅಂಗಡಿಯಲ್ಲಿ ಕಾದು ಕಾದು ಸುಸ್ತಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.