ಬ್ರಹ್ಮಾವರದಲ್ಲಿ ಆಂಬುಲೆನ್ಸ್ ಟಯರ್ ಸ್ಪೋಟ: ತಪ್ಪಿದ ಭಾರೀ ದುರಂತ

ಕುಂದಾಪುರ: ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಆಂಬುಲೆನ್ಸ್ ನ ಟಯರ್ ಸ್ಪೋಟಗೊಂಡ ಪರಿಣಾಮ ಆಂಬುಲೆನ್ಸ್ ರಸ್ತೆ ವಿಭಾಜಕವೇರಿ ಆವರಣಗೋಡೆಗೆ ಢಿಕ್ಕಿ ಹೊಡೆದ ಘಟನೆ ಬ್ರಹ್ಮಾವರ ತಾಲೂಕಿನ ಮಾಬುಕಳ ಸೇತುವೆಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಉತ್ತರಕನ್ನಡ ಮೂಲದ ಅನಾರೋಗ್ಯಪೀಡಿತ ಮಗುವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದ ಆಂಬುಲೆನ್ಸ್‌ನ ಟಯರ್ ಏಕಾಏಕಿ ಸ್ಪೋಟಗೊಂಡಿದ್ದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಬಲಬದಿಯ ರಸ್ತೆ ನುಗ್ಗಿ ಪಕ್ಕದ ಮಾಬುಕಳ ಸೇತುವೆಯ ತಡಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ.

ಸೇತುವೆಯ ತಡೆಗೋಡೆಗೆ ಡಿಕ್ಕಿಹೊಡೆದು ಅಲ್ಲಿಯೇ ನಿಂತಿದ್ದರ ಪರಿಣಾಮ ನದಿಗೆ ಉರುಳುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದು ಭಾರಿ ದುರಂತವೊಂದು ತಪ್ಪಿ ಹೋಗಿದೆ. ಘಟನೆಯಲ್ಲಿ ಮಗುವಿನ ಜೊತೆಯಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ತಾಯಿಗೆ ಗಂಭೀರ ಗಾಯಗಳಾಗಿದ್ದು ಬೆರೋಂದು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Related Posts

Leave a Reply

Your email address will not be published.