Home Posts tagged mangaluru

ಮಂಗಳೂರು: ಮಾನಸ ವಾಟರ್ ಪಾರ್ಕ್‍ನಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಸ್ಕೈ ಸೈಕ್ಲಿಂಗ್

ಮಂಗಳೂರಿನ ವಾಮಂಜೂರಿನಲ್ಲಿರುವ ಮಾನಸ ವಾಟರ್ ಪಾರ್ಕ್ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿತರನ್ನಾಗಿಸುತ್ತಿದೆ. ಇದೀಗ ಹೊಸದಾಗಿ ಸ್ಕೈ ಸೈಕ್ಲಿಂಗ್‍ನ್ನು ಪರಿಚಯಿಸುತ್ತಿದ್ದಾರೆ. ಈಗಾಗಲೇ ಮಾನಸ ವಾಟರ್ ಪಾರ್ಕ್‍ನಲ್ಲಿ ವಿವಿಧ ಪ್ರಕಾರಗಳ ನೀರಾಟದ ಮೂಲಕ ಜನರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ವಾಟರ್ ರೈಡ್, ಮ್ಯೂಸಿಕಲ್ ಫೌಂಟೇನ್, ರೈನ್

ಕ.ಸಾ.ಪ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆ.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಕಾರ್ಯಕಾರಿ ಸಮಿತಿಯ ಸಭೆ ಶಾರದಾ ವಿದ್ಯಾಲಯದಲ್ಲಿ ನಡೆಯಿತು. ಘಟಕದ ಅಧ್ಯಕ್ಷ ಡಾ.ಮಂಜುನಾಥ್ ಎಸ್. ರೇವಣಕರರವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ರತ್ನಾವತಿ ಜೆ. ಬೈಕಾಡಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗೌರವ ಕಾರ್ಯದರ್ಶಿ ಎನ್.ಗಣೇಶ್ ಪ್ರಸಾದ್ ಜೀ ಸ್ವಾಗತಿಸಿ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಶ್ರೀ ಸುಬ್ರಾಯ ಭಟ್ ಲೆಕ್ಕಪತ್ರ ಮಂಡಿಸಿದರು. ಸಭೆಯಲ್ಲಿ

ಅಮೃತ ವಿದ್ಯಾಲಯದಲ್ಲಿ ಯಶಸ್ವೀ ಸ್ವಾಸ್ಥ್ಯ ಮೇಳ

ಮಂಗಳೂರು ನಗರದ ಅಮೃತ ವಿದ್ಯಾಲಯದಲ್ಲಿ ಜನವರಿ 8 ರಂದು ಜರುಗಿದ ವಿವಿಧ ವೈಶಿಷ್ಟ್ಯತೆಗಳ “ಅಮೃತ ಆರೋಗ್ಯ ಮೇಳ” ಅತ್ಯಂತ ಯಶಸ್ವಿಯಾಗಿ ನೆರವೇರಿತು. ಯೆನಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಕ್ಯಾನ್ಸರ್ ತಪಾಸಣೆ ಮಾಡುವ ಆಧುನಿಕ ಉಪಕರಣ ಸಹಿತ ವಾಹನದಲ್ಲಿ Mammography ಹಾಗೂ Pap test ಸೌಲಭ್ಯಗಳನ್ನು ಉಚಿತವಾಗಿ ನೀಡಲಾಯಿತು. ಅಲ್ಲದೆ ಆಯುಷ್ಮಾನ್ ಭಾರತ್ ಕಾರ್ಡ್, ಕಣ್ಣಿನ ತಪಾಸಣೆ, ದಂತರೋಗ ಚಿಕಿತ್ಸೆ, ಸಾಮಾನ್ಯ ಆರೋಗ್ಯ ತಪಾಸಣೆ, ಮಕ್ಕಳ

ಮಂಗಳೂರು : ಪುತ್ತೂರಿನ ಕಾಣಿಯೂರಿನಲ್ಲಿ ಯುವಕರ ಮೇಲೆ ಗುಂಪೊಂದರಿoದ ಹಲ್ಲೆ

ಇತ್ತೀಚೆಗೆ ಪುತ್ತೂರಿನ ಕಾಣಿಯೂರಿನಲ್ಲಿ ಅಲ್ಪಸಂಖ್ಯಾತ ಸಮುದಾಯ ಸೇರಿದ ಇಬ್ಬರು ವ್ಯಾಪಾರಕ್ಕೆ ಹೋದಾಗ ಅವರ ಮೇಲೆ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದ್ದಾರೆ. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ವಿವಿಧ ಕ್ಷೇತ್ರದಲ್ಲಿ ಕಾನೂನಿನ ಸಂಪರ‍್ಣ ವಿಫಲತೆಯನ್ನು ನಾನು ಖಂಡಿಸುತ್ತೇನೆ. ಯುವಕರು ತಮ್ಮ ಹೊಟ್ಟೆಪಾಡಿಗಾಗಿ ಹಳ್ಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದಾರೆ.