ಮಂಗಳೂರು: ಮಾನಸ ವಾಟರ್ ಪಾರ್ಕ್‍ನಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಸ್ಕೈ ಸೈಕ್ಲಿಂಗ್
ಮಂಗಳೂರಿನ ವಾಮಂಜೂರಿನಲ್ಲಿರುವ ಮಾನಸ ವಾಟರ್ ಪಾರ್ಕ್ ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿತರನ್ನಾಗಿಸುತ್ತಿದೆ. ಇದೀಗ ಹೊಸದಾಗಿ ಸ್ಕೈ ಸೈಕ್ಲಿಂಗ್‍ನ್ನು ಪರಿಚಯಿಸುತ್ತಿದ್ದಾರೆ.
ಈಗಾಗಲೇ ಮಾನಸ ವಾಟರ್ ಪಾರ್ಕ್‍ನಲ್ಲಿ ವಿವಿಧ ಪ್ರಕಾರಗಳ ನೀರಾಟದ ಮೂಲಕ ಜನರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ವಾಟರ್ ರೈಡ್, ಮ್ಯೂಸಿಕಲ್ ಫೌಂಟೇನ್, ರೈನ್ ಡ್ಯಾನ್ಸ್, ಸೇರಿದಂತೆ ವಿವಿಧ ಪ್ರಕಾರಗಳ ನೀರಾಟಗಳು ಜನಮನಸೂರೆಗೊಂಡಿದೆ. ಇದೀಗ ಹೊಸದಾಗಿ ಸ್ಕೈ ಸೈಕ್ಲಿಂಗ್‍ನ್ನು ಪರಿಚಯಿಸಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.