Home Posts tagged #nitte

ನಿಟ್ಟೆ ವಿವಿಯಿಂದ ಡಬ್ಲ್ಯುಎಫ್‌ಎಂಇ ಅಧ್ಯಕ್ಷರಿಗೆ ಸನ್ಮಾನ

ಮಂಗಳೂರು – ಅಮೆರಿಕದ ವಿಶ್ವ ವೈದ್ಯಕೀಯ ಶಿಕ್ಷಣ ಒಕ್ಕೂಟದ (ಡಬ್ಲ್ಯುಎಫ್‌ಎಂಇ) ಅಧ್ಯಕ್ಷ ಪ್ರೊ.ರಿಕಾರ್ಡೊ ಲಿಯಾನ್-ಬೋರ್ಕ್ವೆಜ್ ಅವರನ್ನು ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ವತಿಯಿಂದ ಸನ್ಮಾನಿಸಲಾಯಿತು. ಪ್ರೊ.ರಿಕಾರ್ಡೊ ಲಿಯಾನ್-ಬೋರ್ಕ್ವೆಜ್ ಅವರನ್ನು ಜಾಗತಿಕ ಮಟ್ಟದಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿರುವ ಅಸಾಧಾರಣ ಕೊಡುಗೆಗಳನ್ನು

ನಿಟ್ಟೆ ವಿಶ್ವವಿದ್ಯಾಲಯ : ಜೂನ್ 8-11ರ ವರೆಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಛಾಯಾಚಿತ್ರ ಪ್ರದರ್ಶನ

ನಿಟ್ಟೆ ವಿಶ್ವವಿದ್ಯಾಲಯವು ಮಂಗಳೂರಿನ ಭಾರತ್ ಸಿನಿಮಾಸ್‍ನಲ್ಲಿ ನಾಲ್ಕನೇ ಆವೃತ್ತಿಯ ನಿಟ್ಟೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಛಾಯಾಚಿತ್ರಗಳ ಪ್ರದರ್ಶನಗಳನ್ನು ಜೂನ್ 8 ರಿಂದ 11 ರ ವರೆಗೆ ಮಂಗಳೂರಿನ ಭಾರತ್ ಸಿನಿಮಾಸ್‍ನಲ್ಲಿ ಆಯೋಜಿಸಲಾಗಿದೆ ಎಂದು ನಿಟ್ಟೆ ಇನ್ಸ್ಟಿಟ್ಯೂಷನ್ ಆಫ್ ಕಮ್ಯುನಿಕೇಶನ್ ನ ಮುಖ್ಯಸ್ಥ ಪ್ರೊ. ರವಿರಾಜ್ ಅವರು ತಿಳಿಸಿದ್ದಾರೆ . ಅವರು ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ, ನಿಟ್ಟೆ ವಿಶ್ವ ವಿದ್ಯಾಲಯ ಮತ್ತು ಇಂಟೀ ಇಂಟರ್ನ್ಯಾಷನಲ್ ವಿಶ್ವ ವಿದ್ಯಾಲಯ, ಮಲೇಷ್ಯಾ. ಶೈಕ್ಷಣಿಕ, ಸಂಶೋಧನ ಒಡಂಬಡಿಕೆ ಒಪ್ಪಂದ

ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ,ನಿಟ್ಟೆ ವಿಶ್ವ ವಿದ್ಯಾಲಯ ಮತ್ತು ಇಂಟಿ ವಿಶ್ವ ವಿದ್ಯಾಲಯ ಮಲೇಷಿಯಾ ನಡುವೆ ನೂತನ ಶೈಕ್ಷಣಿಕ ಮತ್ತು ಸಂಶೋಧನ ಒಪ್ಪಂದ ಸಮಾರಂಭ ನಡೆಯಿತು.ತಾರೀಕು ಫೆಬ್ರವರಿ 16 ಬೆಳಗ್ಗೆ 10;30 am ಗಂಟೆಗೇ ಒಪ್ಪಂದ ಸಹಿ ಸಮಾರಂಭ ನಡೆಯಿತು.ಈ ಒಪ್ಪಂದ ಎರಡು ವಿಶ್ವ ವಿದ್ಯಾಲಯ ನಡುವೆ ವಿದ್ಯಾರ್ಥಿ ವಿನಿಮಯ, ಶಿಕ್ಷಕರ ವಿನಿಮಯ, ಹಾಗೂ ನೂತನ ಸಂಶೋಧನೆಗೆ ಅವಕಾಶ ಕೊಡಲಿದೇ. ಮಲೇಷ್ಯಾ ವಿಶ್ವ ವಿದ್ಯಾಲಯದಲ್ಲಿ ನೆರೆದಿದ್ದ ಸಮಾರಂಭದಲ್ಲಿ

ನಿಟ್ಟೆ ಡಾ. ಶಂಕರ್ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜು : ವಾರ್ಷಿಕ ಕ್ರೀಡಾಕೂಟ

ಕ್ರೀಡೆ ಮನುಷ್ಯನ ಸರ್ವತೋಮುಖ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಸ್ಪರ್ಧಾತ್ಮಕ ಮನೋಭಾವ, ನಾಯಕತ್ವದ ಗುಣ, ಹೊಂದಾಣಿಕೆ, ಒಂದು ತಂಡವಾಗಿ ದುಡಿಯುವುದು ಇವೇ ಮೊದಲಾದ ಗುಣಗಳನ್ನು ಬಾಲ್ಯದಲ್ಲೇ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಬೆಳೆಸಬಲ್ಲದು. ಅಲ್ಲದೆ ಆರೋಗ್ಯದ ಸ್ಥಿರತೆ ಹಾಗೂ ಏಕಾಗ್ರತೆ ವೃದ್ಧಿಗೂ ಕ್ರೀಡೆ ಪರಿಣಾಮಕಾರಿಯಾಗಬಲ್ಲದು ಎಂದು ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆ ಸದಾ ಬೆಂಗಾವಲಾಗಿ ಪ್ರೋತ್ಸಾಹಿಸುತ್ತದೆ ಎಂದು

ನಿಟ್ಟೆ ಕ್ಷೇಮದಲ್ಲಿ ಅಂತಾರಾಷ್ಟ್ರೀಯ ಇಥೋಸ್ -5.0 ಸಮ್ಮೇಳನಕ್ಕೆ ಚಾಲನೆ

ಉಳ್ಳಾಲ:  ಮಾನವೀಕರಣದ ಸಂಕೇತದಲ್ಲಿ ಎಲ್ಲರೂ  ಬದುಕಬೇಕಿದೆ. ಸಹಿಷ್ಣುತೆ, ಗೌರವ ಮತ್ತು  ವಿನಾಯಿತಿ ನಾಗರೀಕತೆಯ ಲಕ್ಷಣಗಳಾಗಿರಬೇಕು. ವಿಶ್ವ ನೀತಿಶಾಸ್ತ್ರ, ನೈತಿಕತೆ ಹಾಗೂ ಮೌಲ್ಯಗಳನ್ನು ಒಳಗೊಂಡಿರುವುದರಿಂದ ಮನುಷ್ಯ ಎಲ್ಲಿಯೂ ಬದುಕಲು ಸಾಧ್ಯವುಳ್ಳ ವಾತಾವರಣವಿದೆ. ಇಲ್ಲವಾದಲ್ಲಿ ವಿಶ್ವವೇ ಭಯಾನಕವಾಗುತಿತ್ತು ಎಂದು  ಡಾ.ಬಿ.ಸಿ.ರಾಯ್ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ವೇದಪ್ರಕಾಶ್ ಮಿಷ್ರಾ  ಅಭಿಪ್ರಾಯಪಟ್ಟರು. ಅವರು ನಿಟ್ಟೆ

ನಿಟ್ಟೆ ಡಾ. ಶಂಕರ ಅಡ್ಯಂತಾಯ ಸ್ಮಾರಕ ಪದವಿ ಪೂರ್ವ ಕಾಲೇಜು :ಎನ್. ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

“ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಿಂದ ಕೇವಲ ಕೆಲಸ ಮಾಡಿಸಲು ಇರುವುದಲ್ಲ. ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳು ಸಾಮಾಜಿಕವಾಗಿ ತಾವು ಹೇಗೆ ಬದುಕಬೇಕು, ಜೀವನದಲ್ಲಿ ಎದುರಾಗಬಹುದಾದ ಸವಾಲುಗಳನ್ನು ಮೆಟ್ಟಿ ನಿಲ್ಲುವುದು, ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು, ಸಹಬಾಳ್ವೆಯ ಮಹತ್ವ ಮೊದಲಾದವುಗಳನ್ನು ತಿಳಿಸಿಕೊಡುತ್ತದೆ. ಒಟ್ಟಿನಲ್ಲಿ ವಿದ್ಯಾರ್ಥಿಯ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿಗೆ ಎನ್‍ಎಸ್‍ಎಸ್ ದಾರಿದೀಪವಾಗಬಲ್ಲ ಜೀವನ

ತುಳು ದಿನ ಆಚರಣೆ ಮತ್ತು ಪರಿಷ್ಕ್ರತ ತುಳು ಜ್ಞಾತಿಪಾದಸಂಚಯ ಡಿಜಿಟಲ್ ಆವೃತ್ತಿ ಲೋಕಾರ್ಪಣೆ

ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯವು ಗಾಂಧಿಜಯಂತಿಯ ಸಂದರ್ಭದಲ್ಲಿ ತುಳುದಿನವನ್ನು ಐಲೇಸಾ ತಂಡದ ಸಹಯೋಗದೊಂದಿಗೆ ಅಕ್ಟೋಬರ್ ೨ರಂದು ಆನ್ ಲೈನ್ ಮೂಲಕ ಆಚರಿಸಲಿದ್ದು ಇದರಲ್ಲಿ ವಿಶ್ವವಿದ್ಯಾನಿಲಯದ ಮಹತ್ ಭಾಷಾ ಯೋಜನೆಯಾದ ’ಪರಿಷ್ಕ್ರತ ತುಳು ಜ್ಞಾತಿಪದಸಂಚಯದ ಡಿಜಿಟಲ್ ಆವೃತ್ತಿಯನ್ನು ಕುಲಾಧಿಪತಿಯವರಾದ ಶ್ರೀ ಯನ್, ವಿನಯ ಹೆಗ್ಡೆಯವರು ಲೋಕಾರ್ಪಣೆ ಮಾಡಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿಯವರಾದ ಡಾ. ಎಂ. ಎಸ್ ಮೂಡಿತ್ತಾಯರು, ಕುಲಸಚಿವರಾದ ಡಾ.

ನಿಟ್ಟೆ (ಪರಿಗಣಿತ) ವಿಶ್ವವಿದ್ಯಾಲಯದ ಕೆ. ಎಸ್. ಹೆಗ್ಡೆ ಆಸ್ಪತ್ರೆ : ಅಣ್ಣ ತಂಗಿಯರಿಗೆ ಯಶಸ್ವಿ ಕೀಹೋಲ್ ಶಸ್ತ್ರಚಿಕಿತ್ಸೆ

ಸುಮಾರು 6 ತಿಂಗಳ ಹಿಂದೆ, ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಮಕ್ಕಳ ತಾಯಿಯು, ತನ್ನ 16ವರ್ಷದ ಮಗಳ ಅಧಿಕ ತೂಕದ ಬಗ್ಗೆ ಚಿಂತೆಗೊಂಡು ವೈದ್ಯಕೀಯ ನೆರವಿಗಾಗಿ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ಮುಖ್ಯ ಅಂತಃಸ್ರಾವಶಾಸ್ತ್ರಜ್ಞ ಡಾ| ಶ್ರೀಕೃಷ್ಣ ಆಚಾರ್ಯರನ್ನು ಸಂಪರ್ಕಿಸಿದರು. ಆಕೆಯನ್ನು ಕೂಲಂಕುಷವಾಗಿ ಪರೀಕ್ಷಿಸಿದಾಗ ಆಕೆಗೆ ಕುಶಿಂಗ್ಸ್ ಸಿಂಡ್ರೋಮ್ ಇರುವುದು ಪತ್ತೆಯಾಗಿದ್ದು, ಈ ಸ್ಥಿತಿಯು ಟ್ರಂಕಲ್ ಬೊಜ್ಜಿನ ಲಕ್ಷಣವಾಗಿದ್ದು, ದೇಹದಲ್ಲಿ ಅಧಿಕ ಸ್ಟಿರೋಯ್ಡ್ ನಿಂದಾಗಿ

ಡಾ. ಎನ್‍ ಎಸ್‍ ಎಎಂನಲ್ಲಿ ಇಂಟಿಗ್ರೇಟೆಡ್ ಪಿಯು ಬ್ಯಾಚ್‍ಗಳ ಪ್ರಾರಂಭ

ನಿಟ್ಟೆ ವಿದ್ಯಾಸಂಸ್ಥೆಯ ಅಂಗಸಂಸ್ಥೆಯಾಗಿರುವ ಮಂಗಳೂರಿನ ಡಾ| ಎನ್‍ಎಸ್‍ಎಎಂ ಪದವಿಪೂರ್ವ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಿಂದ ಇಂಟಿಗ್ರೇಟೆಡ್ ಪಿಯು ತರಗತಿಗಳನ್ನು ಪ್ರಾರಂಭಿಸಲಾಗುತ್ತದೆ. ನಿಟ್ಟೆ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್. ವಿನಯ ಹೆಗ್ಡೆಯವರ ಅಭಿಪ್ರಾಯದಂತೆ, ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್ / ಜೆಇಇ ಮತ್ತು ಸಿಇಟಿ ಯಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ ಅವರ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುವುದರಿಂದ ಕೋಚಿಂಗ್ ತಜ್ಞರ ಮತ್ತು ಪ್ರತಿಷ್ಠಿತ,