ನಿಟ್ಟೆ ವಿಶ್ವವಿದ್ಯಾಲಯ : ಜೂನ್ 8-11ರ ವರೆಗೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಛಾಯಾಚಿತ್ರ ಪ್ರದರ್ಶನ

ನಿಟ್ಟೆ ವಿಶ್ವವಿದ್ಯಾಲಯವು ಮಂಗಳೂರಿನ ಭಾರತ್ ಸಿನಿಮಾಸ್‍ನಲ್ಲಿ ನಾಲ್ಕನೇ ಆವೃತ್ತಿಯ ನಿಟ್ಟೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಛಾಯಾಚಿತ್ರಗಳ ಪ್ರದರ್ಶನಗಳನ್ನು ಜೂನ್ 8 ರಿಂದ 11 ರ ವರೆಗೆ ಮಂಗಳೂರಿನ ಭಾರತ್ ಸಿನಿಮಾಸ್‍ನಲ್ಲಿ ಆಯೋಜಿಸಲಾಗಿದೆ ಎಂದು ನಿಟ್ಟೆ ಇನ್ಸ್ಟಿಟ್ಯೂಷನ್ ಆಫ್ ಕಮ್ಯುನಿಕೇಶನ್ ನ ಮುಖ್ಯಸ್ಥ ಪ್ರೊ. ರವಿರಾಜ್ ಅವರು ತಿಳಿಸಿದ್ದಾರೆ .

ಅವರು ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ನಿಟ್ಟೆ ಇನ್ಸ್ಟಿಟ್ಯೂಷನ್ ಆಫ್ ಕಮ್ಯುನಿಕೇಶನ್‍ನ ವಿದ್ಯಾರ್ಥಿಗಳ ಪರಿಶ್ರಮದಿಂದ 2017ರಲ್ಲಿ ಪ್ರಾರಂಭವಾದ ನಿಟ್ಟೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಈ ಬಾರಿ ಹಳೆಯ 3 ಆವೈತ್ತಿಗಳ ಯಶಸ್ಸಿನ ಬಲದಿಂದ 4 ನೇ ಆವೃತ್ತಿಯನ್ನು ಆಯೋಜಿಸಿದೆ. ಹಿಂದಿ, ಕನ್ನಡ, ತುಳು, ಮಲಯಾಳಂ , ಉರ್ದು, ಮರಾಠಿ, ತಮಿಳು, ಜರ್ಮನ್, ಫ್ರೆಂಚ್ ಹಾಗೂ ಇನ್ನೂ ಅನೇಕ ಭಾಷೆಗಳ ಒಟ್ಟು 100ಕ್ಕೂ ಹೆಚ್ಚು ಸಿಮಾಗಳು ಮಂಗಳೂರಿನ ಭಾರತ್ ಮಾಲ್‍ನಲ್ಲಿರುವ ಭಾರತ್ ಸಿನಿಮಾಸ್‍ನ 3 ಪರದೆಗಳ ಮೇಲೆ ಪ್ರದರ್ಶನಗೊಳ್ಳಲಿದೆ ಎಂದರು

ಛಾಯಾಚಿತ್ರಗಳ ಪ್ರದರ್ಶನದಲ್ಲಿ ಕನ್ನಡ ಚಿತ್ರರಂಗದ ಇತಿಹಾಸದ ಕೆಲವು ತುಣುಕುಗಳನ್ನು ಪ್ರಖ್ಯಾತ ಫೋಟೋ ಜರ್ನಲಿಸ್ಟ್ ಅಶ್ವಥ್ ನಾರಾಯಣ್ ಅವರು ಸೆರೆಹಿಡಿದ ಛಾಯಾಚಿತ್ರಗಳ ಪ್ರದರ್ಶನ ನಡೆಯಲಿದ್ದು, ಸುಮಾರು 60 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸವನ್ನು ಪುನರುಚ್ಚರಿಸುವ ತೊಂಬಾ ಅಪರೂಪದ ಹಾಗೂ ಅಪ್ರಕಟಿತ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಈ ಪ್ರದರ್ಶನದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಅನೇಕ ನಟರ, ಚಿತ್ರ ತಯಾರಿಯ, ಜಾಹಿರಾತು ಪ್ರಕ್ರಿಯೆಯ, ಚಿತ್ರನಿರ್ಮಾಣದಲ್ಲಿ ಭಾಗಿಯಾದ ಅನೇಕ ತಂತ್ರಜ್ಞರಹಾಗೂ ಕೆಲವು ಹಿಂದಿ ಸಿನಿಮಾ ನಟರ ಛಾಯಾಚಿತ್ರಗಳನ್ನು ಸಾರ್ವಜನಿಕರು ವೀಕ್ಷಿಸಬಹುದು. ಹಾಗೂ ಅಶ್ವಥ್ ನಾರಾಯಣ್ ಅವರನ್ನು ಭೇಟಿಯಾಗಬಹುದು ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ವಿದ್ಯಾರ್ಥಿ ಸಂಯೋಜಕರಾದ ಅನುಪಮ ರತೀಶ್, ಉಮೇರ್ ಮತ್ತು ಸಮರ್ಥ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.