ನಿಟ್ಟೆ ಕ್ಷೇಮದಲ್ಲಿ ಅಂತಾರಾಷ್ಟ್ರೀಯ ಇಥೋಸ್ -5.0 ಸಮ್ಮೇಳನಕ್ಕೆ ಚಾಲನೆ

ಉಳ್ಳಾಲಮಾನವೀಕರಣದ ಸಂಕೇತದಲ್ಲಿ ಎಲ್ಲರೂ  ಬದುಕಬೇಕಿದೆ. ಸಹಿಷ್ಣುತೆ, ಗೌರವ ಮತ್ತು  ವಿನಾಯಿತಿ ನಾಗರೀಕತೆಯ ಲಕ್ಷಣಗಳಾಗಿರಬೇಕು. ವಿಶ್ವ ನೀತಿಶಾಸ್ತ್ರ, ನೈತಿಕತೆ ಹಾಗೂ ಮೌಲ್ಯಗಳನ್ನು ಒಳಗೊಂಡಿರುವುದರಿಂದ ಮನುಷ್ಯ ಎಲ್ಲಿಯೂ ಬದುಕಲು ಸಾಧ್ಯವುಳ್ಳ ವಾತಾವರಣವಿದೆ. ಇಲ್ಲವಾದಲ್ಲಿ ವಿಶ್ವವೇ ಭಯಾನಕವಾಗುತಿತ್ತು ಎಂದು  ಡಾ.ಬಿ.ಸಿ.ರಾಯ್ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ.ವೇದಪ್ರಕಾಶ್ ಮಿಷ್ರಾ  ಅಭಿಪ್ರಾಯಪಟ್ಟರು.

ಅವರು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಕ್ಷೇಮ ಆಡಿಟೋರಿಯಂನಲ್ಲಿ ಜರಗಿದಆರೋಗ್ಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ನೈತಿಕತೆ ವಿಚಾರದಲ್ಲಿ  ನಡೆದ  ಬಯೋ ಎಥಿಕ್ಸ್ವೈದ್ಯಕೀಯ ಸಂಶೋಧನ ಕುರಿತ ಅಂತಾರಾಷ್ಟ್ರೀಯ ಇಥೋಸ್. ಸಮ್ಮೇಳನ  ಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂತಹ ವಾತಾವರಣದಿಂದಾಗಿ ಜೈವಿಕ ನೀತಿಶಾಸ್ತ್ರ , ತಾಂತ್ರಿಕ ತತ್ವಗಳು ಮತ್ತು  ವೃತ್ತಿಪರ ವೈಶಿಷ್ಟ?ಯತೆಗಳು ಒಳಗೊಂಡಿರಬೇಕಿದೆ. ಯುನೆಸ್ಕೋ ನೀಡಿರುವ ಸಂದೇಶದಂತೆ  ಎಲ್ಲಾ ವಿಚಾರಗಳು ಮನುಷ್ಯನಿಂದ , ಮನುಷ್ಯನಿಗಾಗಿ, ಮನುಷ್ಯನ ಬದುಕಿಗೋಸ್ಕರ ಇರುವಂತಹ ವ್ಯವಸ್ಥೆ ಆಗಿರುವುದರಿಂದ  ಮಾನವೀಕರಣದ ವೃತ್ತಿಪರತೆಯ ಅಧ್ಯಯನಗಳಾಗಬೇಕು. ನಿಟ್ಟಿನಲ್ಲಿ ನಿಟ್ಟೆ ವಿ.ವಿಯಲ್ಲಿ ಹಮ್ಮಿಕೊಂಡಿರುವ ಅಂತರಾಷ್ಟ್ರೀಯ ಸಮ್ಮೇಳನೆ ವಿಚಾರಧಾರೆಗಳಿಗೆ ಪೂರಕವಾಗಿದೆ ಎಂದರು.

ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಾಧಿಪತಿ  ಪ್ರೊ.ಎಂ.ಶಾಂತಾರಾಮ ಶೆಟ್ಟಿ ಮಾತನಾಡಿ , ಜೈವಿಕ ನೀತಿಶಾಸ್ತ್ರದಲ್ಲಿ ವ್ಯಾಪಕ ಹಾಗೂ ಆಳವಾದ ಪರಿಣಾಮಗಳಿವೆ. ವೈದ್ಯರಿಗೆ ಇದು ಮಾನವ ಜೀವನದಲ್ಲಿ ವ್ಯವಹರಿಸಲು ಅನುಕೂಲವಾಗುವ ವಿಚಾರವಾಗಿದೆ. ಸಮಾಜದಲ್ಲಿ ಇತರೆ ಯಾವುದೇ ನಾಗರಿಕನಿಗಿಂತ ವೈದ್ಯನಾದವನ ಬಾಳು ಬಹಳ ಕಷ್ಟಕರವಾಗಿರುತ್ತದೆ. ನಿಟ್ಟಿನಲ್ಲಿ ನೈತಿಕತೆಯ ಜೊತೆಗೆ ವೃತ್ತಿಯಲ್ಲಿ ತೊಡಗಿಸುವುದು ಅತೀ ಅಗತ್ಯ ಎಂದರು.

ಕರಾಡ್ ಕೃಷ್ಣ ಇನ್ಸಿಟಟ್ಯೂಟ್  ಆಫ್ ಮೆಡಿಕಲ್ ಸೈನ್ಸ್ನ ಕುಲಪತಿ ಪ್ರೊ.ಮೀರಾ ಮಿಷ್ರಾ, ಇಂಟರ್ನ್ಯಾಷನಲ್  ಚೇರ್ ಇನ್ ಬಯೋಎತಿಕ್ಸ್ ಇಂಡಿಯನ್ ಪ್ರೋಗ್ರಾಮ್ ಮುಖ್ಯಸ್ಥೆ  ಡಾ.ಮೇರಿ ಮ್ಯಾಥ್ಯೂ , ಇಂಟರ್ ನ್ಯಾಷನಲ್ ಚೇರ್ ಇನ್ ಬಯೋ ಎಥಿಕ್ಸ್ ಶಿಕ್ಷಣ ವಿಭಾಗ ಮುಖ್ಯಸ್ಥೆ ಡಾ. ರುಸೆಲ್ ಡಿಸೋಜ , ಇಥೋಸ್ 5. ಸಂಘಟಕ  ಪ್ರೊ. ಹರ್ಷ ಹಾಲಹಳ್ಳಿ, ಸಮ್ಮೇಳನದ ಪ್ರ.ಕಾ ಶಿವಂ ಕೌಶಿಕ್  ಉಪಸ್ಥಿತರಿದ್ದರು.

ಸಮೃದ್ಧಿ ಹಾಗೂ ಮೀರಾ ನಿರೂಪಿಸಿದರು. ನಿಟ್ಟೆ ವಿ.ವಿಯ  ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರುಡಾ.ಶ್ರೀಪಾದ ಜಿ.ಮೆಹಂದಲೆ ವಂದಿಸಿದರು. ಸಂದರ್ಭ  ಸಮ್ಮೇಳನದ  ವಿಚಾರಗಳ ಕುರಿತ ಪುಸ್ತಕವನ್ನು ಪ್ರಕಟಿಸಲಾಯಿತು.

Related Posts

Leave a Reply

Your email address will not be published.