Home Posts tagged #ucchila

ಉಚ್ಚಿಲ: ರೈಲಿಗೆ ತಲೆಯಿಟ್ಟು ಅವಿವಾಹಿತ ಆತ್ಮಹತ್ಯೆ

ಉಳ್ಳಾಲ: ರೈಲಿನಡಿಗೆ ತಲೆಯಿಟ್ಟು ಮಂಗಳೂರು ಕೊಂಚಾಡಿ ನಿವಾಸಿ ಪ್ರಶಾಂತ್ (44) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲ ರೈಲ್ವೇ ಗೇಟ್ ಬಳಿ ನಡೆದಿದೆ. ಸೆ.24 ರಂದು ಸಂಜೆ ಮನೆಯಿಂದ ಹೊರಟವರು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಆಕ್ಟಿವಾ ಸ್ಕೂಟರನ್ನು ಉಳ್ಳಾಲ ರೈಲ್ವೇ ನಿಲ್ದಾಣದಲ್ಲಿರಿಸಿ,ಉಚ್ಚಿಲ ರೈಲ್ವೇ ಗೇಟ್ ವರೆಗೆ

ಉಳ್ಳಾಲ,ಉಚ್ಚಿಲದಲ್ಲಿ ತೀವ್ರಗೊಂಡ ಕಡಲ್ಕೊರೆತ – ಚರ್ಮುರಿ ಅಂಗಡಿ, ಮರಗಳು ಸಮುದ್ರಪಾಲು

ಉಳ್ಳಾಲ ಹಾಗೂ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಉಳ್ಳಾಲ ಬೀಚ್ ಬಳಿ ಹಾಕಲಾಗಿದ್ದ ಚರ್ಮುರಿ ಅಂಗಡಿಗಳು ಸಮುದ್ರಪಾಲಾಗಿದೆ. ಉಚ್ಚಿಲ ಭಾಗದಲ್ಲಿ ಸಮುದ್ರ ತೀರದ ಮನೆಗಳಿಗೆ ಅಪ್ಪಳಿಸಿ, ಹಲವು ಮರಗಳು ಸಮುದ್ರಪಾಲಾಗಿವೆ. ಸಮುದ್ರತೀರದಲ್ಲಿ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಉಳ್ಳಾಲ ಬೀಚ್, ಮೊಗವೀರಪಟ್ನ, ಸುಭಾಷನಗರ, ಕೈಕೋ, ಕಿಲೆರಿಯಾನಗರ, ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ

ಮೀನು ಸಾಗಾಟ ವಾಹನಕ್ಕೆ ಲಾರಿ ಡಿಕ್ಕಿ – ಆಂಧ್ರದಲ್ಲಿ ಉಚ್ಚಿಲದ ಯುವಕ ಬಲಿ

ಮಂಗಳೂರಿನಿಂದ ಆಂಧ್ರ ಪ್ರದೇಶಕ್ಕೆ ಮೀನು ಹೇರಿಕೊಂಡು ಹೋಗಿದ್ದ ವಾಹನ ಹಾಗೂ ಲಾರಿ ಮಧ್ಯೆ ಆಂಧ್ರ ನಾಬೂರ ಎಂಬಲ್ಲಿ ಅಪಘಾತ ನಡೆದಿದೆ. ಮೀನು ಸಾಗಾಟ ವಾಹನ ಚಾಲಕ ಉಚ್ಚಿಲದ ಯುವಕ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೀನು ಸಾಗಾಟ ವಾಹನ ಚಾಲಕ ಕಾಪು ತಾಲೂಕಿನ ಉಚ್ಚಿಲ ಭಾಸ್ಕರ ನಗರ ಬಾಂಗ್ಲಾ ನಿವಾಸಿ ಬಶೀರ್ ಎಂದು ತಿಳಿದು ಬಂದಿದೆ. ಇಂದು ಮುಂಜಾನೆ ವೇಳೆ ಅಪಘಾತ ಸಂಭವಿಸಿದ್ದು, ಕಾಲು ಸಿಲುಕಿಕೊಂಡ ಪರಿಣಾಮ ಅವರನ್ನು ಹೊರ

ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಸ್ಪೀಕರ್ ಖಾದರ್ ಭೇಟಿ

ಕಡಲ್ಕೊರೆತಕ್ಕೆ ವಿಪರೀತ ಹಾನಿಗೊಳಗಾಗುತ್ತಿದ್ದ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಗಳಿಗೆ ರಾಜ್ಯ ವಿಧಾನ ಸಭೆಯ ಸ್ಪೀಕರ್, ಮಂಗಳೂರು ಶಾಸಕ ಯು. ಟಿ. ಖಾದರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಜಿಲ್ಲಾಧಿಕಾರಿ ರವಿ ಕುಮಾರ್ ಎಮ್.ಆರ್ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಯು.ಟಿ. ಖಾದರ್ ಅವರು, ಅವರು ಈ ಹಿಂದೆ ಉಳ್ಳಾಲದ ಕೋಡಿ,ಕೋಟೆಪುರ,ಮೊಗವೀರಪಟ್ಣ,ಸುಭಾಷ್ ನಗರ, ಹಿಲೇರಿಯ ಮೊದಲಾದ

ಉಚ್ಚಿಲ ಬಡಾ ಪಂಚಾಯತ್‍ನ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಬೆಂಕಿ

ಉಚ್ಚಿಲ ಬಡಾ ಗ್ರಾಮ ಪಂಚಾಯತಿಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾಗಿದೆ. ಪ್ಯಾಡ್ ಬರ್ನರ್ ಮತ್ತು ಪ್ಲಾಸ್ಟಿಕ್ ಮೋಲ್ಡಿಂಡಿಗ್ ಯಂತ್ರಗಳ ಮೌಲ್ಯ ಸುಮಾರು 4 ಲಕ್ಷದ 60 ಸಾವಿರ ಆಗಿದ್ದು, ಅಂತೆಯೇ ಕಟ್ಟಡ ಇನ್ನಿತರ ಪರಿಕರಗಳು ಸೇರಿ 8 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತು ಬೆಂಕಿಗೆ ಆಹುತಿಯಾಗಿದೆ ಎಂದು ಪಿಡಿಓ ಸತೀಶ್ ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ

ಭಕ್ತಿಗೀತೆಯ ಮೂಲಕ ಉಚ್ಚಿಲ ದೇವಿಯ ದರುಶನ ಪಡೆದ ಶ್ರೀ ವಿದ್ಯಾಭೂಷಣ್

ಕರಾವಳಿ ತಡಿಯ ಪ್ರಸಿದ್ಧ ಲಕ್ಷ್ಮೀ ದೇವಿಯ ದೇವಸ್ಥಾನ ಹಾಗೂ ಮೊಗವೀರ ಸಮಾಜದ ಕುಲದೇವತೆಯಾದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ವಿದ್ವಾನ್ ಶ್ರೀ ವಿದ್ಯಾಭೂಷಣರು ಭೇಟಿ ನೀಡಿದರು. ಇದೇ ವೇಳೆ ಅವರು ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡನ್ನು ಹಾಡಿ ಶ್ರೀ ದೇವಿಯ ದರ್ಶನವನ್ನು ಪಡೆದರು.

ಉಚ್ಚಿಲ : ನಾಮಫಲಕ ಅಳವಡಿಸಿದ್ದರ ವಿರುದ್ಧ ಆಟೋ ಚಾಲಕರ ಗೊಂದಲ ಪೊಲೀಸ್ ಸಮ್ಮುಖದಲ್ಲಿ ನಾಮಫಲಕ ತೆರವು

ಕೆಲ ಅಟೋ ರಿಕ್ಷಾ ಚಾಲಕರು ಅಟೋ ನಿಲ್ದಾಣ ಎಂಬ ನಾಮಫಲಕ ಅಳವಡಿಸಿದರ ವಿರುದ್ಧ ಆಕ್ರೋಶಗೊಂಡ ಉಚ್ಚಿಲ ಅಟೋ ಯೂನಿಯನ್ ಸದಸ್ಯರು ಪ್ರತಿಭಟಿಸಿ ಪೆÇಲೀಸ್ ಸಮುಖದಲ್ಲಿ ಬೋರ್ಡ್ ತೆರವುಗೊಳಿಸಲಾಯಿತು.ಉಚ್ಚಿಲ ಅಟೋ ಯೂನಿಯನ್ ಪ್ರಮುಖರಾದ ಸಿರಾಜ್ ಉಚ್ಚಿಲ ಮಾಹಿತಿ ನೀಡಿ, ಯೂನಿಯನ್‍ಗೆ ಸೇರದ ಕೆಲವು ಮಂದಿ ಹಾಗೂ ನೆರೆಯ ಊರಿನ ಕೆಲವು ಅಟೋ ಚಾಲಕರು ಸೇರಿ ಯಾವುದೇ ಪರವಾನಗೆ ಪಡೆಯದೆ ಏಕಾಏಕಿ ಮಹಾಲಕ್ಷ್ಮೀ ದೇವಳದ ಬಳಿಯ ಫುಟ್ ಫಾತ್ ನಲ್ಲಿ ಬೊರ್ಡ್ ನೆಟ್ಟಿದ್ದು, ಈ ಬಗ್ಗೆ

ಉಚ್ಚಿಲ : ಏಕಾಏಕಿ ಮುಚ್ಚಿದ ಹೆದ್ದಾರಿ,ಗಲಿಬಿಲಿಗೊಂಡ ವಾಹನ ಸವಾರರು

ಕಾಮಗಾರಿಯ ಹೆಸರಲ್ಲಿ ಹೆದ್ದಾರಿಯನ್ನು ಏಕಾಏಕಿ ಮುಚ್ಚಿದ ಪರಿಣಾಮ ವಾಹನ ಸವಾರರು ಗಲಿಬಿಲಿಕೊಂಡು ರಾತ್ರಿ ಹೊತ್ತು ಸರಣಿ ಅಪಘಾತ ನಡೆದ ಘಟನೆ ಉಚ್ಚಿಲದಲ್ಲಿ ನಡೆದಿದೆ. ಪೊಲೀಸ್ ಇಲಾಖೆ ಸಹಿತ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡಿದೆ ಕಾಮಗಾರಿ ಹೆಸರಲ್ಲಿ ಅಪಾಯಕಾರಿಯಾಗಿ ಹೆದ್ದಾರಿ ಮುಚ್ಚಿದ್ದು ಒಂದು ಕಡೆಯಾದರೆ, ಮತ್ತೊಂದು ಕಡೆ ಹೆದ್ದಾರಿ ಡಿವೈಡರ್ ಗಳಲ್ಲಿ ದಾರಿದೀಪಕ್ಕಾಗಿ ಎಲ್ಲೆಡೆ ಟವರ್‍ಗಳನ್ನು ನಿರ್ಮಿಸಿ ಅದೆಷ್ಟೋ ಕಾಲವಾದರೂ ದೀಪ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲ ಉಚ್ಚಿಲ ದಸರಾ : ಡಾ.ಜಿ.ಶಂಕರ್ ಅವರಿಂದ ಉದ್ಘಾಟನೆ

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದಲ್ಲಿ ಈ ಬಾರಿ ಅದ್ದೂರಿಯಾಗಿ ನಡೆಯಲಿರುವ ಉಚ್ಚಿಲ ದಸರಾ ಉತ್ಸವ-2022ರ ಅಂಗವಾಗಿ ದೇವಳದ ಪರಿಸರ ಮತ್ತು ಹೆಜಮಾಡಿಯಿಂದ ಕಾಪು ದೀಪಸ್ಥಂಭದವರೆಗೆ ನಿರ್ಮಿಸಲಾದ ಭವ್ಯವಾದ ವಿದುದ್ದೀಪಾಲಂಕಾರ ವ್ಯವಸ್ಥೆಯನ್ನು ಶ್ರೀ ಕ್ಷೇತ್ರದ ಸ್ವಾಗತ ಗೋಪುರ ಬಳಿ ದೇವಳದ ಗೌರವ ಅಧ್ಯಕ್ಷ ಡಾ.ಜಿ.ಶಂಕರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ರಾಜ್ಯಕ್ಕೇ ಮಾದರಿಯಾಗಿ ಅತ್ಯಂತ ವೈಭವದಿಂದ ಉಚ್ಚಿಲ ದಸರಾ ನಡೆಯಲಿದ್ದು, ನಾಡಿನೆಲ್ಲೆಡೆಯಿಂದ

ಉಚ್ಚಿಲ ದಸರಾ ಉತ್ಸವದ ರೂಪುರೇಷೇಗಳ ಬಗ್ಗೆ ಸಭೆ

ಇದೇ ಬರುವ ಸೆಪ್ಟೆಂಬರ್ 26 ರಿಂದ ಅಕ್ಟೊಬರ್ 5 ರವರೆಗೆ ನವರಾತ್ರಿಯ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುವ “ಉಚ್ಚಿಲ ದಸರಾ ಉತ್ಸವ-2022″ದ ರೂಪುರೇಷೆಗಳ ನಾಡೋಜ ಡಾ. ಜಿ. ಶಂಕರ್ ಅವರ ನೇತೃತ್ವದಲ್ಲಿ ಹಾಗೂ ದ. ಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ. ಸಿ. ಕೋಟ್ಯಾನ್ ಉಪಸ್ಥಿತಿಯಲ್ಲಿ ದಸರಾ ಸಮಿತಿಯ ಸದಸ್ಯರ ಸಭೆ ನಡೆಸಲಾಯಿತು. ಶ್ರೀ ಕ್ಷೇತ್ರ ಉಚ್ಚಿಲದಲ್ಲಿ ಈ ಬಾರಿ ನವರಾತ್ರಿ ಉತ್ಸವವನ್ನು ದಸರಾ ರೀತಿಯಲ್ಲಿ