ಉಳ್ಳಾಲ,ಉಚ್ಚಿಲದಲ್ಲಿ ತೀವ್ರಗೊಂಡ ಕಡಲ್ಕೊರೆತ – ಚರ್ಮುರಿ ಅಂಗಡಿ, ಮರಗಳು ಸಮುದ್ರಪಾಲು

ಉಳ್ಳಾಲ ಹಾಗೂ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಉಳ್ಳಾಲ ಬೀಚ್ ಬಳಿ ಹಾಕಲಾಗಿದ್ದ ಚರ್ಮುರಿ ಅಂಗಡಿಗಳು ಸಮುದ್ರಪಾಲಾಗಿದೆ. ಉಚ್ಚಿಲ ಭಾಗದಲ್ಲಿ ಸಮುದ್ರ ತೀರದ ಮನೆಗಳಿಗೆ ಅಪ್ಪಳಿಸಿ, ಹಲವು ಮರಗಳು ಸಮುದ್ರಪಾಲಾಗಿವೆ. ಸಮುದ್ರತೀರದಲ್ಲಿ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ.

ಉಳ್ಳಾಲ ಬೀಚ್, ಮೊಗವೀರಪಟ್ನ, ಸುಭಾಷನಗರ, ಕೈಕೋ, ಕಿಲೆರಿಯಾನಗರ, ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ ತೀರಗಳಲ್ಲಿ ಸಮುದ್ರ ತೀರಕ್ಕೆ ಬೃಹತ್ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಬ್ರೇಕ್ ವಾಟರ್ ಹಾಕಿದ ನಂತರ ಮೊಗವೀರಪಟ್ನ ತೀರದಲ್ಲಿ ಕಡಲ್ಕೊರೆತ ಕಡಿಮೆಯಾಗಿತ್ತು. ಆದರೆ ಇಂದು ಭಾರೀ ವೇಗವಾಗಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಮೊಗವೀರಪಟ್ನ, ಉಳ್ಳಾಲ ಬೀಚ್ ಸಮೀಪ ಅಲೆಗಳ ಅಬ್ಬರಕ್ಕೆ ಬೀಚ್ ಬದಿಯಲ್ಲಿದ್ದ ಚರ್ಮುರಿ ಅಂಗಡಿಗಳು ಸಮುದ್ರಪಾಲಾಗಿವೆ. ಉಚ್ಚಿಲ , ಬಟ್ಟಂಪಾಡಿ ಸಮುದ್ರ ತೀರದಲ್ಲಿ 80 ಕಿ.ಮೀ ವೇಗದಲ್ಲಿ ಗಾಳಿ ಬೀಸಲಾರಂಭಿಸಿದ್ದು, ಸಮುದ್ರ ತೀರದಲ್ಲಿ ನಿಲ್ಲಲು ಕಷ್ಟ ಆಗುವ ಸ್ಥಿತಿಯಿದೆ. ಗಾಳಿಯ ವೇಗಕ್ಕೆ ಸ್ಥಳೀಯ ಮರಗಳು ಸಮುದ್ರಪಾಲಾದರೆ, ಭಾರೀ ಪ್ರಮಾಣದಲ್ಲಿ ಮಳೆಯೂ ಬೀಳುತ್ತಿದೆ.

Related Posts

Leave a Reply

Your email address will not be published.