Home Posts tagged #ullala (Page 8)

ಉಳ್ಳಾಲ : ಪುಣ್ಯಕೋಟಿ ನಗರದಲ್ಲಿ ಬಾರ್ ಓಪನ್‍ಗೆ ಆಕ್ರೋಶ – ಶಾಲಾ ವಿದ್ಯಾರ್ಥಿಗಳಿಂದ ಗ್ರಾ.ಪಂ.ಗೆ ಮುತ್ತಿಗೆ

ಉಳ್ಳಾಲದ ಕೈರಂಗಳ ಪುಣ್ಯಕೋಟಿನಗರದಲ್ಲಿ ನೂತನವಾಗಿ ಆರಂಭವಾದ ಬಾರ್ ಎಂಡ್ ರೆಸ್ಟೋರೆಂಟ್ ತೆರವು ಆಗುವವರೆಗೂ ಪ್ರಜಾಪ್ರಭುತ್ವ ರೀತಿಯಲ್ಲಿ ಅಮರಣಾಂತ ಸತ್ಯಾಗ್ರಹದಂತಹ ಹೋರಾಟ ನಡೆಸಲು ಶಾಲಾಡಳಿತ ಮಂಡಳಿ ಸಿದ್ಧವಿದೆ ಎಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾಜಾರಾಮ ಭಟ್ ಹೇಳಿದ್ದಾರೆ. ಬಾಳೆಪುಣಿ ಗ್ರಾ.ಪಂ ವ್ಯಾಪ್ತಿಯ ಪುಣ್ಯಕೋಟಿನಗರ ಸಮೀಪದಲ್ಲಿ ನೂತನವಾಗಿ ಆರಂಭವಾದ

ಉಳ್ಳಾಲ : ಸಿಡಿಲು ಬಡಿದು ಅಂಗಡಿ ಭಸ್ಮ

ಉಳ್ಳಾಲ: ಭಾರೀ ಸಿಡಿಲು ಮಳೆಗೆ ಅಂಗಡಿ ಸಂಪೂರ್ಣವಾಗಿ ಸುಟ್ಟುಹೋಗಿ ಲಕ್ಷಾಂತರ ನಷ್ಟ ಸಂಭವಿಸಿರುವ ಘಟನರ ರಾಣಿಪುರದಲ್ಲಿ ಸಂಭವಿಸಿದೆ.ಕಟ್ಟಡದಲ್ಲೇ ಇದ್ದ ಮನೆಗೂ ಬೆಂಕಿ ವ್ಯಾಪಿಸಿದ್ದು ಸ್ಥಳಕ್ಕೆ ತಕ್ಷಣ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮುನ್ನೂರು ಗ್ರಾಮದ ರಾಣಿಪುರ ಚರ್ಚ್ ಎದುರಿನ ಪೀಟರ್ ಆಫ್ರೋಸ್ ಎಂಬವರ ದಿನಸಿ ಅಂಗಡಿಗೆ ಸಿಡಿಲು ಬಡಿದು ಭಸ್ಮವಾಗಿದೆ. ಇಂದು ಮುಂಜಾನೆ ನಸುಕಿನ ವೇಳೆ ಸಿಡಿಲು ಬಡಿದು ಘಟನೆ ಸಂಭವಿಸಿದೆ. ಘಟನೆ ವೇಳೆ ಪೀಟರ್

ಖಾವಿಧಾರಿಗಳಿಂದ ಜಾತ್ರೆಗಾಗಿ ಕಲೆಕ್ಷನ್ : ಯುವಕನನ್ನು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಉಳ್ಳಾಲ: ಜಾತ್ರೆಗೆ ಸಹಾಯಹಸ್ತ ಬೇಕು ಎಂದು ಭಿಕ್ಷಾಟನೆಯಲ್ಲಿ ತೊಡಗಿದ್ದ ಯುವಕನನ್ನು ತೊಕ್ಕೊಟ್ಟುವಿನ ಕ್ಯಾಟರಿಂಗ್ ಸಂಸ್ಥೆ ಮಾಲೀಕ ರಾಜೇಶ್ ಎಂಬವರು ಸಂಶಯದ ಮೇರೆಗೆ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದಾರೆ. ತೊಕ್ಕೊಟ್ಟು ಕಾಪಿಕಾಡು ರಾಜ್ ಕೇಟರಸ್ ಬಳಿ ಬಂದಿದ್ದ ಖಾವಿ ತೊಟ್ಟ ಯುವಕ ಜಾತ್ರೆ ನಡೆಸಲು ದಾನ ನಡೆಸಬೇಕು ಎಂದು ಮಾಲೀಕ ರಾಜೇಶ್ ಎಂಬವರಲ್ಲಿ ಕೇಳಿದ್ದನು. ಸಂಸ್ಥೆ ಮಾಲೀಕರು ರಾತ್ರಿ ವೇಳೆ ಜಾತ್ರೆಗಾಗಿ ಹಣ ಕೇಳುವುದನ್ನು ಸಂಶಯ ವ್ಯಕ್ತಪಡಿಸಿ ವಿಚಾರಣೆ

ಮಳೆನೀರಿಗೆ ಬಿದ್ದ ಮೃತರ ಮನೆಗೆ ಸಹಾಯಕ ಆಯುಕ್ತ ಭೇಟಿ

ಉಳ್ಳಾಲ: ಪ್ರಾಕೃತಿಕ ವಿಕೋಪದಡಿ ಜು. 04 ರಂದು ಮೃತಪಟ್ಟ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿನ ನಿವಾಸಿ ಸುರೇಶ್ ಗಟ್ಟಿ ಮನೆಗೆ ಸಹಾಯಕ ಆಯುಕ್ತರಾದ ರಾಜು.ಕೆ ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತರ ಪತ್ನಿಗೆ ವೃದ್ಧಾಪ್ಯ ವೇತನ ಹಾಗೂ ಹೆಚ್ಚುವರಿ ರೂ. 20,000 ಅನುದಾನವನ್ನು ಸರಕಾರದ ವತಿಯಿಂದ ಒದಗಿಸುವ ಪ್ರಯತ್ನ ಮಾಡುವ ಭರವಸೆ ನೀಡಿದರು ಈ ಸಂದರ್ಭ ಕಂದಾಯ ನಿರೀಕ್ಷಕ ಮಂಜುನಾಥ್ , ಸೋಮೇಶ್ವರ ಪುರಸಭೆ ಗ್ರಾಮಕರಣಿಕೆ ಲಾವಣ್ಯ, , ಮೃತರ ಸಂಬಂಧಿ ಸುರೇಶ್ ಗಟ್ಟಿ,

ಪಿಲಾರು, ಮಳೆ ನೀರಿಗೆ ಬಿದ್ದುಉಸಿರುಗಟ್ಟಿ ಸಾವು : ಮೃತರ ಮನೆಮಂದಿಗೆ ರೂ.5 ಲಕ್ಷ ಪರಿಹಾರ

ಉಳ್ಳಾಲ: ಮಳೆ ನೀರಿಗೆ ಬಿದ್ದು ಸಾವನ್ನಪ್ಪಿದ ಸೋಮೇಶ್ವರ ಪಿಲಾರು ಬಳಿಯ ಬಾಡಿಗೆ ಮನೆ ನಿವಾಸಿ ಸುರೇಶ್ ಗಟ್ಟಿ (52) ಕುಟುಂಬಸ್ಥರಿಗೆ ಪ್ರಾಕೃತಿಕ ವಿಕೋಪದಡಿ ರೂ.5 ಲಕ್ಷ ಪರಿಹಾರವನ್ನು ಕಂದಾಯ ಇಲಾಖೆಯು ಖಜಾನೆ 2 ಮುಖೇನ ನೀಡಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಭಾಕರ್ ಖರ್ಜುರೆ,. ಕಂದಾಯ ನಿರೀಕ್ಷಕರು ಮಂಜುನಾಥ್ ಕೆ.ಹೆಚ್, ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಶವಮಹಜರು ವರದಿಯನ್ನು ಸಂಗ್ರಹಿಸಿ, ಮೃತ ಪ್ರಮಾಣ ಪತ್ರವನ್ನು

ಉಳ್ಳಾಲ : ಕೃತಕ ನೆರೆ ದಾಟಿ 40 ಮನೆಗಳಿಗೆ ವಿದ್ಯುತ್ ಪೂರೈಸಿದ ಮೆಸ್ಕಾಂ ಸಿಬ್ಬಂದಿ

ಉಳ್ಳಾಲ: ಕರ್ತವ್ಯವಾದರೂ ನಿಭಾಯಿಸಲು ಛಲ ಬೇಕು. ಮಳೆಗಾಲದ ಸಂದರ್ಭ ಮೆಸ್ಕಾಂ ಪವರ್ಮೆನ್‍ಗಳು ಜನರ ಬಾಯಿಂದ ಕೇಳುವುದೇ ಜಾಸ್ತಿ. ಆದರೆ ಮೆಸ್ಕಾಂನ ಉಳ್ಳಾಲ-2 ಘಟಕದ ಪವರ್ಮೆನ್ ವಸಂತ್ ಹಾಗೂ ಸುರೇಶ್ ಗದ್ದೆಯೊಂದರಲ್ಲಿ ಕೃತಕ ನೆರೆಯಾಗಿದ್ದರೂ ಅದನ್ನು ಕಷ್ಟಪಟ್ಟು ದಾಟಿ 40 ಮನೆಗಳಿಗೆ ವಿದ್ಯುತ್ ಪೂರೈಸಿದ್ದಾರೆ. ಈ ಕುರಿತ ವೀಡಿಯೋವನ್ನು ಮೆಸ್ಕಾಂ ಜೆ.ಇ ನಿತೇಶ್ ಹೊಸಗದ್ದೆ ಇವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ತಮ್ಮ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ

ಉಳ್ಳಾಲ,ಉಚ್ಚಿಲದಲ್ಲಿ ತೀವ್ರಗೊಂಡ ಕಡಲ್ಕೊರೆತ – ಚರ್ಮುರಿ ಅಂಗಡಿ, ಮರಗಳು ಸಮುದ್ರಪಾಲು

ಉಳ್ಳಾಲ ಹಾಗೂ ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಉಳ್ಳಾಲ ಬೀಚ್ ಬಳಿ ಹಾಕಲಾಗಿದ್ದ ಚರ್ಮುರಿ ಅಂಗಡಿಗಳು ಸಮುದ್ರಪಾಲಾಗಿದೆ. ಉಚ್ಚಿಲ ಭಾಗದಲ್ಲಿ ಸಮುದ್ರ ತೀರದ ಮನೆಗಳಿಗೆ ಅಪ್ಪಳಿಸಿ, ಹಲವು ಮರಗಳು ಸಮುದ್ರಪಾಲಾಗಿವೆ. ಸಮುದ್ರತೀರದಲ್ಲಿ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಭಾರೀ ಗಾತ್ರದ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿವೆ. ಉಳ್ಳಾಲ ಬೀಚ್, ಮೊಗವೀರಪಟ್ನ, ಸುಭಾಷನಗರ, ಕೈಕೋ, ಕಿಲೆರಿಯಾನಗರ, ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ

ಉಳ್ಳಾಲ : ಕಾಲು ಸಂಕಕ್ಕೆ ಬಿದ್ದು ವ್ಯಕ್ತಿ ಸಾವು

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಾರ್ಭಟ ಮುಂದುವರೆದಿದ್ದು ಉಳ್ಳಾಲ ತಾಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ‌ ಪಿಲಾರು ಎಂಬಲ್ಲಿ ಮನೆ ಸಂಪರ್ಕದ ಮೋರಿ‌ ದಾಟುವ ಸಂದರ್ಭ ವ್ಯಕ್ತಿಯೋರ್ವರು ಆಯ ತಪ್ಪಿ ಬಿದ್ದು ಮಳೆ ನೀರಿಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ಬಾಡಿಗೆ ಮನೆ ನಿವಾಸಿ ಸುರೇಶ್ ಗಟ್ಟಿ‌(52)ಮೃತ ವ್ಯಕ್ತಿ. ಸುರೇಶ್ ಗಟ್ಟಿ ಅವರು ವೃತ್ತಿಯಲ್ಲಿ ಪೈಂಟರ್ ಆಗಿದ್ದು ಕೆಲಸ

ಆಂಬ್ಯುಲೆನ್ಸ್ ಢಿಕ್ಕಿ : ಪಾದಚಾರಿ ಮೃತ್ಯು

ಉಳ್ಳಾಲ: ಆಂಬ್ಯುಲೆನ್ಸ್ ಢಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ತಲಪಾಡಿ ಮರೋಳಿ ಬಾರ್ ಎದುರುಗಡೆ ಸಂಭವಿಸಿದೆ. ಕಾಸರಗೋಡು ಮಂಗಲ್ಪಾಡಿ ಹೇರೂರು ನಿವಾಸಿ ಫ್ರಾನ್ಸಿಸ್ ಡಿಸೋಜ (62) ಮೃತರು. ಮನೆಯಿಂದ ತಲಪಾಡಿಗೆ ಬಂದಿದ್ದ ಫ್ರಾನ್ಸಿಸ್, ಮರೋಳಿ ಬಾರ್ ಎದುರುಗಡೆಯಿಂದ ವಾಪಸ್ಸು ಮನೆಗೆ ತೆರಳಲು ರಾಷ್ಟ್ರೀಯ ಹೆದ್ದಾರಿಯನ್ನು ದಾಟುವ ಸಂದರ್ಭ ಕೇರಳದಿಂದ ಮಂಗಳೂರು ಕಡೆಗೆ ಅಮಿತ ವೇಗದಲ್ಲಿ ಬರುತ್ತಿದ್ದ ಖಾಲಿ ಆಂಬ್ಯುಲೆನ್ಸ್ ಫ್ರಾನ್ಸಿಸ್ ಅವರಿಗೆ ಢಿಕ್ಕಿ

ಉಳ್ಳಾಲ ಬೀಚ್ ಸಮುದ್ರಪಾಲಾಗುತ್ತಿದ್ದ ಯುವಕನ ರಕ್ಷಣೆ

ಉಳ್ಳಾಲ: ಸಮುದ್ರ ವಿಹಾರಕ್ಕೆ ತೆರಳಿದ್ದ ಬೆಂಗಳೂರು ಮೂಲದ ಯುವಕ ಸಮುದ್ರದ ಭಾರೀ ಗಾತ್ರದ ಅಲೆಗಳ ನಡುವೆ ಸಿಲುಕಿದ್ದು, ಪ್ರಾಣಾಪಾಯದಲ್ಲಿದ್ದ ಆತನನ್ನು ಮೊಗವೀರಪಟ್ನದ ಶಿವಾಜಿ ಜೀವರಕ್ಷಕ ದಳದ ಸದಸ್ಯರು ರಕ್ಷಿಸಿರುವ ಘಟನೆ ಇಂದು ಉಳ್ಳಾಲ ಬೀಚ್ ನಲ್ಲಿ ನಡೆದಿದೆ. ಬೆಂಗಳೂರು ಯಶವಂತಪುರ ನಿವಾಸಿ ನಿಝಾಮ್ (35) ಎಂಬಾತನನ್ನು ರಕ್ಷಿಸಲಾಗಿದೆ. ಈತನನ್ನು ಮೊಗವೀರಪಟ್ನ ಶಿವಾಜಿ ಜೀವರಕ್ಷಕ ದಳದ ವಿಕ್ರಮ್ ಪುತ್ರನ್, ಶ್ರಾವಣ್, ದೀಕ್ಷಿತ್ ಬಂಗೇರ, ದೀಕ್ಷಿತ್ ಚಂದನ್,