ಉಳ್ಳಾಲ: ನಮ್ಮೂರ ಸನ್ಮಾನ ಸಮಿತಿಯಿಂದ ಸ್ಪೀಕರ್ ಯುಟಿ ಖಾದರ್‍ಗೆ ಸನ್ಮಾನ

ಉಳ್ಳಾಲ: ನಮ್ಮೂರ ಸನ್ಮಾನ ಸಮಿತಿ ದೇರಳಕಟ್ಟೆ ಆಶ್ರಯದಲ್ಲಿ ಸ್ಪೀಕರ್ ಯುಟಿ ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮವು ದೇರಳಕಟ್ಟೆ ಸಿಟಿ ಗ್ರೌಂಡ್‍ನಲ್ಲಿ ನಡೆಯಿತು.

ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ.ಶಾಂತರಾಂ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,
ಒಬ್ಬ ಶಾಸಕನಾಗಿ, ಮಂತ್ರಿ ಆಗಿ ಜನರ ಒಳಿತಿಗಾಗಿ ಏನನ್ನು ಮಾಡಲು ಸಾಧ್ಯ ಎಂಬುದು ಖಾದರ್ ಅವರ ಮೂಲಕ ತಿಳಿದು ಕೊಳ್ಳಲು ಸಾಧ್ಯ. ಗ್ರಾಮ ಅಭಿವೃದ್ಧಿ ಆಗಲು ಸ್ಪೀಕರ್ ಯುಟಿ ಖಾದರ್ ಕಾರಣ ಎಂದು ಹೇಳಿದರು.

ಸ್ಪೀಕರ್ ಯುಟಿ ಖಾದರ್ ಮಾತನಾಡಿ, ನಾನು ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತು ಕೊಳ್ಳಲು ನನ್ನ ಕ್ಷೇತ್ರದ ಮತದಾರರು ಕಾರಣರು.ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ. ಶಾಂತಿ ಸೌಹಾರ್ದತೆ, ಪ್ರೀತಿ ವಿಶ್ವಾಸ ದೊಂದಿಗೆ ನಮ್ಮ ಬದುಕು ಇರಬೇಕು. ಎಂದರು.

ಈ ಸಂದರ್ಭದಲ್ಲಿ ಸ್ಪೀಕರ್ ಯುಟಿ ಖಾದರ್ ಮತ್ತು ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಿ.ಎಂ.ಸತ್ತಾರ್ ಅವರನ್ನು ಸನ್ಮಾನಿಸಲಾಯಿತು.ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಬಾವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರಾವಳಿ ಪ್ರಾಧಿಕಾರ ದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ತಾ.ಪಂ. ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಸದಸ್ಯ ಸುರೇಶ್ ಚೌಟ, ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ,ಸಿ.ಎಂ ಸತ್ತಾರ್,ಉದ್ಯಮಿ ಸಿ.ಎಂ.ಫಾರೂಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.