HomeFresh NewsUllala - ಯುವಕ ಮಂಡಲ ಇರಾ ; ವನಮಹೋತ್ಸವ ಹಾಗು ಆಟಿದಕೂಟ ಕಾರ್ಯಕ್ರಮ

Ullala – ಯುವಕ ಮಂಡಲ ಇರಾ ; ವನಮಹೋತ್ಸವ ಹಾಗು ಆಟಿದಕೂಟ ಕಾರ್ಯಕ್ರಮ

ಯುವಕ ಮಂಡಲ ಇರಾ ಇದರ ಸುವರ್ಣ ಮಹೋತ್ಸವದ ಅಂಗವಾಗಿ ವನಮಹೋತ್ಸವ ಹಾಗು ಆಟಿದಕೂಟ ಇರಾ ಬಂಟರ ಭವನದಲ್ಲಿ ನಡೆಯಿತು. ವನಮಹೋತ್ಸವ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಮಾಧವ ಉಳ್ಳಾಲ ಅವರ ಮಾರ್ಗದರ್ಶನದಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಜಯರಾಮ್ ಪೂಜಾರಿ ಹಾಗು ಗಣೇಶ್ ಕೊಟ್ಟಾರಿ ಗಿಡ ನಡುವ ಮೂಲಕ ಉದ್ಘಾಟಿಸಿದರು.

ನಂತರ ಆಟಿದಕೂಟ ಕಾರ್ಯಕ್ರಮ ಉದ್ಘಾಟಿಸಿದ ಸೈಂಟ್ ಆಗ್ನೆಸ್ ಕಾಲೀಜಿನ ಪ್ರಾಧ್ಯಾಪಕರೂ, ಪ್ರಖರ ವಾಗ್ಮಿಯೂ ಆದ ಡಾ | ಅರುಣ್ ಉಳ್ಳಾಲ್ ತುಳು ಸಂಸ್ಕೃತಿಯ ಪರಿಚಯ ನೀಡಿ ಆಟಿದ ಕೂಟದ ಹಿನ್ನೆಲೆ ಹಾಗು ಮಹತ್ವವನ್ನು ಸಾರಿದರು. ಜತೆಗೆ ಇರಾ ಯುವಕ ಮಂಡಲದ ಈ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಈ ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಶ್ರೀ ರಾಜೇಶ್, ಯುವಕ ಮಂಡಲ ಸುವರ್ಣ ಮಹೋತ್ಸವದ ಗೌರವಾಧ್ಯಕ್ಷರಾದ ಶ್ರೀ ಪಿ. ಎಂ. ಕೊಡಂಗೆ, ಪ್ರಧಾನ ಸಂಚಾಲಕರಾದ ಶ್ರೀ ಜಗದೀಶ್ ಶೆಟ್ಟಿ ಇರಾಗುತ್ತು ಹಾಗು ಊರಿನ ಗಣ್ಯರು ಭಾಗವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಟೀಲು ಮೇಳದ ಸಂಚಾಲಕರೂ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರೂ ಆದ ಶ್ರೀ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಪಿ ಎಂ ಕೊಡಂಗೆ, ಪ್ರಧಾನ ಸಂಚಾಲಕರಾದ ಶ್ರೀ ಜಗದೀಶ್ ಶೆಟ್ಟಿ ಇರಾಗುತ್ತು, ಅಧ್ಯಕ್ಷರಾದ ಶ್ರೀ ಜಯರಾಮ್ ಪೂಜಾರಿ ಸೂತ್ರಬೈಲು, ಕಾರ್ಯದರ್ಶಿಗಳಾದ ಶ್ರೀ ಸುರೇಶ್ ರೈ ಪರ್ಲಡ್ಕ, ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಗಣೇಶ್ ಎಸ್ ಅತ್ತಾವರ, ಕಾರ್ಯದರ್ಶಿಗಳಾದ ಶ್ರೀ ಜಯರಾಜ್ ಶೆಟ್ಟಿ ಕುಂಡಾವು ಉಪಸ್ಥಿತರಿದ್ದರು. ಸಂಘದ ಹಿರಿಯ ಸದಸ್ಯರಾದ ಶ್ರೀ ಸುರೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು, ಶ್ರೀ ಪುಷ್ಪರಾಜ ಕುಕ್ಕಾಜೆ ಸ್ವಾಗತಿಸಿದರು, ಶ್ರೀ ವೈ ಬಿ ಸುಂದರ್ ಹಾಗು ಯತಿರಾಜ್ ಶೆಟ್ಟಿ ಸಂಪಿಲ ವಂದಿಸಿದರು. ಪುಷ್ಪರಾಜ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments