Home Posts tagged #utkhader

ಮಂಗಳೂರು: ಉಳ್ಳಾಲಕ್ಕೆ ಮೂಲಸೌಕರ್ಯ ಒದಗಿಸಲು ರೋಡ್ ಮ್ಯಾಪ್, ಸ್ಪೀಕರ್ ಯು.ಟಿ. ಖಾದರ್

ಉಳ್ಳಾಲ ಕ್ಷೇತ್ರವನ್ನು ಮುಂದಿನ 30-40 ವರ್ಷಗಳ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕುಡಿಯುವ ನೀರು, ರಸ್ತೆ, ವಿದ್ಯುತ್ ಮೂಲಭೂತ ಸೌಕರ್ಯವನ್ನು ಒದಗಿಸುವ ಮೂಲಕ, ಮಂಗಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಸಿದ್ಧಪಡಿಸಲಾಗುವುದು ಎಂದು ವಿಧಾನ ಸಭೆಯ ಸ್ಪೀಕರ್, ಸ್ಥಳೀಯ ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ. ಅವರು ನಗರದ ಸರ್ಕ್ಯೂಟ್

ಉಳ್ಳಾಲ: ನಮ್ಮೂರ ಸನ್ಮಾನ ಸಮಿತಿಯಿಂದ ಸ್ಪೀಕರ್ ಯುಟಿ ಖಾದರ್‍ಗೆ ಸನ್ಮಾನ

ಉಳ್ಳಾಲ: ನಮ್ಮೂರ ಸನ್ಮಾನ ಸಮಿತಿ ದೇರಳಕಟ್ಟೆ ಆಶ್ರಯದಲ್ಲಿ ಸ್ಪೀಕರ್ ಯುಟಿ ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮವು ದೇರಳಕಟ್ಟೆ ಸಿಟಿ ಗ್ರೌಂಡ್‍ನಲ್ಲಿ ನಡೆಯಿತು. ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ.ಶಾಂತರಾಂ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಒಬ್ಬ ಶಾಸಕನಾಗಿ, ಮಂತ್ರಿ ಆಗಿ ಜನರ ಒಳಿತಿಗಾಗಿ ಏನನ್ನು ಮಾಡಲು ಸಾಧ್ಯ ಎಂಬುದು ಖಾದರ್ ಅವರ ಮೂಲಕ ತಿಳಿದು ಕೊಳ್ಳಲು ಸಾಧ್ಯ. ಗ್ರಾಮ ಅಭಿವೃದ್ಧಿ ಆಗಲು ಸ್ಪೀಕರ್ ಯುಟಿ ಖಾದರ್ ಕಾರಣ ಎಂದು

ಉಳ್ಳಾಲ: ಬಸ್ಸು ಮಾಲಕರ ಒಕ್ಕೂಟದ ವತಿಯಿಂದ ಸ್ಪೀಕರ್ ಯು.ಟಿ. ಖಾದರ್ ಗೆ ಸನ್ಮಾನ

ಮಂಗಳೂರು ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ವತಿಯಿಂದ ಕರ್ನಾಟಕ ವಿಧಾನ ಸಭಾಧ್ಯಕ್ಷ ಯು. ಟಿ ಖಾದರ್ ವರವರಿಗೆ ಸನ್ಮಾನಿಸಲಾಯಿತು. ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಮಾತನಾಡಿ, ಯು.ಟಿ ಖಾದರ್ ರವರು ಸರ್ವ ಧರ್ಮಿಯರಿಗೆ ಪ್ರೀತಿಪಾತ್ರರಾಗಿದ್ದು. ಸರ್ವರ ಮನ ಗೆಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು. ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ಗೌರವಾಧ್ಯಕ್ಷ ಹಾಜಿ ಎನ್.ಎಸ್ ಕರೀಂ, ಉಪಾಧ್ಯಕ್ಷ ಶಬರೀಶ್ ಶೆಟ್ಟಿ, ಕೋಶಾಧಿಕಾರಿ

ಯುವಕರಿಂದ ಸಮಾಜ ಕಟ್ಟುವ ಕೆಲಸವಾಗಲಿ: ಸ್ಪೀಕರ್ ಯು.ಟಿ. ಖಾದರ್

ಪುತ್ತೂರು: ಯುವಕರು ಸಮಾಜ ಕಟ್ಟಬೇಕು ಹೊರತು ಬಿಕ್ಕಟ್ಟು ಸೃಷ್ಠಿಸಬಾರದು. ಅದೇ ರೀತಿ ಸಮಸ್ಯೆಯನ್ನು ಬಗೆಹರಿಸಬೇಕು ಹೊರತು ಸಮಸ್ಯೆಯನ್ನು ಸೃಷ್ಠಿಸುವ ಕೆಲಸ ಮಾಡಬಾರದು ಎಂದು ನೂತನ ಸ್ಪೀಕರ್ ಯು.ಟಿ. ಖಾದರ್ ಹೇಳಿದರು. ಅವರು ಪುತ್ತೂರಿನ ಮುಸ್ಲಿಂ ಸಮುದಾಯ ಒಕ್ಕೂಟದ ವತಿಯಿಂದ ಪುರಭವನದಲ್ಲಿ ನೂತನ ಸ್ಪೀಕರ್ ಯು.ಟಿ. ಖಾದರ್ ಮತ್ತು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಯುವ ಸಮುದಾಯ ಉತ್ತಮ ನಡೆಯೊಂದಿಗೆ ಮುಂದುವರಿದಲ್ಲಿ

ಜೂನ್ 11 ರಂದು : ವಿಧಾನಸಭೆಯ ಸ್ಪೀಕರ್ ಖಾದರ್ ಅವರಿಗೆ ಪೌರ ಸನ್ಮಾನ

ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಅವರಿಗೆ ಉಳ್ಳಾಲ ನಗರ ಪೌರ ಸನ್ಮಾನ ಸಮಿತಿ ಆಶ್ರಯದಲ್ಲಿ ಪೌರ ಸನ್ಮಾನ ಕಾರ್ಯಕ್ರಮ ಜೂನ್ 11 ರಂದು ಸಂಜೆ 6 ಗಂಟೆಗೆ ಉಳ್ಳಾಲ ನಗರ ಸಭೆ ಮೈದಾನದಲ್ಲಿ ನಡೆಯಲಿದೆ ಎಂದು ಪೌರ ಸನ್ಮಾನ ಸಮಿತಿ ಸಮಿತಿ ಅಧ್ಯಕ್ಷ ಈಶ್ವರ್ ಉಳ್ಳಾಲ ಹೇಳಿದರು. ಉಳ್ಳಾಲ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ, ಸಚಿವರಾಗಿ

ಆಪ್ತನ ಸಹೋದರನ ಅಂತಿಮಯಾತ್ರೆಗೆ ಹೆಗಲುಕೊಟ್ಟ ಸ್ಪೀಕರ್ ಖಾದರ್

ಉಳ್ಳಾಲ: ಅಕಾಲಿಕವಾಗಿ ಸಾವನ್ನಪ್ಪಿದ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರ ಸಹೋದರ ಶರತ್ ಕಾಜವ(55) ಅವರ ಅಂತಿಮಯಾತ್ರೆಯಲ್ಲಿ ಭಾಗವಹಿಸಿದ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಶವಕ್ಕೆ ಹೆಗಲುಕೊಟ್ಟು ಮಾನವೀಯತೆ ಮೆರೆದರು. ಮುಡಿಪು ಮಿತ್ತಕೋಡಿ ನಿವಾಸಿ ಶರತ್ ಕಾಜವ ಇಂದು ನಸುಕಿನ ಜಾವ ಹೃದಯಾಘಾತಕ್ಕೊಳಗಾಗಿ ಅಕಾಲಿಕವಾಗಿ ಸಾವನ್ನಪ್ಪಿದ್ದರು. ವಿಚಾರ ಬೆಳಕಿಗೆ ಬರುತ್ತಿದ್ದಂತೆ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಪೂರ್ವನಿಗದಿ ಪಡಿಸಿದ

ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಸ್ಪೀಕರ್ ಖಾದರ್ ಭೇಟಿ

ಕಡಲ್ಕೊರೆತಕ್ಕೆ ವಿಪರೀತ ಹಾನಿಗೊಳಗಾಗುತ್ತಿದ್ದ ಉಚ್ಚಿಲ, ಬಟ್ಟಂಪಾಡಿ, ಸೀಗ್ರೌಂಡ್ ಪ್ರದೇಶಗಳಿಗೆ ರಾಜ್ಯ ವಿಧಾನ ಸಭೆಯ ಸ್ಪೀಕರ್, ಮಂಗಳೂರು ಶಾಸಕ ಯು. ಟಿ. ಖಾದರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅವರು ಜಿಲ್ಲಾಧಿಕಾರಿ ರವಿ ಕುಮಾರ್ ಎಮ್.ಆರ್ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಯು.ಟಿ. ಖಾದರ್ ಅವರು, ಅವರು ಈ ಹಿಂದೆ ಉಳ್ಳಾಲದ ಕೋಡಿ,ಕೋಟೆಪುರ,ಮೊಗವೀರಪಟ್ಣ,ಸುಭಾಷ್ ನಗರ, ಹಿಲೇರಿಯ ಮೊದಲಾದ

ಬಿ. ಜನಾರ್ದನ ಪೂಜಾರಿಯನ್ನು ಭೇಟಿಯಾದ ಯು.ಟಿ. ಖಾದರ್

ಬಂಟ್ವಾಳ: ಮಂಗಳೂರು ಶಾಸಕ ಯು.ಟಿ. ಖಾದರ್ ಅವರು ಬುಧವಾರ ಸಂಜೆ ಬಂಟ್ವಾಳದಲ್ಲಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಜನಾರ್ದನ ಪೂಜಾರಿಯವರು ನಮ್ಮ ಪಕ್ಷದ ಹಿರಿಯ ನಾಯಕರು. ತನ್ನ ವಿದ್ಯಾರ್ಥಿ ಜೀವನದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಿ. ಜನಾರ್ದನ ಪೂಜಾರಿಯವರು ಮಾರ್ಗದರ್ಶನ ಮಾಡಿದ್ದರು. ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಸಾಮಾಜಿಕ

ಉತ್ತಮ ಸಮಾಜ, ಸಾಮರಸ್ಯಕ್ಕಾಗಿ ಕಾಂಗ್ರೆಸ್‍ಗೆ ಮತ ಕೊಟ್ಟಿದ್ದಾರೆ: ಖಾದರ್

ಸತ್ಯ- ಅಸತ್ಯ, ಪ್ರಚಾರ-ಅಪಪ್ರಚಾರದ ಬಗ್ಗೆ ರಾಜ್ಯದಲ್ಲಿ ಚುನಾವಣೆ ಆಗಿತ್ತು. ರಾಜ್ಯದ ಜನತೆ ಸತ್ಯಕ್ಕೆ ಜಯ ಕೊಟ್ಟಿದ್ದಾರೆ. ಜನರು ಬೆಲೆಯೇರಿಕೆ, ದ್ವೇಷ ಭಾವನೆಯಿಂದ ಕಂಗೆಟ್ಟು ನಿರಾಶರಾಗಿದ್ದರು. ಉತ್ತಮ ಸಮಾಜ, ಸಾಮರಸ್ಯಕ್ಕಾಗಿ ಕಾಂಗ್ರೆಸಿಗೆ ಮತ ಕೊಟ್ಟಿದ್ದಾರೆ. ಕರಾವಳಿಯಲ್ಲಿ ಜನರ ವಿಶ್ವಾಸಗಳಿಸಬೇಕಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಡಿದರು. ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ವ್ಯತ್ಯಾಸವನ್ನು

ಸರ್ಕಾರ ಮಹತ್ವವಿಲ್ಲದ ಬಜೆಟ್ ಮಂಡಿಸಿದೆ : ಯು.ಟಿ. ಖಾದರ್

ರಾಜ್ಯದ ಸಂಸದರ ಮೌನ, ಸರಕಾರದ ಅಸಹಾಯಕತೆ, ಕೇಂದ್ರ ಸರಕಾರದ ಮಲತಾಯಿ ಧೋರಣೆಯಿಂದಾಗಿ ರಾಜ್ಯದ ಜನತೆ ಸಾಲದ ಹೊರೆಯಲ್ಲಿ ಹೊತ್ತುಕೊಳ್ಳುವಂತಾಗಿದೆ. ರಾಜ್ಯ ಸರಕಾರ ಮಂಡಿಸಿದ್ದು ಸುಲಿಗೆ, ಸಾಲದ ಬಜೆಟ್ ಆಗಿದೆ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊನೆಯ ಉಸಿರೆಳೆಯುತ್ತಿರುವ ಸರಕಾರ ಮಹತ್ವವಿಲ್ಲದ ಬಜೆಟ್ ಮಂಡಿಸಿದ್ದು, ಜನತೆಯನ್ನು ಸಾಲದಲ್ಲಿ ಮುಳುಗಿಸಿದೆ